Advertisement

ಪ್ರೀತಿಯಲ್ಲಿ ಬಿದ್ದ ನಟಿ  ಶಿಲ್ಪಾ ಶೆಟ್ಟಿ ಸಹೋದರಿ

07:28 PM Sep 25, 2021 | Team Udayavani |

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್ ಪರಸ್ಪರ ಪ್ರೀತಿಸುತ್ತಿದ್ದಾರೆ. ತಮ್ಮ ಪ್ರೀತಿ ವಿಚಾರವನ್ನು ಈ ಜೋಡಿ ಬಹಿರಂಗ ಪಡಿಸಿದೆ.

Advertisement

ಹಿಂದಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಾಗಿದ್ದ ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್ ಜೋಡಿ ಎಲ್ಲರ ಗಮನ ಸೆಳೆದಿತ್ತು. ಇವರಿಬ್ಬರು ಪ್ರೀತಿಸುತ್ತಿರಬಹುದು ಎನ್ನುವ ರೂಮರ್ ಕೇಳಿ ಬಂದಿತ್ತು. ಇದೀಗ ಅದು ನಿಜವಾಗಿದೆ.

ಅಂದಹಾಗೆ ಇನ್ಸ್ಟಾಗ್ರಾಮ್ ನಲ್ಲಿ ಶಮಿತಾ ಮತ್ತು ರಾಕೇಶ್ ಇಬ್ಬರು ಕೈ ಕೈ ಹಿಡಿದುಕೊಂಡಿರುವ ಫೋಟೋ ಶೇರ್ ಮಾಡಿದ್ದಾರೆ. ಫೋಟೋ ಜೊತೆಗೆ “ಯು ಅಂಡ್ ಐ” ಎಂದು ಬರೆದು ಹಾರ್ಟ್ ಇಮೋಜಿ ಹಾಕಿದ್ದಾರೆ. ಜೊತೆಗೆ ‘ಶರಾ’ ಎಂದು ಬರೆದುಕೊಂಡಿದ್ದಾರೆ. ‘ಶ’ ಎಂದರೆ ಶಮಿತಾ, ರಾ ಎಂದರೆ ರಾಕೇಶ್. ಇದೀಗ ‘ಶರಾ’ ಜೋಡಿ ಅಭಿಮಾನಿಗಳ ಗಮನಸೆಳೆಯುತ್ತಿದ್ದಾರೆ

Advertisement

ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಾಕೇಶ್, ಶಮಿತಾ ಶೆಟ್ಟಿ ಬಗ್ಗೆ ಸಾಫ್ಟ್ ಕಾರ್ನರ್ ಇದೆ ಎಂದು ಹೇಳಿದ್ದರು. ಇಬ್ಬರ ನಡುವಿನ ಬಾಂಧವ್ಯ ಸ್ನೇಹಕ್ಕಿಂತ ಸ್ವಲ್ಪ ಹೆಚ್ಚು ಎಂದು ಹೇಳಿದ್ದರು. ಶಮಿತಾ ತುಂಬಾ ವಿಶೇಷ ನನ್ನ ಜೀವನದಲ್ಲಿ. ನನ್ನೊಂದಿಗೆ ಮಾತನಾಡಲು, ಸಮಯ ಕಳೆಯಲು, ಸವಂಹನ ಮಾಲು ಇಷ್ಟಪಡುವ ವ್ಯಕ್ತಿ ಎಂದು ರಾಕೇಶ್ ಹೇಳಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next