Advertisement
ಇನ್ನೊಂದು ಸೆಮಿಫೈನಲ್ ದಿಲ್ಲಿ-ಬಂಗಾಲ ತಂಡಗಳ ನಡುವೆ ಪುಣೆಯಲ್ಲಿ ಸಾಗಲಿದೆ. 2017-18ರ ರಣಜಿ ಟ್ರೋಫಿ ಮುಖಾಮುಖೀಯಲ್ಲಿ ಅಜೇಯ ಅಭಿಯಾನದೊಂದಿಗೆ ನಾಗಾಲೋಟದಲ್ಲಿರುವ ಕರ್ನಾಟಕ ಅಮೋಘ ಸಾಧನೆ ಮೂಲಕ ನೆಚ್ಚಿನ ತಂಡವಾಗಿ ಹೊರಹೊಮ್ಮಿದೆ. ನಾಗ್ಪುರದಲ್ಲಿ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ “ರಣಜಿ ಕಿಂಗ್’ ಮುಂಬಯಿಯನ್ನೇ ಇನ್ನಿಂಗ್ಸ್ ಸೋಲಿಗೆ ಗುರಿಪಡಿಸಿದ್ದು ಕರ್ನಾಟಕದ ಮಹಾನ್ ಸಾಧನೆಯಾಗಿದೆ. ಇನ್ನೊಂದೆಡೆ ವಿದರ್ಭ ಕೂಡ ಸಶಕ್ತ ತಂಡವಾಗಿ ಗೋಚರಿಸುತ್ತಿದೆ. ಹೀಗಾಗಿ ಈಡನ್ ಕಾದಾಟ ತೀವ್ರ ಪೈಪೋಟಿಯಿಂದ ಕೂಡಿರುವುದರಲ್ಲಿ ಅನುಮಾನವಿಲ್ಲ.ಲೀಗ್ ಹಂತದ 6 ಪಂದ್ಯಗಳಲ್ಲಿ 4 ಜಯ ಜಯ ಸಾಧಿಸಿದ ಹೆಗ್ಗಳಿಕೆ ಕರ್ನಾಟಕದ್ದು. ಉಳಿದೆರಡು ಪಂದ್ಯಗಳು ಡ್ರಾಗೊಂಡರೂ ಮೊದಲ ಇನ್ನಿಂಗ್ಸ್ ಮುನ್ನಡೆಗೇನೂ ಅಡ್ಡಿಯಾಗಲಿಲ್ಲ. ಒಟ್ಟು 32 ಅಂಕ ಸಂಪಾದಿಸಿ “ಎ’ ಗುಂಪಿನ ಅಗ್ರಸ್ಥಾನಿಯಾಗಿ ಕರ್ನಾಟಕ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ವಿದರ್ಭ ಕೂಡ ಲೀಗ್‌ನಲ್ಲಿ ಕರ್ನಾಟಕಕ್ಕೆ ಸಮನಾದ ಸಾಧನೆಯನ್ನೇ ಮಾಡಿದೆ. ಆರರಲ್ಲಿ 4 ಜಯ, 2 ಡ್ರಾ, ಒಟ್ಟು 31 ಅಂಕ ಸಂಪಾದಿಸಿ “ಡಿ’ ಗುಂಪಿನ ಮೊದಲ ಸ್ಥಾನಿಯಾಗಿಯೇ ನಾಕೌಟ್ ಪ್ರವೇಶಿಸಿತ್ತು. ಇಲ್ಲಿ ಕೇರಳ ವಿರುದ್ಧ 412 ರನ್ನುಗಳ ಭಾರೀ ಅಂತರದಿಂದ ಗೆದ್ದು ಸೆಮಿಫೈನಲ್ ಪ್ರವೇಶಿಸಿದೆ.
ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗಗಳಲ್ಲಿ ವಿನಯ್ ಕುಮಾರ್ ನೇತೃತ್ವದ ರಾಜ್ಯ ತಂಡ ಸಂಘಟನಾತ್ಮಕ ಹೋರಾಟ ಪ್ರದರ್ಶಿಸುತ್ತ ಬಂದಿದೆ. ತಂಡದ ಯಶಸ್ಸಿಗೆ ಇದೇ ಪ್ರಮುಖ ಕಾರಣ. ಬ್ಯಾಟಿಂಗ್ ವಿಭಾಗದಲ್ಲಿ ಮಾಯಾಂಕ್ ಅಗರ್ವಾಲ್ ಒಂದು ತ್ರಿಶತಕ ಸೇರಿದಂತೆ ಒಟ್ಟು 5 ಶತಕ, 2 ಅರ್ಧ ಶತಕ ಸಿಡಿಸಿ ಪ್ರಚಂಡ ಫಾರ್ಮ್ ಪ್ರದರ್ಶಿಸಿದ್ದಾರೆ. 7 ಪಂದ್ಯಗಳಿಂದ ಮಾಯಾಂಕ್ ಪೇರಿಸಿದ್ದು ಬರೋಬ್ಬರಿ 1,142 ರನ್! ಈ ಮೂಲಕ ಪ್ರಸಕ್ತ ಋತುವಿನ ರಣಜಿ ರನ್ ಗಳಿಕೆಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಆರ್. ಸಮರ್ಥ್ (643 ರನ್), ಕರುಣ್ ನಾಯರ್ (429 ರನ್) ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸ್ಟುವರ್ಟ್ ಬಿನ್ನಿ, ಪವನ್ ದೇಶಪಾಂಡೆ, ಸಿ.ಎಂ. ಗೌತಮ್ ಆಪದಾºಂಧವರಾಗುತ್ತಿದ್ದಾರೆ. ಯುವ ಬ್ಯಾಟ್ಸ್‌ಮನ್ ಡಿ. ನಿಶ್ಚಲ್ ಕೂಡ ದೊಡ್ಡ ಇನ್ನಿಂಗ್ಸ್ ಒಂದನ್ನು ಕಟ್ಟಿದ್ದಾರೆ. ಆದರೆ ಗಾಯಾಳಾಗಿ ಕ್ವಾರ್ಟರ್ ಫೈನಲ್‌ನಿಂದ ಹೊರಗುಳಿಯಬೇಕಾಯಿತು. ಸೆಮಿಫೈನಲ್‌ನಲ್ಲಿ ಅವರು ಪವನ್ ದೇಶಪಾಂಡೆ ಸ್ಥಾನ ತುಂಬಬಹುದು.
Related Articles
Advertisement
ವಿದರ್ಭ ಬಲಿಷ್ಠ ಎದುರಾಳಿಪ್ರಸಕ್ತ ರಣಜಿ ಋತುವಿನಲ್ಲಿ ವಿದರ್ಭ ಭರ್ಜರಿ ಪ್ರದರ್ಶನ ನೀಡುತ್ತ ಬಂದಿದೆ. ಹೀಗಾಗಿ ರಾಜ್ಯಕ್ಕೆ ಇದು ಕಠಿಣ ಎದುರಾಳಿಯಾಗಲಿದೆ. ವಿದರ್ಭ ಪರ ಫೈಜ್ ಫಜಲ್ (831 ರನ್), ರಾಮಸ್ವಾಮಿ ಸಂಜಯ್ (696 ರನ್), ಗಣೇಶ್ ಸತೀಶ್ (514 ರನ್), ವಾಸಿಂ ಜಾಫರ್ (428 ರನ್) ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಅದೇ ರೀತಿ ಬೌಲಿಂಗ್‌ನಲ್ಲಿ ಅಕ್ಷಯ್ ವಖಾರೆ (29 ವಿಕೆಟ್), ಆದಿತ್ಯ ಸರ್ವತೆ (25 ವಿಕೆಟ್), ರಜನೀಶ್ ಗುರ್ಬಾನಿ (19 ವಿಕೆಟ್) ಎದುರಾಳಿಗಳನ್ನು ಕಟ್ಟಿಹಾಕುತ್ತಿದ್ದಾರೆ. ರಾಹುಲ್, ಪಾಂಡೆ ಅನುಪಸ್ಥಿತಿ
ಕರ್ನಾಟಕ ತಂಡಕ್ಕೆ ಅನುಭವಿ ಆಟಗಾರರಾದ ಕೆ.ಎಲ್. ರಾಹುಲ್ ಮತ್ತು ಮನಿಷ್ ಪಾಂಡೆ ಅನುಪಸ್ಥಿತಿ ಕಾಡಲಿದೆ. ಇವರು ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಗೆ ಆಯ್ಕೆಯಾಗಿದ್ದಾರೆ. ಅದೇ ರೀತಿ ಏಕದಿನ ಸರಣಿಗೆ ಸ್ಥಾನ ಪಡೆಯಲು ವಿಫಲವಾಗಿರುವ ವೇಗಿ ಉಮೇಶ್ ಯಾದವ್ ವಿದರ್ಭ ತಂಡ ಸೇರಿದ್ದಾರೆ. ಆದರೆ ಸದ್ಯ ಫಿಟೆ°ಸ್ ಸಮಸ್ಯೆಯಿಂದ ಬೆಂಗಳೂರಿನ ನ್ಯಾಶನಲ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದ ಹಿನ್ನೆಲೆಯಲ್ಲಿ ಉಮೇಶ್ ಆಡುತ್ತಾರೋ ಇಲ್ಲವೋ ಎನ್ನುವುದು ಖಚಿತವಾಗಿಲ್ಲ. ಕರ್ನಾಟಕ ತಂಡ: ವಿನಯ್ ಕುಮಾರ್ (ನಾಯಕ), ಕರುಣ್ ನಾಯರ್ (ಉಪ ನಾಯಕ), ಮಾಯಾಂಕ್ ಅಗರ್ವಾಲ್, ಆರ್. ಸಮರ್ಥ್, ಡಿ. ನಿಶ್ಚಲ್, ಸ್ಟುವರ್ಟ್ ಬಿನ್ನಿ, ಸಿ.ಎಂ. ಗೌತಮ್, ಶ್ರೇಯಸ್ ಗೋಪಾಲ್, ಕೆ.ಗೌತಮ್, ಅಭಿಮನ್ಯು ಮಿಥುನ್, ಎಸ್. ಅರವಿಂದ್, ಪವನ್ ದೇಶಪಾಂಡೆ, ಜೆ. ಸುಚಿತ್, ಕೌನೈನ್ ಅಬ್ಟಾಸ್, ಶರತ್ ಶ್ರೀನಿವಾಸ್, ರೋನಿತ್ ಮೋರೆ. ವಿದರ್ಭ ತಂಡ: ಫೈಜ್ ಫಜಲ್ (ನಾಯಕ), ಎಸ್. ರಾಮಸ್ವಾಮಿ, ವಾಸಿಮ್ ಜಾಫರ್, ಗಣೇಶ್ ಸತೀಶ್, ಕಣ್ì ಶರ್ಮ, ಅಪೂರ್ವ್ ವಾಂಖೇಡೆ, ಅಕ್ಷಯ್ ವಿನೋದ್ ವಾಡ್ಕರ್, ಆದಿತ್ಯ ಸರ್ವಟೆ, ರಜನೀಶ್ ಗುರ್ಬಾನಿ, ಅಕ್ಷಯ್ ವಖಾರೆ, ಲಲಿತ್ ಯಾದವ್, ರವಿ ಜಂಗಿªದ್, ಅಕ್ಷಯ್ ಕರ್ಣೇವಾರ್, ಸಿದ್ದೇಶ್ ನೆರಾಲ್, ಜಿತೇಶ್ ಶರ್ಮ, ರವಿಕುಮಾರ್ ಠಾಕೂರ್, ಸಿದ್ದೇಶ್ ವಾಥ್, ಉಮೇಶ್ ಯಾದವ್, ಶ್ರೀಕಾಂತ್ ವಾಘ…, ಸಂತೋಷ್ ಶ್ರೀವಾಸ್ತವ, ಶುಭಂ ಕಾಪ್ಸೆ.