Advertisement
55 ರನ್ ಮುನ್ನಡೆ ಪಡೆದ ಕರ್ನಾಟಕ ದ್ವಿತೀಯ ಇನ್ನಿಂಗ್ಸ್‌ನಲ್ಲಿ 9 ವಿಕೆಟಿಗೆ 223 ರನ್ ಗಳಿಸಿ ಡಿಕ್ಲೇರ್ ಮಾಡಿತು. 279 ರನ್ ಗೆಲುವಿನ ಗುರಿ ಪಡೆದ ರೈಲ್ವೇಸ್ 4 ವಿಕೆಟಿಗೆ 69 ರನ್ ಗಳಿಸಿತು.
Related Articles
ಪಂದ್ಯಶ್ರೇಷ್ಠ: ಮನೀಷ್ ಪಾಂಡೆ.
Advertisement
ಇದನ್ನೂ ಓದಿ:ಭಾರತದ ಅವಳಿ ವೈಟ್‌ವಾಶ್ ಪರಾಕ್ರಮ
ಸೋಲು ತಪ್ಪಿಸಿದ ಪೂಜಾರ, ಪಟೇಲ್ಅಹ್ಮದಾಬಾದ್: ಆರಂಭಕಾರ ಸ್ನೆಲ್ ಪಟೇಲ್ ಮತ್ತು ಚೇತೇಶ್ವರ್ ಪೂಜಾರ ಅವರ ದಿಟ್ಟ ಬ್ಯಾಟಿಂಗ್ ಹೋರಾಟದ ಫಲದಿಂದ ಮುಂಬಯಿ ವಿರುದ್ಧದ ರಣಜಿ ಪಂದ್ಯದಲ್ಲಿ ಸೌರಾಷ್ಟ್ರ ಸೋಲಿನಿಂದ ಪಾರಾಗಿದೆ. 324 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಸೌರಾಷ್ಟ್ರ ಮೇಲೆ ಫಾಲೋಆನ್ ಹೇರಲಾಗಿತ್ತು. ಆದರೆ ಆರಂಭಿಕರಾದ ಹಾರ್ವಿಕ್ ದೇಸಾಯಿ (62)-ಸ್ನೆಲ್ ಪಟೇಲ್ (98) 163 ರನ್ ಜತೆಯಾಟ ನಿಭಾಯಿಸಿದರು. ಬಳಿಕ ಪೂಜಾರ 91 ರನ್ ಬಾರಿಸಿ ಮುಂಬಯಿಯ ಗೆಲುವಿನ ಕನಸನ್ನು ಛಿದ್ರಗೊಳಿಸಿದರು. ಎಂದಿನ ನಿಧಾನ ಗತಿಯ ಶೈಲಿಯನ್ನು ಬದಿಗಿಟ್ಟು ಆಕ್ರಮಣಕಾರಿಯಾಗಿ ಆಡಿದ ಪೂಜಾರ 83 ಎಸೆತಗಳಿಂದ 91 ರನ್ ಬಾರಿಸಿದರು (16 ಬೌಂಡರಿ, 1 ಸಿಕ್ಸರ್). ಪೂಜಾರ ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಪಂದ್ಯಕ್ಕೆ ಡ್ರಾ ಮುದ್ರೆ ಬೀಳುವ ವೇಳೆ ಸೌರಾಷ್ಟ್ರ 9 ವಿಕೆಟಿಗೆ 372 ರನ್ ಪೇರಿಸಿತ್ತು. ಮುಂಬೈ ಪರ ಎಡಗೈ ಸ್ಪಿನ್ನರ್ ಶಮ್ಸ್ ಮುಲಾನಿ 114 ರನ್ ವೆಚ್ಚದಲ್ಲಿ 7 ವಿಕೆಟ್ ಉಡಾಯಿಸಿದರು. 275 ರನ್ ಬಾರಿಸಿದ ಸರ್ಫರಾಜ್ ಖಾನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.