Advertisement

ಟೈಲರ್‌ ಮಗನ “ನೀಟ್‌’ಸಾಧನೆ

06:32 PM Jan 04, 2021 | Team Udayavani |

ಹೂವಿನಹಡಗಲಿ: ಸಾಧಿಸುವ ಛಲವಿದ್ದವರಿಗೆ ಬಡತನ, ಇತರೆ ಯಾವುದೇ ಆಡೆ ತಡೆ ಕಾಣದು ತನ್ನ ಸಾಧನೆಯ ದಾರಿ ಮಾತ್ರ ಸಾಧಕನಿಗೆ ಕಾಣುತ್ತದೆ ಎನ್ನುವ ಹಾಗೆ ಒಬ್ಬ ಬಡ ಟೈಲರ್‌ ಮಗನ ಸಾಧನೆ ಶ್ಲಾಘನೀಯವಾಗಿದೆ.

Advertisement

ಪವನ್‌ಕುಮಾರ್‌ ನವಲೆ ಸೆ. 13ರಂದು ನಡೆದ ನೀಟ್‌ ಪರೀಕ್ಷೆಯಲ್ಲಿ 598 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ರಾಜ್ಯಕ್ಕೆ 687ನೇ ರ್‍ಯಾಂಕ್‌ ಪಡೆದವನಾಗಿ ಹೊರ ಹೊಮ್ಮಿದ್ದಾನೆ. ಜೊತೆಗೆ ರಾಜ್ಯದ ಹುಬ್ಬಳ್ಳಿ ಕಿಮ್ಸ ಕಾಲೇಜಿನಲ್ಲಿ ಮೆಡಿಕಲ್‌ ಸೀಟ್‌ ದೊರಕಿರುವುದು ತಂದೆ ತಾಯಿಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.

ವೃತ್ತಿಯಲ್ಲಿ ಟೈಲರ್‌ ಆಗಿರುವ ಸುಭಾಷ್‌ ನವಲೆ ಹಾಗೂ ರೇಣುಕ ನವಲೇ ಟೈಲರ್‌ ಕೆಲಸದಿಂದಲೇ ಜೀವನ ನಿರ್ವಹಣೆ ಮಾಡುತ್ತಿದ್ದರು. ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ನೀಡಿ ಆತನನ್ನು ಡಾಕ್ಟರ್‌ ರನ್ನಾಗಿ ಮಾಡಬೇಕು ಎನ್ನುವ ಕನಸು ಕಂಡವರು.ತಂದೆ ತಾಯಿಯ ಕನಸನ್ನು ನನಸು ಮಾಡುವ ರೀತಿಯಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಹಂತದಲ್ಲಿ ಉತ್ತಮ ಸಾಧನೆ ಮಾಡಿದನು. 1-4ನೇ ತರಗತಿಯವರೆ ಸ್ಥಳೀಯ ಕನ್ನಡ ಮಾಧ್ಯಮತುಂಗಭದ್ರಾ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ  ಮಾಡುತ್ತಿದ್ದನು. ನಂತರದಲ್ಲಿ ಮಗನನ್ನುಮೆಡಿಕಲ್‌ ಮಾಡಿಸಬೇಕು ಎನ್ನುವ ಹಂಬಲದಿಂದಹಡಗಲಿಯ ಜೆಎಸ್‌ಎಸ್‌ ಪಬ್ಲಿಕ್‌ ಸ್ಕೂಲ್‌ಗೆ ಸೇರಿಸಿದರು. 4ರಿಂದ ಪಬ್ಲಿಕ್‌ ಶಾಲೆಯಲ್ಲಿ ಅಭ್ಯಾಸ ಮಾಡಿದ ಪವನ್‌ ಎಸ್‌ಎಸ್‌ಎಲ್‌ ಸಿ ಪರೀಕ್ಷೆ ಯಲ್ಲಿ ಶಾಲೆಗೆ ಟಾಪರ್‌ ಅಗಿ ಹೊರಹೊಮ್ಮಿದನು. ತಂದೆ ತಾಯಿ ಹಾಗೂ ಸ್ವತಃ ಪವನ್‌ಗೆ ಡಾಕ್ಟರ್‌ ಆಗಬೇಕು ಎಂದು ಕಟ್ಟಿಕೊಂಡಿದ್ದ ಕನಸು ಹಂತ ಹಂತವಾಗಿ ಮೊಳಕೆ ಒಡೆಯಲು ಪ್ರಾರಂಭಿಸಿತು.

ಮಗನ ವಿದ್ಯಾಬ್ಯಾಸಕ್ಕೆ ಆರ್ಥಿಕವಾಗಿ ಎಷ್ಟೇ ಕಷ್ಟವಾದರೂ ಸರಿ ಆತನಿಗೆ ಡಾಕ್ಟರ್‌ಮಾಡಿಸಿಯೇ ತೀರಬೇಕು ಎನ್ನುವ ಹಠದಿಂದ ಪ್ರತಿಷ್ಠಿತ ಮೂಡಬಿದಿರೆಯ ಅಳ್ವಾಸ್‌ ಕಾಲೇಜಿಗೆದಾಖಲಿಸಿದರು. ಪ್ರಥಮ ಹಾಗೂ ದ್ವಿತೀಯಪಿಯುಸಿ ಮುಗಿಸಿದ ಪವನ್‌ ಕಳೆದ ಭಾರನೀಟ್‌ ಪರೀಕ್ಷಕೆಯಲ್ಲಿ ಕೇವಲ 10 ಅಂಕಗಳ ಕೊರತೆಯಿಂದಾಗಿ ವೈದ್ಯಕೀಯ ಸೀಟ್‌ ವಂಚಿತನಾದನು. ಆದರೇನಂತೆ ಛಲಬಿಡದೆಅವರ ತಂದೆ ತಾಯಿ ಪವನ್‌ ನನ್ನು ಒಂದು ವರ್ಷ ಬೆಂಗಳೂರಿನ ವಿಸನ್‌ ಕಾಲೇಜಿಗೆ ನೀಟ್‌ತರಬೇತಿಗಾಗಿಯೇ ಕಳುಹಿಸಿದರು. ಈಗ ಮಗನ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

ನ‌ಮ್ಮ ಮಗ ಮೆಡಿಕಲ್‌ ಓದಬೇಕು ಎನ್ನುವ ಆಸೆ ಮೊದಲಿನಿಂದಲೂಇತ್ತು. ಆತನು ಜಾಣನಿದ್ದನು ನಮಗೆ ಎಷ್ಟೇ ಕಷ್ಟವಾದರೂ ಮಗನನ್ನುಮೆಡಿಕಲ್‌ ಮಾಡಿಸಬೇಕು ಎಂದು ಅಂದುಕೊಂಡಿದ್ದೇವು. ಈಗ ಮೆಡಿಕಲ್‌ ಸೀಟ್‌ ದೊರಕಿದ್ದಕ್ಕೆ ಸಂತೋಷವಾಗಿದೆ.  ಸುಭಾಷ್‌ ನವಲೆ, ತಂದೆ

Advertisement

ಮೊದಲಿನಿಂದಲೂ ನನಗೆ ವಿಜ್ಞಾನದಲ್ಲಿ ಆಸಕ್ತಿ ಇದ್ದು ವೈದ್ಯನಾಗಬೇಕು ಎನ್ನುವಹಂಬಲವಿತ್ತು. ನಮ್ಮ ಗುರುಗಳ ಹಾಗೂತಂದೆ ತಾಯಿಗಳ ಅಶೀರ್ವಾದದಿಂದ ನನಗೆಮೆಡಿಕಲ್‌ ಸೀಟ್‌ ದೊರಕಿದೆ. ಚೆನ್ನಾಗಿ ಓದಿಡಾಕ್ಟರ್‌ ಆಗಿ ಗ್ರಾಮೀಣ ಭಾಗದ ಜನತೆಯಸೇವೆ ಮಾಡಬೇಕು ಎನ್ನುವ ಕನಸು ಕಟ್ಟಿಕೊಂಡಿದ್ದೇನೆ.  –ಪವನ್‌ ನವಲೆ

 

ವಿಶ್ವನಾಥ ಹಡಗಲಿ

Advertisement

Udayavani is now on Telegram. Click here to join our channel and stay updated with the latest news.

Next