Advertisement

ರಣಜಿ ಕ್ವಾರ್ಟರ್‌ ಫೈನಲ್ಸ್‌: ಮೊದಲ ದಿನವೇ ಕರ್ನಾಟಕ ಮೇಲುಗೈ

11:37 PM Jan 31, 2023 | Team Udayavani |

ಬೆಂಗಳೂರು: ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ ಪಂದ್ಯದ ಮೊದಲ ದಿನವೇ ಕರ್ನಾಟಕದ ಮುನ್ನಡೆ ಖಾತ್ರಿಯಾಗಿದೆ. ಉತ್ತರಾಖಂಡ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿ ಚಾಲಕನ ಸ್ಥಾನದಲ್ಲಿ ಕುಳಿತಿದೆ. ರಣಜಿ ಪದಾರ್ಪಣೆ ಮಾಡಿದ ಮಧ್ಯಮ ವೇಗಿ ಮುರಳೀಧರ್‌ ವೆಂಕಟೇಶ್‌ ಮೊದಲ ದಿನದ ಹೀರೋ ಎನಿಸಿದರು. ಅವರದು 5 ವಿಕೆಟ್‌ ಸಾಧನೆ.

Advertisement

ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಕರ್ನಾಟಕ ಘಾತಕ ದಾಳಿ ನಡೆಸಿ ಉತ್ತರಾಖಂಡವನ್ನು 116 ರನ್ನಿಗೆ ಉದುರಿಸಿತು. ಬಳಿಕ ಬ್ಯಾಟಿಂಗ್‌ನಲ್ಲೂ ಅಬ್ಬರಿಸಿ ವಿಕೆಟ್‌ ನಷ್ಟವಿಲ್ಲದೆ 123 ರನ್‌ ಪೇರಿಸಿ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿತು. ಈ ಮುನ್ನಡೆ ದೊಡ್ಡ ಮೊತ್ತಕ್ಕೆ ವಿಸ್ತರಿಸಲ್ಪಟ್ಟರೆ ಅಗರ್ವಾಲ್‌ ಪಡೆಯ ಇನ್ನಿಂಗ್ಸ್‌ ಗೆಲುವನ್ನು ನಿರೀಕ್ಷಿಸಲಡ್ಡಿಯಿಲ್ಲ.

ಮುರಳೀಧರ್‌ ವೆಂಕಟೇಶ್‌ ಎಸೆತಗಳಿಗೆ ಉತ್ತರಾ ಖಂಡದ ಬಳಿ ಉತ್ತರವೇ ಇರಲಿಲ್ಲ. ವೆಂಕಟೇಶ್‌ 36 ರನ್‌ ವೆಚ್ಚದಲ್ಲಿ 5 ವಿಕೆಟ್‌ ಉರುಳಿಸಿದರು. ವಿದ್ವತ್‌ ಕಾವೇರಪ್ಪ ಮತ್ತು ಕೃಷ್ಣಪ್ಪ ಗೌತಮ್‌ ತಲಾ 2, ವಿಜಯಕುಮಾರ್‌ ವೈಶಾಖ್‌ ಒಂದು ವಿಕೆಟ್‌ ಕೆಡವಿದರು. 31 ರನ್‌ ಮಾಡಿದ ಕುಣಾಲ್‌ ಚಂಡೇಲ ಅವರದೇ ಉತ್ತರಾಖಂಡ ಸರದಿಯ ಗರಿಷ್ಠ ಗಳಿಕೆ ಕರ್ನಾಟಕಕ್ಕೆ ಆರ್‌. ಸಮರ್ಥ್ -ಮಾಯಾಂಕ್‌ ಅಗರ್ವಾಲ್‌ ಪ್ರಚಂಡ ಆರಂಭ ಒದಗಿಸಿದ್ದು, 26 ಓವರ್‌ಗಳ ಆಟದಲ್ಲಿ 123 ರನ್‌ ಪೇರಿಸಿದ್ದಾರೆ. ಇದರಲ್ಲಿ ಕಪ್ತಾನ ಅಗರ್ವಾಲ್‌ ಕೊಡುಗೆ ಅಜೇಯ 65 ರನ್‌ (86 ಎಸೆತ, 9 ಬೌಂಡರಿ, 1 ಸಿಕ್ಸರ್‌). ಸಮರ್ಥ್ 54 ರನ್‌ ಮಾಡಿ ಆಡುತ್ತಿದ್ದಾರೆ (74 ಎಸೆತ, 7 ಬೌಂಡರಿ).

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next