Advertisement

“ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್ಸ್‌’ನಲ್ಲಿ ಸ್ಥಾನ

04:17 PM Apr 16, 2021 | Team Udayavani |

ಚನ್ನಪಟ್ಟಣ: ರಾಷ್ಟ್ರಕವಿ ಕುವೆಂಪು ಅವರ ‘ಬೊಮ್ಮನ ಹಳ್ಳಿಯಕಿಂದರಿ ಜೋಗಿ’ ಕವನದ ಪುಸ್ತಕವನ್ನು ಕೇವಲ 1×1 ಸೆಂ.ಮೀ.ಅಳತೆಯುಳ್ಳ, 0.210 ಮಿ.ಗ್ರಾಂ. ತೂಕದ ಪುಸ್ತಕದಲ್ಲಿ ಲೆಡ್‌ಪೆನ್ಸಿಲ್‌ನಿಂದ ಬರೆಯುವ ಮೂಲಕ ‘ಗೋಲ್ಡನ್‌ ಬುಕ್‌ ಆಫ್‌ವರ್ಲ್ಡ್ ರೆಕಾರ್ಡ್ಸ್‌’ ನಲ್ಲಿ ರಾಂಪುರ ಗ್ರಾಮದ ಆರ್‌. ವಿ. ಅಚಲಸ್ಥಾನ ಪಡೆದಿದ್ದಾರೆ.

Advertisement

ಕೈ ಬರವಣಿಗೆಯಲ್ಲಿ ಬರೆದ ಅತೀ ಸಣ್ಣ ಪುಸ್ತಕ ಇದಾಗಿದ್ದು,32 ಪುಟಗಳುಳ್ಳ ಇಡೀ ಪುಸ್ತಕ ಬರೆಯಲು ಕೇವಲ 12ಗಂಟೆಗಳ ಸಮಯ ತೆಗೆದುಕೊಂಡಿರುವುದು ವಿಶೇಷ. ಚನ್ನಪಟ್ಟಣ ತಾಲೂಕಿನ ರಾಂಪುರ ಗ್ರಾಮದ ಅನಿತಾ ಮತ್ತುವಿಜಯ್‌ ಅವರ ಕಿರಿಯ ಪುತ್ರಿ ಆರ್‌.ವಿ. ಅಚಲ, 10ನೇತರಗತಿ ವ್ಯಾಸಂಗ ಮಾಡುತ್ತಿದ್ದು, ಸರ್ಕಾರ ಇತ್ತೀಚೆಗೆ ವಿದ್ಯಾರ್ಥಿಗಳಿಗಾಗಿ ಜಾರಿಗೆ ತಂದಿರುವ ಓದುವ ಬೆಳಕು ಯೋಜನೆಯಅಭಿಯಾನ ಕೈಗೊಂಡಿದ್ದರು.

ಆರ್‌.ವಿ. ಅಚಲ ವ್ಯಾಸಂಗದಲ್ಲೂಮುಂದಿದ್ದು, ಕವನ ರಚನೆ, ಚಿತ್ರಕಲೆ ಮತ್ತು ಗಾಯನದಲ್ಲೂವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಹಲವಾರು ಸಂಘಸಂಸ್ಥೆಗಳು ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಸ್ವರಚಿತಕವಿತೆ ವಾಚನ ಹಾಗೂ ಗೀತಗಾಯನ ನಡೆಸಿಕೊಟ್ಟಿದ್ದಾರೆ. ಕನಕಪುರದ ಧಮ್ಮದೀವಿಗೆ ಚಾರಿಟಬಲ್‌ ಟ್ರಸ್ಟ್‌ನಿಂದ ನೀಡುವ’ಧಮ್ಮ ದೀವಿಗೆ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next