Advertisement

Bollywood: ಒಂದೇ ಸಿನಿಮಾದಲ್ಲಿ 5 ಬಾಲಿವುಡ್‌ ಸ್ಟಾರ್‌ಗಳು; ಯಾವ ಸಿನಿಮಾವಿದು?

05:37 PM Jul 27, 2024 | Team Udayavani |

ಮುಂಬಯಿ: ಒಂದೇ ಪ್ರಾಜೆಕ್ಟ್ ನಲ್ಲಿ 5 ಬಾಲಿವುಡ್‌ (Bollywood) ಸೂಪರ್‌ ಸ್ಟಾರ್‌ ಕಾಣಿಸಿಕೊಳ್ಳುತ್ತಿರುವ ಸಿನಿಮಾವೊಂದು ಬಾಲಿವುಡ್‌ ನಲ್ಲಿ ಬರಲಿದೆ.

Advertisement

‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಖ್ಯಾತಿಯ ಆದಿತ್ಯ ಧಾರ್‌ (Aditya Dhar) ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

“ಇದು ನನ್ನ ಅಭಿಮಾನಿಗಳಿಗೆ, ನನ್ನೊಂದಿಗೆ ತುಂಬಾ ತಾಳ್ಮೆಯಿಂದಿರುವ ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ಈ ಬಾರಿ ಹಿಂದೆಂದೂ ಇಲ್ಲದಂತಹ ಸಿನಿಮೀಯ ಅನುಭವವನ್ನು ನಾನು ನಿಮಗೆ ನೀಡುತ್ತೇನೆ ಎನ್ನುವ ಭರವಸೆಯನ್ನು ನಾನು ನೀಡುತ್ತೇನೆ” ಎಂದು ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ನಟ ರಣವೀರ್ ಸಿಂಗ್ (Ranveer Singh) ಹೇಳಿದ್ದಾರೆ.

ಮೊದಲ ಬಾರಿಗೆ ನಿರ್ದೇಶನ ಮಾಡಿ, ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಮೂಲಕ 350 ಕೋಟಿ ರೂ. ಗಳಿಸಿದ ಆದಿತ್ಯ ಧಾರ್‌ ಇದೀಗ ದೊಡ್ಡ ಸ್ಟಾರ್‌ ಕಾಸ್ಟ್‌ ವುಳ್ಳ ಸಿನಿಮಾವನ್ನು ಅನೌನ್ಸ್‌ ಮಾಡಿದ್ದಾರೆ.

Advertisement

ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಜೊತೆ ಸಂಜಯ್ ದತ್ (Sanjay Dutt), ಆರ್. ಮಾಧವನ್, (R.Madhavan) ಅಕ್ಷಯ್ ಖನ್ನಾ ಮತ್ತು ಅರ್ಜುನ್ ರಾಂಪಾಲ್ ಜೊತೆಯಾಗಿ ನಟಿಸಲಿದ್ದಾರೆ.

ಸದ್ಯ ಸಿನಿಮಾದ ಟೈಟಲ್‌ ಇನ್ನಷ್ಟೇ ಅನೌನ್ಸ್‌ ಆಗಬೇಕಿದ್ದು, ಜಿಯೋ ಸ್ಟುಡಿಯೋಸ್‌ನಿಂದ ಜ್ಯೋತಿ ದೇಶಪಾಂಡೆ, ಲೋಕೇಶ್ ಧಾರ್ ಮತ್ತು ಆದಿತ್ಯ ಧಾರ್ ಅವರ ಬ್ಯಾನರ್ B62 ಸ್ಟುಡಿಯೋಸ್ ಅಡಿಯಲ್ಲಿ ನಿರ್ಮಾಣವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next