Advertisement

1 ಕೆ.ಜಿ. ಟೀ ಪುಡಿಗೆ 1 ಲಕ್ಷ ರೂ!

10:06 AM Jun 21, 2022 | Team Udayavani |

ಗುವಾಹಾಟಿ: ಅಸ್ಸಾಂನ ಚಹಾ ಪುಡಿಯೊಂದು ಕೆ.ಜಿ.ಗೆ 1 ಲಕ್ಷ ರೂ. ಬೆಲೆಯಲ್ಲಿ ಮಾರಾಟವಾಗಿ ದಾಖಲೆ ನಿರ್ಮಿಸಿದೆ.

Advertisement

ಈ ವರ್ಷ ರಾಜ್ಯದಲ್ಲಿ ಅತೀ ಹೆಚ್ಚು ಬೆಲೆಗೆ ಹರಾಜಾದ ಟೀ ಪುಡಿ ಇದಾಗಿದೆ. ಗೊಲಾಘಾಟ್‌ ಜಿಲ್ಲೆಯ ಜೊರ್ಹಾಟ್‌ ಚಹಾ ಹರಾಜು ಕೇಂದ್ರದಲ್ಲಿ ಸೋಮವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ “ಪಭೋಜನ್‌ ಗೋಲ್ಡ್‌ ಟೀ’ ಪುಡಿಯನ್ನು ಹರಾಜು ಮಾಡಲಾಗಿದೆ.

ಪಭೋಜನ್‌ ಆರ್ಗ್ಯಾನಿಕ್‌ ಟೀ ಎಸ್ಟೇಟ್‌ ತಯಾರಿಸಿರುವ ಈ ಟೀ ಪುಡಿಯನ್ನು ಅಸ್ಸಾಂ ಈಶಾ ಟೀ ಸಂಸ್ಥೆ ಖರೀದಿಸಿದೆ. ಈ ಟೀ ಪುಡಿ ಅತ್ಯಂತ ವಿಶೇಷವಾಗಿದ್ದು, ಈ ವರ್ಷ ಒಂದೇ ಕೆ.ಜಿ. ಪುಡಿ ತಯಾರಿಸಲಾಗಿತ್ತು ಎಂದು ಟೀ ಎಸ್ಟೇಟ್‌ನವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next