Advertisement

ರಣಜಿ ಪಂದ್ಯ: ರಾಜಸ್ಥಾನ ವಿರುದ್ಧ ಕರ್ನಾಟಕ ಮೇಲುಗೈ

12:11 AM Jan 11, 2023 | Team Udayavani |

ಆಲೂರು: “ಸಿ’ ವಿಭಾಗದ ಮೊದಲೆರಡು ಸ್ಥಾನಿಗಳಾದ ಕರ್ನಾ ಟಕ ಮತ್ತು ರಾಜಸ್ಥಾನ ನಡುವಿನ ರಣಜಿ ಮುಖಾಮುಖಿ ಮಂಗಳವಾರ ಇಲ್ಲಿನ “ಕೆಎಸ್‌ಸಿಎ ಕ್ರಿಕೆಟ್‌ ಗ್ರೌಂಡ್‌’ ನಲ್ಲಿ ಆರಂಭಗೊಂಡಿದ್ದು, ಮೊದಲ ದಿನವೇ ಮಾಯಾಂಕ್‌ ಅಗರ್ವಾಲ್‌ ಪಡೆ ಮೇಲುಗೈ ಸಾಧಿಸಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ ತಂಡ ಕರ್ನಾಟಕದ ದಾಳಿಗೆ ತತ್ತರಿಸಿ 129 ರನ್ನಿಗೆ ಕುಸಿದಿದೆ. ರಾಜ್ಯ ತಂಡ 2 ವಿಕೆಟಿಗೆ 106 ರನ್‌ ಗಳಿಸಿ ಮೊದಲ ದಿನದಾಟ ಮುಗಿಸಿದೆ. ಪ್ರಸಕ್ತ ಋತುವಿನಲ್ಲಿ ಮೊದಲ ಸಲ ಬ್ಯಾಟಿಂಗ್‌ ವೈಫ‌ಲ್ಯ ಕಂಡ ಆರ್‌. ಸಮರ್ಥ್ 8 ರನ್‌ ಹಾಗೂ ದೇವದತ್ತ ಪಡಿಕ್ಕಲ್‌ 32 ರನ್‌ ಮಾಡಿ ಪೆವಿಲಿಯನ್‌ ಸೇರಿಕೊಂಡಿದ್ದಾರೆ. ನಾಯಕ ಮಾಯಾಂಕ್‌ ಅಗರ್ವಾಲ್‌ 49 ಹಾಗೂ ನಿಕಿನ್‌ ಜೋಸ್‌ 10 ರನ್‌ ಮಾಡಿ ಆಡುತ್ತಿದ್ದಾರೆ.

ರಾಜಸ್ಥಾನವನ್ನು ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರೆಂದರೆ “ತ್ರಿವಳಿ ವಿ’ಗಳಾದ ವಾಸುಕಿ ಕೌಶಿಕ್‌, ವಿಜಯಕುಮಾರ್‌ ವೈಶಾಖ್‌ ಮತ್ತು ವಿದ್ವತ್‌ ಕಾವೇರಪ್ಪ. ಇವರಲ್ಲಿ ಕೌಶಿಕ್‌ ಮತ್ತು ವೈಶಾಖ್‌ ತಲಾ 4, ಕಾವೇರಪ್ಪ 2 ವಿಕೆಟ್‌ ಕಿತ್ತರು.

ದ್ವಿತೀಯ ಎಸೆತದಲ್ಲೇ ರಾಜಸ್ಥಾನ್‌ ಕುಸಿತ ಮೊದಲ್ಗೊಂಡಿತು. ಆರಂಭ ಕಾರ ಕುಣಾಲ್‌ ಸಿಂಗ್‌ ರಾಥೋಡ್‌ 33, ಕರಣ್‌ ಲಾಂಬಾ 31 ರನ್‌ ಮಾಡಿದರು.

ಸಂಕ್ಷಿಪ್ತ ಸ್ಕೋರ್‌
ರಾಜಸ್ಥಾನ-129 (ಕುಣಾಲ್‌ ಸಿಂಗ್‌ ರಾಥೋಡ್‌ 33, ಕರಣ್‌ ಲಾಂಬಾ 31, ವಿ. ಕೌಶಿಕ್‌ 37ಕ್ಕೆ 4, ವಿ. ವೈಶಾಖ್‌ 56ಕ್ಕೆ 4, ವಿ. ಕಾವೇರಪ್ಪ 12ಕ್ಕೆ 2). ಕರ್ನಾಟಕ-2 ವಿಕೆಟಿಗೆ 106 (ಅಗರ್ವಾಲ್‌ ಬ್ಯಾಟಿಂಗ್‌
49, ಪಡಿಕ್ಕಲ್‌ 32, ಜೋಸ್‌ ಬ್ಯಾಟಿಂಗ್‌ 10, ಸಮರ್ಥ್ 8, ಅನಿಕೇತ್‌ ಚೌಧರಿ 40ಕ್ಕೆ 2).

Advertisement

ಪೃಥ್ವಿ ಶಾ ಜೀವನಶ್ರೇಷ್ಠ 240
ಗುವಾಹಟಿ: ಮುಂಬಯಿಯ ಆರಂಭಕಾರ ಪೃಥ್ವಿ ಶಾ ಮಂಗಳವಾರ ತಮ್ಮ ಜೀವನಶ್ರೇಷ್ಠ ಸ್ಕೋರ್‌ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಸ್ಸಾಂ ಎದುರಿನ “ಬಿ’ ವಿಭಾಗದ ರಣಜಿ ಪಂದ್ಯದ ಮೊದಲ ದಿನ 240 ರನ್‌ ಬಾರಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಮುಂಬಯಿ 2 ವಿಕೆಟ್‌ ನಷ್ಟಕ್ಕೆ 397 ರನ್‌ ಪೇರಿಸಿದೆ.

283 ಎಸೆತಗಳನ್ನು ನಿಭಾಯಿಸಿರುವ ಪೃಥ್ವಿ ಶಾ 33 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಿಡಿಸಿ ಆತಿಥೇಯ ಬೌಲರ್‌ಗಳಿಗೆ ಬೆವರಿಳಿಸಿದ್ದಾರೆ. ಇವರೊಂದಿಗೆ ಕ್ರೀಸ್‌ನಲ್ಲಿರುವವರು 73 ರನ್‌ ಮಾಡಿರುವ ನಾಯಕ ಅಜಿಂಕ್ಯ ರಹಾನೆ. ಈ ಜೋಡಿಯಿಂದ ಈಗಾಗಲೇ 3ನೇ ವಿಕೆಟಿಗೆ ಭರ್ತಿ 200 ರನ್‌ ಹರಿದು ಬಂದಿದೆ. ಔಟಾದವರೆಂದರೆ ಮುನ್ಶಿàರ್‌ ಖಾನ್‌ (42) ಮತ್ತು ಅರ್ಮಾನ್‌ ಜಾಫ‌ರ್‌ (27).

 

Advertisement

Udayavani is now on Telegram. Click here to join our channel and stay updated with the latest news.

Next