Advertisement

‘ಕಟ್ಟಿಂಗ್‌ ಶಾಪ್‌’ನಲ್ಲಿ ರ್ಯಾಪ್‌ ಸಾಂಗ್‌!

04:31 PM May 16, 2022 | Team Udayavani |

ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸುತ್ತಿರುವ “ಕಟ್ಟಿಂಗ್‌ ಶಾಪ್‌’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ “ಅಯ್ಯೋ.. ಅಯ್ಯಯ್ಯೋ… ಹಲ್ಲಿದ್ದವ್ನಿಗೆ ಕಡ್ಲೆ ಇಲ್ಲ…’ ಎಂಬ ರ್ಯಾಪ್‌ ಸಾಂಗ್‌ ಅನ್ನು ಬಿಡುಗಡೆ ಮಾಡಿದೆ.  ಆಲ್‌ ಓ.ಕೆ ಹಾಡಿರುವ ಈ ಹಾಡಿಗೆ ಕೆ. ಬಿ ಪ್ರವೀಣ್‌ ಸಂಗೀತ ಸಂಯೋಜಿಸಿದ್ದು, ಈ ಹಾಡು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

Advertisement

ಅಂದಹಾಗೆ, ಸಿನಿಮಾ ಎಡಿಟರ್‌ಗಳ ಕುರಿತಾದ ಕಥೆ ಈ ಸಿನಿಮಾದಲ್ಲಿರುವುದರಿಂದ, ಸಿನಿಮಾಕ್ಕೆ “ಕಟಿಂಗ್‌ ಶಾಪ್‌’ ಎಂದು ಹೆಸರಿಡಲಾಗಿದೆ. ಈ ಹಿಂದೆ “ಆಪರೇಶನ್‌ ಅಲಮೇಲಮ್ಮ’, “ಮಾಯಾಬಜಾರ್‌’, “ಅಳಿದು ಉಳಿದವರು’, “ರಾಂಚಿ’ ಮೊದಲಾದ ಸಿನಿಮಾಗಳಿಗೆ ಸ್ಕ್ರಿಪ್ಟ್ ರೈಟರ್‌ ಮತ್ತು ಗೀತ ಸಾಹಿತಿಯಾಗಿ ಕೆಲಸ ಮಾಡಿದ ಅನುಭವವಿರುವ ಪವನ್‌ ಭಟ್‌, “ಕಟ್ಟಿಂಗ್‌ ಶಾಪ್‌’ ಸಿನಿಮಾಕ್ಕೆ ಚಿತ್ರಕಥೆ, ಸಂಭಾಷಣೆ, ಸಾಹಿತ್ಯದ ಬರೆದು ಮೊದಲ ಬಾರಿಗೆ ನಿರ್ದೇಶನವನ್ನೂ ಮಾಡಿದ್ದಾರೆ.

ಯು-ಟ್ಯೂಬ್‌ ಚಾನೆಲ್‌ನಲ್ಲಿ ಒಂದಷ್ಟು ಕಿರುಚಿತ್ರಗಳ ಮೂಲಕ ಗುರುತಿಸಿಕೊಂಡಿರುವ, “ಆಪರೇಷನ್‌ ಅಲಮೇಲಮ್ಮ’, “ಮಯಾ ಬಜಾರ್‌’ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಪ್ರವೀಣ್‌ ಈ ಸಿನಿಮಾಕ್ಕೆ ಕಥೆ ಬರೆದು, ಸಂಗೀತ ನೀಡಿ ಜೊತೆಗೆ ತೆರೆಮೇಲೆ ನಾಯಕ ನಟನಾಗಿ ಅಭಿನಯಿಸಿದ್ದಾರೆ.

ಅರ್ಚನಾ ಕೊಟ್ಟಿಗೆ, ದೀಪಕ್‌ ಭಟ್‌, ಅಭಿಷೇಕ್‌ ಸಾವಳಗಿ, ನವೀನ್‌ ಕೃಷ್ಣ, ಭಗವಾನ್‌, ಓಂ ಪ್ರಕಾಶ್‌ ರಾವ್‌, ವತ್ಸಲಾ ಮೋಹನ್‌, ಕೆ. ಉಮೇಶ್‌ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಸದ್ಯ ಟೈಟಲ್‌, ಟ್ರೇಲರ್‌, ರ್ಯಾಪ್‌ ಸಾಂಗ್‌ ಮೂಲಕ ಸೌಂಡ್‌ ಮಾಡುತ್ತಿರುವ “ಕಟ್ಟಿಂಗ್‌ ಶಾಪ್‌’ ಹೇಗಿರಲಿದೆ ಅನ್ನೋದು ಇದೇ ಮೇ. 20ಕ್ಕೆ ಗೊತ್ತಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next