Advertisement

ರಣಜಿ: ಸರ್ವೀಸಸ್‌ ವಿರುದ್ಧ ವಿಫ‌ಲವಾದ ಕರ್ನಾಟಕ ಬ್ಯಾಟಿಂಗ್‌

10:52 PM Dec 13, 2022 | Team Udayavani |

ಬೆಂಗಳೂರು: ನಗರದ ಚಿನ್ನಸ್ವಾಮಿ ಮೈದಾನದಲ್ಲಿ 99ನೇ ರಣಜಿ ಪಂದ್ಯ ಆರಂಭವಾಗಿದೆ.

Advertisement

ಮಾಯಾಂಕ್‌ ಅಗರ್ವಾಲ್‌ ನೇತೃತ್ವದ ಕರ್ನಾಟಕ ತಂಡ, ಸರ್ವೀಸಸ್‌ ತಂಡವನ್ನು ತನ್ನ ರಣಜಿ ಇತಿಹಾಸದಲ್ಲೇ ಮೊದಲ ಬಾರಿ ಎದುರಿಸಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ರಾಜ್ಯ ಒಟ್ಟು 40 ಓವರ್‌ಗಳನ್ನು ಎದುರಿಸಿ 6 ವಿಕೆಟ್‌ಗಳನ್ನು ಕಳೆದುಕೊಂಡು 148 ರನ್‌ಗಳನ್ನು ಗಳಿಸಿತು. ಮಂದಬೆಳಕು, ಮಳೆಯ ಕಾರಣದಿಂದ ದಿನದಾಟ ಪೂರ್ಣವಾಗಿ ನಡೆಯಲಿಲ್ಲ.

ಕರ್ನಾಟಕದ ನಾಯಕ ಮಾಯಾಂಕ್‌ ಅಗರ್ವಾಲ್‌ ಇದೇ ಮೊದಲ ಬಾರಿಗೆ ನಾಯಕತ್ವ ವಹಿಸಿದರು. ಇಲ್ಲವರಿಗೆ ವೈಫ‌ಲ್ಯವೇ ಎದುರಾಯಿತು. ಆರ್‌.ಸಮರ್ಥ್ರಂತೆಯೇ ಕೇವಲ 8 ರನ್‌ಗಳಿಗೆ ಹೊರ ನಡೆದರು. ರಾಜ್ಯವನ್ನು ಆಧರಿಸಿದ್ದು ಹೊಸಬ ವಿಶಾಲ್‌ ಒನತ್‌. ಅವರು 79 ಎಸೆತಗಳಲ್ಲಿ 33 ರನ್‌ ಗಳಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ನಿಕಿನ್‌ ಜೋಸ್‌ ಅತ್ಯುತ್ತಮ ನಿರ್ವಹಣೆ ತೋರಿದರು. ಅವರು 83 ಎಸೆತಗಳಲ್ಲಿ 62 ರನ್‌ ಗಳಿಸಿದರು. ಈ ಇಬ್ಬರು ಕೈಹಿಡಿಯದಿದ್ದರೆ ರಾಜ್ಯ ಆಲೌಟ್‌ಗೆ ಸಮೀಪವಾಗುವ ಸಾಧ್ಯತೆಯಿತ್ತು. ಸರ್ವೀಸಸ್‌ ತಂಡದ ಪರ ವೇಗಿ ದಿವೇಶ್‌ ಪಠಾಣಿಯ ಅತ್ಯುತ್ತಮ ಬೌಲಿಂಗ್‌ ಮಾಡಿ 40 ರನ್‌ ನೀಡಿ 5 ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ 148/6 (ನಿಕಿನ್‌ ಜೋಸ್‌ 62, ವಿಶಾಲ್‌ ಒನತ್‌ 33, ದಿವೇಶ್‌ ಪಠಾಣಿಯ 40ಕ್ಕೆ 5)

Advertisement

Udayavani is now on Telegram. Click here to join our channel and stay updated with the latest news.

Next