Advertisement

ಆಹಾರ ಧ್ಯಾನ ಕಿಟ್‌ಗಾಗಿ ದಿಢೀರ್‌ ಪ್ರತಿಭಟನೆ

12:23 PM Jan 22, 2022 | Team Udayavani |

ಲಿಂಗಸುಗೂರು: ಪುಡ್‌ ಕಿಟ್‌ ಸಮರ್ಪಕವಾಗಿ ಹಂಚಿಕೆ ಮಾಡಿಲ್ಲವೆಂದು ಆರೋಪಿಸಿ ಎಸ್‌ಡಿಎಂಸಿ ಅಧ್ಯಕ್ಷ ನೇತೃತ್ವದಲ್ಲಿ ವಿದ್ಯಾರ್ಥಿಗಳು ದಿಢೀರ್‌ ಮುಷ್ಕರ ನಡೆಸಿದ ಘಟನೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ನಡೆದಿದೆ.

Advertisement

ಕಳೆದ ಮಾರ್ಚ್‌ ತಿಂಗಳ ಕೋವಿಡ್‌ ಸಂದರ್ಭದಲ್ಲಿ ಬಿಸಿಯೂಟ ಬಂದ್‌ ಮಾಡಿ ಅದರ ಬದಲು ವಿದ್ಯಾರ್ಥಿಗಳಿಗೆ ಪುಡ್‌ ಕಿಟ್‌ ವಿತರಣೆ ಮಾಡುವ ವ್ಯವಸ್ಥೆಯನ್ನು ಸರ್ಕಾರ ಜಾರಿ ಮಾಡಿತ್ತು. ಆ ಸಂದರ್ಭದಲ್ಲಿ ಈ ಶಾಲೆಯಲ್ಲಿ ಮುಖ್ಯಶಿಕ್ಷಕರು ಸರ್ಕಾರದಿಂದ ಮಂಜೂರಾದ ಪ್ರಮಾಣದಲ್ಲಿ ಪುಡ್‌ ಕಿಟ್‌ ವಿತರಣೆ ಮಾಡಿಲ್ಲ. ನಿಂಗಪ್ಪ ಪೂಜಾರಿ ಇಲ್ಲಿಗೆ ಉಪಪ್ರಾಚಾರ್ಯ ಅಧಿಕಾರ ವಹಿಸಿಕೊಂಡ ದಿನದಿಂದ ಈವರಿಗೂ ಶಾಲೆಯಲ್ಲಿ ಒಂದಿಲ್ಲೊಂದು ಸಮಸ್ಯೆಗಳು ಉದ್ಭವಿಸುತ್ತಿವೆ. ಇದರಿಂದ ವಿದ್ಯಾರ್ಥಿಗಳು ತೊಂದರೆ ಎದುರಿಸುವಂತಾಗಿದೆ ಎಂದು ಆರೋಪಿಸಿ ಎಸ್‌ ಡಿಎಂಸಿ ಅಧ್ಯಕ್ಷ ಮೌನೇಶ ಕರಡಕಲ್‌ ವಿದ್ಯಾರ್ಥಿಗಳೊಂದಿಗೆ ಮುಷ್ಕರ ನಡೆಸಿದರು.

ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿ ಸಿಪಿಐ ಮಹಾಂತೇಶ ಸಜ್ಜನ್‌, ಯಾವುದೇ ಪ್ರತಿಭಟನೆ ಮಾಡಬೇಕಾದರೆ ಇಲಾಖೆ ಅನುಮತಿ ಪಡೆಯಬೇಕು. ಶಾಲೆ ಸಮಸ್ಯೆಗಳನ್ನು ಮುಖ್ಯಶಿಕ್ಷಕರು ಅಥವಾ ಶಿಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸಿಕೊಳ್ಳಬೇಕು ಎಂದು ತಿಳಿಹೇಳಿ ತರಗತಿಗೆ ವಾಪಸ್‌ ಕಳುಹಿಸಿದರು.

ಕೋವಿಡ್‌ ಸಂದರ್ಭದಲ್ಲಿ ಆಹಾರ ಹಂಚಿಕೆ ಮಾಡಲು ಇಬ್ಬರು ಶಿಕ್ಷಕರಿಗೆ ಜವಾಬ್ದಾರಿ ವಹಿಸಲಾಗಿತ್ತು. ಮಕ್ಕಳ ಆಹಾರ ಧಾನ್ಯ ಕಾಳ ಸಂತೆಯಲ್ಲಿ ಮಾರಾಟ ಮಾಡುವ ಅಗತ್ಯತೆ ನನಗಿಲ್ಲ ಎಂದು ಮುಖ್ಯಶಿಕ್ಷಕ ನಿಂಗಪ್ಪ ಪೂಜಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next