Advertisement

ಅತ್ಯಾಚಾರ: ಜಾಮೀನು ಅರ್ಜಿ ತಿರಸ್ಕೃತ

11:07 AM Mar 15, 2017 | Team Udayavani |

ಉಡುಪಿ: ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಪೋಕೊÕà ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಟಿ. ವೆಂಕಟೇಶ ನಾಯ್ಕ ಅತ್ಯಾಚಾರ ಪ್ರಕರಣಗಳ ಎರಡು  ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ್ದಾರೆ.

Advertisement

“ಕಾಲೇಜು ಯುವತಿಗೆ ಗರ್ಭ’
ಶಿರ್ವ ಪಿಲಾರು ಗ್ರಾಮದಲ್ಲಿ 2016ರ ಜೂನ್‌ನಲ್ಲಿ 16ರ ಹರೆಯದ ಯುವತಿಯ ಮೇಲೆ ಅತ್ಯಾಚಾರ ನಡೆಸಿ ಗರ್ಭವತಿಯನ್ನಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಅಜಯ್‌ ಸಾಲಿಯಾನ್‌ (23) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಧೀಶರು ವಜಾಗೊಳಿಸಿದ್ದಾರೆ. 

ಜ್ವರ ಬಂದಿದ್ದ ಹಿನ್ನೆಲೆಯಲ್ಲಿ ಯುವತಿಯು ಕಾಲೇಜಿಗೆ ರಜೆ ಹಾಕಿ ಮನೆಯಲ್ಲಿದ್ದ ಸಂದರ್ಭ ಆರೋಪಿಯು ಹೆದರಿಸಿ ಅತ್ಯಾಚಾರ ನಡೆಸಿದ್ದ ಎಂದು ಆರೋಪಿಸಲಾಗಿತ್ತು.

“ಮದುವೆಯಾಗುವುದಾಗಿ ನಂಬಿಸಿ ಸತತ ಅತ್ಯಾಚಾರ’
ಮಲ್ಪೆ ಪರಿಸರದ 14 ವರ್ಷದ ಬಾಲಧಿಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಸತತ ಅತ್ಯಾಚಾರಗೈದಿದ್ದ ಆರೋಪಿ ಮಲ್ಪೆ ಬಾಪುತೋಟದ ಸಂತೋಷ್‌ ನಾಯಕ್‌ನ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.

ಮೂಲತಃ ಬಳ್ಳಾರಿಯ ಹೂವಿನಹಡಗಲಿಯ ದಂಪತಿಯು ಮಲ್ಪೆ ಬಂದರಿನಲ್ಲಿ ಕೆಲಸ ಮಾಡಿಕೊಂಡು 14ರ ಪ್ರಾಯದ ಮಗಳೊಂದಿಗೆ ಕೊಳದಲ್ಲಿ ವಾಸ್ತವ್ಯ ಹೂಡಿದ್ದರು. ಬಾಲಧಿಕಿಯನ್ನು ಪರಿಚಯ ಮಾಡಿಕೊಂಡಿದ್ದ ಸಂತೋಷ್‌ ಕೆಲ ತಿಂಗಳ ಹಿಂದೆ ಆಕೆಯಲ್ಲಿ ನಿನ್ನನ್ನು ಮದುವೆಯಾಗುವುದಾಗಿ ತಿಳಿಸಿ ಬೇರೆ ಬೇರೆ ಕಡೆಗಳಿಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದ. ಗರ್ಭವತಿಯಾಗುವ ಹೆದರಿಕೆಯಿಂದ ಬಾಲಕಿ ಮಾತ್ರೆಗಳನ್ನು ತೆಗೆದುಕೊಂಡಿದ್ದಳು.

Advertisement

ಎರಡು ಪ್ರರಕಣಗಳಲ್ಲೂ ಜಿಲ್ಲಾ ಪೋಕೊÕà ವಿಶೇಷ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ (ಪೋಕೊÕà) ವಿಜಯ ವಾಸು ಪೂಜಾರಿ  ವಾದ ಮಂಡಿಸಿದ್ದರು. ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶರು ಜಾಮೀನು ಅರ್ಜಿಯನ್ನು ವಜಾಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next