Advertisement

ರಣಜಿ ಟ್ರೋಫಿ: ಇನ್ನಿಂಗ್ಸ್‌ ಜಯದತ್ತ ಕರ್ನಾಟಕ ದಾಪುಗಾಲು

09:17 PM Feb 02, 2023 | Team Udayavani |

ಬೆಂಗಳೂರು: ಉತ್ತರಾಖಂಡ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ 490 ರನ್ನುಗಳ ಅಮೋಘ ಮುನ್ನಡೆ ಗಳಿಸಿದ ಕರ್ನಾಟಕ ಇನ್ನಿಂಗ್ಸ್‌ ಜಯವನ್ನು ಖಾತ್ರಿಗೊಳಿಸಿದೆ.

Advertisement

ಉತ್ತರಾಖಂಡದ 116 ರನ್‌ಗಳ ಸಣ್ಣ ಮೊತ್ತಕ್ಕೆ ಉತ್ತರವಾಗಿ ಕರ್ನಾಟಕ 606 ರನ್‌ ಪೇರಿಸಿತು. ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿರುವ ಉತ್ತರಾಖಂಡ 3 ವಿಕೆಟ್‌ ನಷ್ಟಕ್ಕೆ 106 ರನ್‌ ಮಾಡಿದೆ. ಇನ್ನೂ 384 ರನ್‌ ಹಿನ್ನಡೆಯಲ್ಲಿದೆ.

ಎರಡನೇ ದಿನದಂತ್ಯಕ್ಕೆ ಕರ್ನಾಟಕ 5 ವಿಕೆಟ್‌ ಕಳೆದುಕೊಂಡು 474 ರನ್‌ ಗಳಿಸಿತ್ತು. ಶ್ರೇಯಸ್‌ ಗೋಪಾಲ್‌ 103 ರನ್‌ ಗಳಿಸಿ ಅಜೇಯರಾಗಿದ್ದರು. ಶ್ರೇಯಸ್‌ ಆಟ 161ರ ವರೆಗೆ ಬೆಳೆಯಿತು. ಅವರು ಒಟ್ಟು 288 ಎಸೆತ ಎದುರಿಸಿ 16 ಬೌಂಡರಿ, ಒಂದು ಸಿಕ್ಸರ್‌ ಬಾರಿಸಿ ಅಜೇಯರಾಗಿ ಉಳಿದರು. ಬಿ.ಆರ್‌. ಶರತ್‌ 33, ಕೆ. ಗೌತಮ್‌ 39 ರನ್‌ ಮಾಡಿದರು. ಉತ್ತರಾಖಂಡದ ಅಭಯ್‌ ನೇಗಿ 4, ಮಾಯಾಂಕ್‌ ಮಿಶ್ರಾ 3 ವಿಕೆಟ್‌ ಕಿತ್ತರು.

ಭಾರೀ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್‌ ಆರಂಭಿಸಿದ ಉತ್ತರಾಖಂಡ ಎಚ್ಚರಿಕೆಯಿಂದ ಆಡುತ್ತಿದೆ. ಆದರೂ ಈ ಪಂದ್ಯವನ್ನು ಉಳಿಸಿಕೊಳ್ಳುವ ಯಾವ ಮಾರ್ಗವೂ ತಂಡದ ಮುಂದಿಲ್ಲ. ದಿûಾಂಶು ನೇಗಿ ಮತ್ತು ಸ್ವಪ್ನಿಲ್‌ ಸಿಂಗ್‌ ತಲಾ 27 ರನ್‌ ಗಳಿಸಿ ಆಡುತ್ತಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಉತ್ತರಾಖಂಡ-116 ಮತು 3ಕ್ಕೆ 106 (ದಿಕ್ಷಾಂಶು ನೇಗಿ ಬ್ಯಾಟಿಂಗ್‌ 27, ಸ್ವಪ್ನಿಲ್‌ ಸಿಂಗ್‌ ಬ್ಯಾಟಿಂಗ್‌ 27, ಜೀವನ್‌ಜೋತ್‌ ಸಿಂಗ್‌ 24, ವಿದ್ವತ್‌ ಕಾವೇರಪ್ಪ 22ಕ್ಕೆ 2). ಕರ್ನಾಟಕ-606 (ಶ್ರೇಯಸ್‌ ಗೋಪಾಲ್‌ 161, ಅಗರ್ವಾಲ್‌ 83, ಸಮರ್ಥ್ 82, ಪಡಿಕ್ಕಲ್‌ 69, ಜೋಸ್‌ 62, ಪಾಂಡೆ 39, ಕೆ. ಗೌತಮ್‌ 39, ಅಭಯ್‌ ನೇಗಿ 109ಕ್ಕೆ 4, ಮಾಯಾಂಕ್‌ ಮಿಶ್ರಾ 117ಕ್ಕೆ 3, ಸ್ಪಪ್ನಿಲ್‌ ಸಿಂಗ್‌ 116ಕ್ಕೆ 2).

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next