Advertisement

ರಣಜಿ ಕ್ರಿಕೆಟ್‌ :ಇಂದಿನಿಂದ ಕರ್ನಾಟಕ-ವಿದರ್ಭ ಸೆಣಸು

06:15 AM Nov 12, 2018 | Team Udayavani |

ನಾಗ್ಪುರ: ಈ ಬಾರಿ ರಣಜಿ ಕ್ರಿಕೆಟ್‌ ಋತುವಿನಲ್ಲಿ ತನ್ನ ಮೊದಲ ಪಂದ್ಯವಾಡಲು ಕರ್ನಾಟಕ ತಂಡ ಸಜ್ಜಾಗಿದೆ. ಸೋಮವಾರದಿಂದ ಗುರುವಾರದವರೆಗೆ ರಾಜ್ಯ ತಂಡ ಹಾಲಿ ಚಾಂಪಿಯನ್‌ ವಿದರ್ಭ ವಿರುದ್ಧ ಅದರದ್ದೇ ನೆಲದಲ್ಲಿ ಸೆಣಸಲಿದೆ. 

Advertisement

ಕರ್ನಾಟಕ ತನ್ನ ಮೊದಲ ಪಂದ್ಯವನ್ನೇ ಹಾಲಿ ಚಾಂಪಿಯನ್ನರ ವಿರುದ್ಧ ಆಡಲು ಸಿದ್ಧವಾಗಿರುವುದು ಒಂದು ವಿಶೇಷವಾದರೆ, ಒಂದು ಕಾಲದಲ್ಲಿ ಕರ್ನಾಟಕದ ಪ್ರತಿಭಾವಂತ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದ ಗಣೇಶ್‌ ಸತೀಶ್‌ ವಿದರ್ಭ ಪರ ಆಡುತ್ತಿರುವುದು ಇನ್ನೊಂದು ವಿಶೇಷ.

ಎರಡೂ ತಂಡಗಳು ಪ್ರಬಲವಾಗಿವೆ. ಕಳೆದ ರಣಜಿ ಋತುವಿನಲ್ಲಿ ರಣಜಿ ಚಾಂಪಿಯನ್‌ ಆಗಿರುವ ವಿದರ್ಭದಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪಡೆಯಿದೆ. ಇನ್ನೊಂದು ಕಡೆ ಕೆ.ಎಲ್‌.ರಾಹುಲ್‌, ಮನೀಶ್‌ ಪಾಂಡೆ ಅನುಪಸ್ಥಿತಿಯಲ್ಲೂ ಕರ್ನಾಟಕದಲ್ಲಿ ಪ್ರಬಲ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಪಡೆಯಿದೆ. ಈ ಋತುವಿನಲ್ಲಿ ಕರ್ನಾಟಕಕ್ಕೆ ಇದು ಮೊದಲ ಪಂದ್ಯ. ವಿದರ್ಭಕ್ಕೆ ಇದು 2ನೆ ಪಂದ್ಯ.

ವಿದರ್ಭ ಮೊದಲ ಪಂದ್ಯದಲ್ಲಿ ಉತ್ತಮ ಆಟವನ್ನೇ ಆಡಿದೆ. ಮಹಾರಾಷ್ಟ್ರ ವಿರುದ್ಧ ಅದು ಮೊದಲ ಇನಿಂಗ್ಸ್‌ನಲ್ಲಿ ಕಳಪೆ ಮೊತ್ತಕ್ಕೆ ಕುಸಿದರೂ 2ನೇ ಇನಿಂಗ್ಸ್‌ನಲ್ಲಿ ಭಾರೀ ಮೊತ್ತ ಪೇರಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ನಾಯಕ ಫೈಜ್‌ ಫ‌ಜಲ್‌, ಅಕ್ಷಯ್‌ ವಡ್ಕರ್‌ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ ಉತ್ಸಾಹದಲ್ಲಿದ್ದಾರೆ. ಆದಿತ್ಯ ಸರ್ವಟೆ ಮೊದಲ ಪಂದ್ಯದಲ್ಲಿ ಬೌಲಿಂಗ್‌ ಮತ್ತು ಬ್ಯಾಟಿಂಗ್‌ ಎರಡೂ ವಿಭಾಗದಲ್ಲಿ ಮಿಂಚಿದೆ.

ಇನ್ನು ಕರ್ನಾಟಕ ತಂಡದಲ್ಲಿ ಕರುಣ್‌ ನಾಯರ್‌, ರವಿಕುಮಾರ್‌ ಸಮರ್ಥ್, ಪವನ್‌ ದೇಶಪಾಂಡೆಯಂತಹ ಖ್ಯಾತ ಬ್ಯಾಟ್ಸ್‌ಮನ್‌ಗಳಿದ್ದಾರೆ. ಅಷ್ಟು ಮಾತ್ರವಲ್ಲ ಈ ತಂಡ ಸ್ಟುವರ್ಟ್‌ ಬಿನ್ನಿ, ಶ್ರೇಯಸ್‌ ಗೋಪಾಲ್‌, ವಿನಯ್‌ ಕುಮಾರ್‌ರಂತಹ ಪ್ರಬಲ ಆಲ್‌ರೌಂಡರ್‌ಗಳನ್ನು ಹೊಂದಿದೆ. ಅಭಿಮನ್ಯುಮಿಥುನ್‌, ಪ್ರಸಿದ್ಧ್ ಕೃಷ್ಣ ಇರುವ ಬೌಲಿಂಗ್‌ ಪಡೆಯೂ ಬಲಿಷ್ಠವಾಗಿದೆ. ಇದು ಮೈದಾನದಲ್ಲಿ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಕಾದು ನೋಡಬೇಕು.

Advertisement

8 ಕಿರೀಟ ಗೆದ್ದಿರುವ ಕರ್ನಾಟಕ
ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕ ಅತಿಬಲಿಷ್ಠ ತಂಡಗಳಲ್ಲೊಂದು. ಅದು ಈವರೆಗೆ 8 ಬಾರಿ ರಣಜಿ ಗೆದ್ದಿದ್ದರೆ, 6 ಬಾರಿ ರನ್ನರ್‌ ಅಪ್‌ ಎನಿಸಿಕೊಂಡಿದೆ. ಈ ಬಾರಿಯೂ ಟ್ರೋಫಿ ಗೆಲ್ಲುವುದಕ್ಕೆ ಬೇಕಾದ ಎಲ್ಲ ಸಾಮರ್ಥ್ಯವೂ ತಂಡದಲ್ಲಿದೆ. ಇದಕ್ಕೆ ಹೋಲಿಸಿದರೆ ವಿದರ್ಭ ಅನನುಭವಿ ತಂಡ ಅದು ಪ್ರಶಸ್ತಿ ಗೆದ್ದಿರುವುದು ಒಮ್ಮೆ ಮಾತ್ರ.

ಕರ್ನಾಟಕ ತಂಡ
ವಿನಯ್‌ ಕುಮಾರ್‌ (ನಾಯಕ), ಕರುಣ್‌ ನಾಯರ್‌, ರವಿಕುಮಾರ್‌ ಸಮರ್ಥ್, ಕೃಷ್ಣಮೂರ್ತಿ ಸಿದ್ಧಾರ್ಥ್, ಡಿ.ನಿಶ್ಚಲ್‌, ಶ್ರೇಯಸ್‌ ಗೋಪಾಲ್‌, ಸ್ಟುವರ್ಟ್‌ ಬಿನ್ನಿ, ಪವನ್‌ ದೇಶಪಾಂಡೆ, ಜಗದೀಶ ಸುಚಿತ್‌, ಪ್ರಸಿದ್ಧ್ ಕೃಷ್ಣ, ಶಿಶಿರ್‌ ಭವಾನೆ, ರೋನಿತ್‌ ಮೋರೆ, ಅಭಿಮನ್ಯು ಮಿಥುನ್‌, ಬಿ.ಆರ್‌.ಶರತ್‌, ಶ್ರೀನಿವಾಸ್‌ ಶರತ್‌.

ವಿದರ್ಭ ತಂಡ
ಫೈಜ್‌ ಫ‌ಜಲ್‌ (ನಾಯಕ), ಗಣೇಶ್‌ ಸತೀಶ್‌, ರಜನೀಶ್‌ ಗುರ್ಬಾನಿ, ವಾಸಿಮ್‌ ಜಾಫ‌ರ್‌, ಅಕ್ಷಯ್‌ ಕರ್ಣೇವರ್‌, ಲಲಿತ್‌ ಎಂ.ಯಾದವ್‌, ಸಂಜಯ್‌ ರಾಮಸ್ವಾಮಿ, ಆದಿತ್ಯ ಸರ್ವಟೆ, ಅಥರ್ವ ತೈದೆ, ಆದಿತ್ಯ ಥಾಕರೆ, ಅಕ್ಷಯ್‌ ವಡ್ಕರ್‌, ಶ್ರೀಕಾಂತ್‌ ವಾಗ್‌Ø, ಅಕ್ಷಯ್‌ ವಖಾರೆ, ಅಪೂರ್ವ್‌ ವಾಂಖಡೆ, ಸಿದ್ಧೇಶ್‌ ವಥ್‌, ದರ್ಶನ್‌ ನಲ್ಕಂಡೆ.

Advertisement

Udayavani is now on Telegram. Click here to join our channel and stay updated with the latest news.

Next