ಮಾಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನ್ಯಾಕ್‌ಗೆ ಒಳಪಟ್ಟಿದ್ದು, ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು ಎಂದು ಶಾಸಕ ಎ.ಮಂಜುನಾಥ್ ಭರವಸೆ ನೀಡಿದರು. ಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಲೇಜು ನ್ಯಾಕ್‌ಗೆ ಒಳಪಟ್ಟಿರುವುದರಿಂದ ಸಂಸ್ಥೆಯಿಂದ ಅತಿಹೆಚ್ಚು ಅಂಕಗಳಿಸಬೇಕಿದೆ. ಸಂಸ್ಥೆಯನ್ನು “ಎ’ ಶ್ರೇಣಿಗೆ ಕೊಂಡೊಯ್ಯಲು ಪೂರಕ ಅಧ್ಯಯನ ಕೇಂದ್ರ, ಸೆಮಿನಾರ್ ಹಾಲ್, ಪೀಠೊಪಕರಣ, ಕಂಪ್ಯೂಟರ್, ಇ- ಗ್ರಂಥಾಲಯ ಸೇವೆ ಸೇರಿ ಅಗತ್ಯ ಸೌಲಭ್ಯ ಒದಗಿಸಬೇಕಿದೆ. ಗ್ರಂಥಾಲಯದ 3,600 ಪುಸ್ತಕ ಗಣಕೀಕರಣಗೊಳಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು.
ಮಾಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುಮಾರು 1,250 ವಿದ್ಯಾ ರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನಾವೆಲ್ಲರೂ ಸೇರಿ ಕಾಲೇಜು ಅಭಿವೃದ್ಧಿಗೆ ಶ್ರಮಿಸೋಣ ಎಂದರು. ಬೇಡಿಕೆ ಈಡೇರಿಸಿ: ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ, ಜೆರಾಕ್ಸ್ ಯಂತ್ರ, 4 ಪ್ರಿಂಟರ್‌ಗಳು, ಕ್ಯಾಂಟಿನ್, ಕಾಂಪೌಂಡ್, ಉದ್ಯಾನವನದ ಅಗತ್ಯವಿದೆ. ಶಾಸಕ ಎ.ಮಂಜು ನಾಥ್, ಕಾಲೇಜು ಅಭಿವೃದ್ಧಿಗೆ ಮನಸು ಮಾಡ ಬೇಕು.
ಸಿಡಿಸಿ ಸದಸ್ಯರು, ಮುಖಂಡರು, ದಾನಿಗಳು ಕೈಜೋಡಿಸಲು ಪ್ರಾಂಶುಪಾಲೆ ಶೈಲಜಾ ಮನವಿ ಮಾಡಿದರು. ಪ್ರಾಧ್ಯಾಪಕ ಜಗದೀಶ್ ನಡುವಿನಮಠ ಮಾತನಾಡಿದರು. ಸಿಡಿಸಿ ಸಮಿತಿ ಸದಸ್ಯ ಕೆ.ಕೃಷ್ಣ ಮೂರ್ತಿ, ಕೆ.ವಿ.ಬಾಲರಘು, ರಮೇಶ್, ರಾಜು, ಟಿ.ಜಿ.ವೆಂಕಟೇಶ್, ಖಂಡಪರಶು, ಪ್ರಾಧ್ಯಾಪಕ ಮಂಜುನಾಥ್, ಮಂಚಯ್ಯ, ಗುರುಮೂರ್ತಿ, ಪಿ.ನಂಜುಂಡ, ನವೀನ್ ಕುಮಾರ್, ಚಲುವ ರಾಜು, ಚಿದಾನಂದಸ್ವಾಮಿ, ಡಾ.ಭವಾನಿ, ಸೀಮಾ ಕೌಶಿರ್, ಜಿ.ವಿ. ಚಂದ್ರಪ್ರಭಾ, ಸುಷ್ಮಾ ಗ್ರಂಥಪಾಲಕಿ ರೂಪಶ್ರೀ ಇದ್ದರು.