Advertisement

ಬಾಲಕಿ ಅತ್ಯಾಚಾರ: ಸಂಬಂಧಿಯೇ ಅಪರಾಧಿ

11:28 AM Sep 09, 2017 | Team Udayavani |

ಬೆಂಗಳೂರು: ಮೂರು ವರ್ಷಗಳ ಹಿಂದೆ ಹುಳಿಮಾವು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಹದಿನಾರು ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ದಶರಥ್‌ ಅಪರಾಧಿ ಎಂದು ನಗರದ 51ನೇ ಸೆಷನ್ಸ್‌ ನ್ಯಾಯಾಲಯ ತೀರ್ಪು ನೀಡಿದೆ.

Advertisement

ಪ್ರಕರಣ ಸಂಬಂಧ ಸರ್ಕಾರಿ ಅಭಿಯೋಜಕರು ಒದಗಿಸಿದ್ದ ಸಾಕ್ಷ್ಯಾಧಾರಗಳು, ಮಂಡಿಸಿದ ವಾದ ಪುರಸ್ಕರಿಸಿರುವ ನ್ಯಾಯಾಲಯ, ಅತ್ಯಾಚಾರ ಪ್ರಕರಣದಲ್ಲಿ ದಶರಥ್‌ ಅಪರಾಧಿ ಎಂದು ಪರಿಗಣಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಅ.4ರಂದು ಪ್ರಕಟಿಸಲಿದೆ.

ಸಂಬಂಧಿಯೊಬ್ಬರ ಮಗಳನ್ನು 2014ರಲ್ಲಿ ಆಕೆ ಓದುತ್ತಿದ್ದ ಶಾಲೆಯ ಬಳಿಯಿಂದಲೇ ಅಪಹರಿಸಿದ್ದ ಆರೋಪಿ ದಶರಥ್‌, ಅತ್ಯಾಚಾರ ಎಸಗಿದ್ದ. ಈ ಸಂಬಂಧ ಸಂತ್ರಸ್ತೆಯ ಪೋಷಕರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ದಶರಥ್‌ನನ್ನು ಬಂಧಿಸಿ, ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next