Advertisement

ಯಶಸ್ವಿ ಜೈಸ್ವಾಲ್‌ ಮತ್ತೊಂದು ಶತಕ: 662 ರನ್‌ ಮುನ್ನಡೆಯಲ್ಲಿ ಮುಂಬಯಿ

11:02 PM Jun 17, 2022 | Team Udayavani |

ಬೆಂಗಳೂರು: ಮುಂಬಯಿಯ ಪ್ರತಿಭಾನಿತ್ವ ಓಪನರ್‌ ಯಶಸ್ವಿ ಜೈಸ್ವಾಲ್‌ ಉತ್ತರ ಪ್ರದೇಶ ಎದುರಿನ ರಣಜಿ ಟ್ರೋಫಿ ಸೆಮಿಫೈನಲ್‌ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿ ಸುದ್ದಿಯಾಗಿದ್ದಾರೆ.

Advertisement

ಇದರೊಂದಿಗೆ 4ನೇ ದಿನದಾಟದ ಅಂತ್ಯಕ್ಕೆ ಮುಂಬಯಿ ಮುನ್ನಡೆ 662 ರನ್ನಿಗೆ ಏರಿದ್ದು, ಸೆಮಿಫೈನಲ್‌ ಪ್ರವೇಶವನ್ನು ಖಾತ್ರಿಪಡಿಸಿದೆ.

54ನೇ ಎಸೆತದಲ್ಲಿ ಖಾತೆ ತೆರೆದ ಬಳಿಕ ಇನ್ನಿಂಗ್ಸ್‌ ಕಟ್ಟುತ್ತಲೇ ಹೋದ ಯಶಸ್ವಿ ಜೈಸ್ವಾಲ್‌ 372 ಎಸೆತಗಳಿಗೆ ಜವಾಬಿತ್ತು 181 ರನ್‌ ಬಾರಿಸಿದರು. ಇದರಲ್ಲಿ 23 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸೇರಿತ್ತು. ಮೊದಲ ಸರದಿಯಲ್ಲಿ ಜೈಸ್ವಾಲ್‌ ಗಳಿಕೆ ಭರ್ತಿ 100 ರನ್‌. ಅವರು ರಣಜಿ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಮುಂಬಯಿಯ 9ನೇ ಬ್ಯಾಟರ್‌. ಸತತವಾಗಿ ಇದು ಜೈಸ್ವಾಲ್‌ ಅವರ 3ನೇ ಶತಕ. ಉತ್ತರಾಖಂಡ ವಿರುದ್ಧದ ಕ್ವಾರ್ಟರ್‌ ಫೈನಲ್‌ ಪಂದ್ಯದ ದ್ವಿತೀಯ ಸರದಿಯಲ್ಲಿ ಅವರು 103 ರನ್‌ ಬಾರಿಸಿದ್ದರು.

ವನ್‌ಡೌನ್‌ ಬ್ಯಾಟರ್‌ ಅರ್ಮಾನ್‌ ಜಾಫ‌ರ್‌ ಕೂಡ ಸೆಂಚುರಿ ಬಾರಿಸಿ ಮೆರೆದರು. ಇವರ ಗಳಿಕೆ 127 ರನ್‌. 259 ಎಸೆತ ನಿಭಾಯಿಸಿದ ಜಾಫ‌ರ್‌ 15 ಬೌಂಡರಿ, 2 ಸಿಕ್ಸರ್‌ ಹೊಡೆದರು.

4ನೇ ದಿನದಾಟದ ಆಂತ್ಯಕ್ಕೆ ಮುಂಬಯಿ 4 ವಿಕೆಟಿಗೆ 449 ರನ್‌ ಗಳಿಸಿದೆ. ಯುಪಿ ಪರ 9 ಮಂದಿ ಬೌಲಿಂಗ್‌ ದಾಳಿಗಿಳಿದರೂ ಮುಂಬಯಿಗೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ಶನಿವಾರ ಪಂದ್ಯದ ಅಂತಿಮ ದಿನ. ಸ್ಪಷ್ಟ ಗೆಲುವು ಸಾಧಿಸದೇ ಹೋದರೂ ಮೊದಲ ಇನ್ನಿಂಗ್ಸ್‌ ಮುನ್ನಡೆಯ ಆಧಾರದಲ್ಲಿ ಮುಂಬಯಿ ಫೈನಲ್‌ಗೆ ಲಗ್ಗೆ ಇಡುವುದರಲ್ಲಿ ಅನುಮಾನವಿಲ್ಲ.

Advertisement

ಸಂಕ್ಷಿಪ್ತ ಸ್ಕೋರ್‌: ಮುಂಬಯಿ -393 ಮತ್ತು 4 ವಿಕೆಟಿಗೆ 449 (ಜೈಸ್ವಾಲ್‌ 181, ಜಾಫ‌ರ್‌ 127, ಪೃಥ್ವಿ ಶಾ 64, ಪಾರ್ಕರ್‌ 22, ಸಫ‌ìರಾಜ್‌ ಬ್ಯಾಟಿಂಗ್‌ 23, ಮುಲಾನಿ ಬ್ಯಾಟಿಂಗ್‌ 10, ಪ್ರಿನ್ಸ್‌ ಯಾದವ್‌ 69ಕ್ಕೆ 2). ಉತ್ತರ ಪ್ರದೇಶ-180.

ಬಂಗಾಲಕ್ಕೆ 350 ರನ್‌ ಗುರಿ
ಬೆಂಗಳೂರು: ಮಧ್ಯ ಪ್ರದೇಶ ಎದುರಿನ ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ಬಂಗಾಲ 350 ರನ್‌ ಗೆಲುವಿನ ಗುರಿ ಪಡೆದಿದ್ದು, 4ನೇ ದಿನದಾಟದ ಕೊನೆಯಲ್ಲಿ 4 ವಿಕೆಟಿಗೆ 96 ರನ್‌ ಗಳಿಸಿ ಒತ್ತಡಕ್ಕೆ ಸಿಲುಕಿದೆ.

ಅಭಿಷೇಕ್‌ ರಮಣ್‌ (0), ಸುದೀಪ್‌ ಕುಮಾರ್‌ ಘರಾಮಿ (19), ಅಭಿಷೇಕ್‌ ಪೊರೆಲ್‌ (7) ಹಾಗೂ ಇನ್‌ಫಾರ್ಮ್ ಬ್ಯಾಟರ್‌ ಮನೋಜ್‌ ತಿವಾರಿ (7) ಈಗಾಗಲೇ ಪೆವಿಲಿಯನ್‌ ಸೇರಿರುವುದರಿಂದ ಬಂಗಾಲದ ಸ್ಥಿತಿ ಅಷ್ಟೇನೂ ಉತ್ತಮ ಮಟ್ಟದಲ್ಲಿಲ್ಲ.

ನಾಯಕ ಆಭಿಮನ್ಯು ಈಶ್ವರನ್‌ 52 ರನ್‌ ಮಾಡಿ ಹೋರಾಟವೊಂದನ್ನು ಜಾರಿಯಲ್ಲಿರಿಸಿದ್ದಾರೆ. ಇವರೊಂದಿಗೆ 8 ರನ್‌ ಮಾಡಿರುವ ಅನುಸ್ತೂಪ್‌ ಮಜುಮಾªರ್‌ ಕ್ರೀಸ್‌ನಲ್ಲಿದ್ದಾರೆ. ಕೊನೆಯ ದಿನದಾಟದಲ್ಲಿ ಉಳಿದ 6 ವಿಕೆಟ್‌ಗಳ ನೆರವಿನಿಂದ 254 ರನ್‌ ತೆಗೆಯುವ ಕಠಿನ ಸವಾಲು ಬಂಗಾಲದ ಮುಂದಿದೆ.

ಸತತ 2 ಶತಕ ಬಾರಿಸಿ ಪ್ರಚಂಡ ಫಾರ್ಮ್ ಪ್ರದರ್ಶಿಸಿದ್ದ ಕ್ರೀಡಾ ಸಚಿವ ಮನೋಜ್‌ ತಿವಾರಿ ಔಟಾದುದು ಬಂಗಾಲಕ್ಕೆ ಎದುರಾಗಿರುವ ದೊಡ್ಡ ಹೊಡೆತ.ಕುಮಾರ ಕಾರ್ತಿಕೇಯ 3 ವಿಕೆಟ್‌ ಉಡಾಯಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next