Advertisement

ಅಪ್ರಾಪ್ತೆ ಅಪಹರಿಸಿ ಅತ್ಯಾಚಾರ; ಆರೋಪಿ ಸೆರೆ

04:04 PM Jun 12, 2021 | Team Udayavani |

ಹುಬ್ಬಳ್ಳಿ: ಅಪಹರಣಕ್ಕೊಳಗಾಗಿದ್ದ ಅಪ್ರಾಪ್ತೆಯನ್ನು ಬೆಂಡಿಗೇರಿ ಪೊಲೀಸರು ಪತ್ತೆ ಮಾಡಿದ್ದಲ್ಲದೆ, ಅಪಹರಿಸಿ ಅತ್ಯಾಚಾರ ಮಾಡಿದ್ದವನನ್ನು ಬಂ ಧಿಸಿದ್ದಾರೆ.

Advertisement

ಸಂದೀಪ ಸಾಳುಂಕೆ ಬಂಧಿತನಾಗಿದ್ದಾನೆ. ಈತ ಬುಧವಾರ ಬೆಳಗ್ಗೆ ನಗರದ ಹೊರ ವಲಯದ ಹೊಸ ಗಬ್ಬೂರ ಹತ್ತಿರ ಅಪ್ರಾಪ್ತೆಯನ್ನು ಪುಸಲಾಯಿಸಿ ಅಪಹರಿಸಿಕೊಂಡು ಹೋಗಿದ್ದ. ಈ ಕುರಿತು ಬಾಲಕಿಯ ತಂದೆ ಬೆಂಡಿಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಠಾಣೆಯ ಇನ್ಸ್ಪೆಕ್ಟರ್‌ ಶ್ಯಾಮರಾಜ ಸಜ್ಜನ ಮತ್ತು ಸಿಬ್ಬಂದಿ ತಂಡ ಹಿರಿಯ ಅಧಿ ಕಾರಿಗಳ ಮಾರ್ಗದರ್ಶನದಲ್ಲಿ ಬಾಲಕಿ ಪತ್ತೆ ಮಾಡಿದ್ದಲ್ಲದೆ, ಕೃತ್ಯವೆಸಗಿದ್ದ ಸಂದೀಪನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ವಿಚಾರಣೆ ವೇಳೆ ಬಂಧಿತನು ಅಪಹರಣ ಮಾಡಿದ್ದಲ್ಲದೆ ಅತ್ಯಾಚಾರ ಎಸಗಿದ್ದಾಗಿ ತಿಳಿದು ಬಂದಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next