Advertisement

ಅತ್ಯಾಚಾರಿ ತಂದೆಯನ್ನೇ ಬಡಿದು ಕೊಂದ ಪುತ್ರಿ

06:25 AM Oct 06, 2017 | |

ಲಕ್ನೋ: ಉತ್ತರ ಪ್ರದೇಶದ ಸಂಭಾಲ್‌ ಜಿಲ್ಲೆಯಲ್ಲಿ 16 ವರ್ಷದ ಪುತ್ರಿಯ ಮೇಲೆ ತಂದೆಯೇ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಇಷ್ಟು ಮಾತ್ರವಲ್ಲದೆ ಆತ್ಮರಕ್ಷಣೆಗಾಗಿ ಆತನನ್ನೇ ಕೊಂದು ಹಾಕಿದ ಘಟನೆ ನಡೆದಿದೆ. 

Advertisement

ಎರಡು ವರ್ಷಗಳಿಂದ ಪುತ್ರಿಯ ಮೇಲೆ ಅತ್ಯಾಚಾರ ಎಸಗುತ್ತಿದ್ದ ಎಂದು ಆರೋಪಿಸಲಾಗಿದೆ. ಘಟನೆ ಬಳಿಕ ಸಂತ್ರಸ್ತ ಬಾಲಕಿ 12 ವರ್ಷದ ಸಹೋದರಿ ಜತೆಗೆ ಠಾಣೆಗೆ ಬಂದು ಮಾಹಿತಿ ನೀಡಿದ್ದಳು ಎಂದು ಸಬ್‌ ಇನ್ಸೆ$³ಕ್ಟರ್‌ ಶಂಶಾದ್‌ ಅಲಿ ಹೇಳಿದ್ದಾರೆ. 

ಸೋಮವಾರ ರಾತ್ರಿ ಮದ್ಯ ಸೇವಿಸಿ ಅತ್ಯಾಚಾರ ಎಸಗಿದ್ದ. ಯಾರಿಗಾದರೂ ಈ ಮಾಹಿತಿ ನೀಡಿದಲ್ಲಿ ಆಕೆಯನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದ. ಅದೇ ದಿನ ಎರಡನೇ ಬಾರಿಗೆ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದಾಗ ಬಡಿಗೆಯಿಂದ ಬಡಿದಿದ್ದಳು. ರಕ್ತ ಸ್ರಾವ ತೀವ್ರವಾದದ್ದರಿಂದ ಆತ ಸ್ಥಳದಲ್ಲೇ ಅಸುನೀಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರ ಹೇಳಿಕೆಗಳನ್ನೂ ದಾಖಲಿಸಾಗಿದೆ ಎಂದಿದ್ದಾರೆ,
 

Advertisement

Udayavani is now on Telegram. Click here to join our channel and stay updated with the latest news.

Next