Advertisement

7 ಕೆಜಿ ತೂಕದ ಅಪರೂಪದ ಉಲ್ಕೆಯ ಆವಿಷ್ಕಾರ

06:45 PM Jan 19, 2023 | Team Udayavani |

ವಾಷಿಂಗ್ಟನ್‌: ಅಮೆರಿಕ ಮತ್ತು ಬೆಲ್ಜಿಯಂನ ವಿಜ್ಞಾನಿಗಳು ಅಂಟಾರ್ಕ್ಟಿಕಾದಲ್ಲಿ 7.6 ಕೆಜಿ ತೂಕದ ಅತ್ಯಂತ ಅಪರೂಪದ ಉಲ್ಕೆ ಸೇರಿದಂತೆ ಒಟ್ಟು 5 ಹೊಸ ಉಲ್ಕಾ ಶಿಲೆಗಳನ್ನು ಪತ್ತೆಹಚ್ಚಿದ್ದಾರೆ.

Advertisement

ಅಂಟಾರ್ಕ್ಟಿಕಾ ಎನ್ನುವುದು ಜಗತ್ತಿನಲ್ಲೇ ಉಲ್ಕೆಗಳ ಬೇಟೆಗೆ ಪ್ರಶಸ್ತ ತಾಣ ಎಂದು ಪ್ರಸಿದ್ಧಿ ಪಡೆದಿದೆ. ಅಂಟಾರ್ಕ್ಟಿಕಾವು ಮರುಭೂಮಿ ಪ್ರದೇಶವಾಗಿದ್ದು, ಒಣ ಹವೆಯನ್ನು ಹೊಂದಿರುವ ಕಾರಣ ಉಲ್ಕೆಗಳು ಸುಲಭವಾಗಿ ಗೋಚರಿಸುತ್ತವೆ. ಈ ವಿಜ್ಞಾನಿಗಳು ಅಂಟಾರ್ಕ್ಟಿಕಾದ ಬ್ಲೂ ಐಸ್‌ ಪ್ರದೇಶದ ಆಳದಲ್ಲಿ ಉಲ್ಕೆಗಳನ್ನು ಪತ್ತೆಹಚ್ಚಿದ್ದಾರೆ.

ಐದು ಉಲ್ಕೆಗಳ ಪೈಕಿ ಒಂದು 7.6 ಕೆ.ಜಿ. ದ್ರವ್ಯರಾಶಿ ಹೊಂದಿದೆ. ಕಳೆದೊಂದು ಶತಮಾನದಲ್ಲಿ ಅಂಟಾರ್ಕ್ಟಿಕಾದಲ್ಲಿ ಸುಮಾರು 45 ಸಾವಿರ ಉಲ್ಕೆಗಳು ಪತ್ತೆಯಾಗಿವೆ. ಈ ಪೈಕಿ ಕೇವಲ ನೂರರಷ್ಟು ಉಲ್ಕೆಗಳು ಮಾತ್ರ ಈ ಗಾತ್ರದ್ದು. ವಿಜ್ಞಾನಿಗಳು ಉಪಗ್ರಹ ಚಿತ್ರಗಳನ್ನು ಆಧರಿಸಿ ಹೊಸ ಉಲ್ಕೆಗಳಿರುವ ಪ್ರದೇಶಗಳನ್ನು ಕಂಡುಕೊಂಡಿದ್ದಾರೆ.

ದೊಡ್ಡ ಗಾತ್ರದ ಅಪರೂಪದ ಉಲ್ಕೆಗಳ ಮೂಲಕ ನಾವು ಭೂಮಿಯ ಸೃಷ್ಟಿಯ ಕುರಿತು ಅಧ್ಯಯನ ನಡೆಸಲು ಸಾಧ್ಯವಾಗಲಿದೆ ಎಂದೂ ಅವರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next