Advertisement

ರಂಜನಿಪುತ್ರ

06:30 AM Dec 22, 2017 | Harsha Rao |

ನಿರ್ದೇಶಕ ಹರ್ಷ ಮುಖದಲ್ಲಿ ಸುಸ್ತು ಎದ್ದು ಕಾಣುತ್ತಿತ್ತು. ಆಗಷ್ಟೇ ಡಿಟಿಎಸ್‌ನಿಂದ ಎದ್ದು ಬಂದಿದ್ದರು. ಆ ಸುಸ್ತುವಿನಲ್ಲೂ ಅವರ ಮುಖದಲ್ಲಿ ಖುಷಿ ಅರಳಲು ಕಾರಣ ಕೊನೆಗಳಿಗೆಯಲ್ಲಾದ ಸೆನ್ಸಾರ್‌. ಹೌದು, ಹರ್ಷ ನಿರ್ದೇಶನದ ಪುನೀತ್‌ ರಾಜಕುಮಾರ್‌ ನಟನೆಯ “ಅಂಜನಿಪುತ್ರ’ ಚಿತ್ರ ನಿನ್ನೆಯಷ್ಟೇ (ಡಿ.21) ತೆರೆಕಂಡಿದೆ. ಹರ್ಷ ಸಿನಿಮಾವನ್ನು ಸೆನ್ಸಾರ್‌ ಮಾಡಿಸುವುದರಲ್ಲಿ, ಕ್ಯೂಬ್‌ಗ ಅಪ್‌ಲೋಡ್‌ ಮಾಡುವುದರಲ್ಲಿ ಬಿಝಿಯಾಗಿದ್ದರು. ಗ್ಯಾಪಲ್ಲೊಂದು ಪ್ರಸ್‌ಮೀಟ್‌ಗೂ ತಮ್ಮ ತಂಡದೊಂದಿಗೆ ಬಂದಿದ್ದರು. 

Advertisement

“ತುಂಬಾ ಖುಷಿಯಾಗುತ್ತಿದೆ. ಯಾವುದೇ ಮ್ಯೂಟ್‌, ಕಟ್ಸ್‌ ಇಲ್ಲದೇ “ಯು/ಎ’ ಪ್ರಮಾಣ ಪತ್ರ ಸಿಕ್ಕಿದೆ’ ಎಂದು ಖುಷಿಯಾದರು. ಇದು ತಮಿಳಿನ “ಪೂಜೈ’ ಚಿತ್ರದ ರೀಮೇಕ್‌. ಹಾಗಂತ ಯಥಾವತ್‌ ರೀಮೇಕ್‌ ಮಾಡಿಲ್ಲವಂತೆ. ಸಾಕಷ್ಟು ಬದಲಾವಣೆ ಮಾಡಿಕೊಂಡು ಮಾಡಿದ್ದಾಗಿ ಹೇಳುತ್ತಾರೆ ಹರ್ಷ. ಇನ್ನು, ಪುನೀತ್‌ ಅವರ ಒಡನಾಟ ಚಿತ್ರರಂಗಕ್ಕೆ ಬರುವ ಮುಂಚೆಯೇ ಇದ್ದರೂ ಅವರಿಗೆ ಸಿನಿಮಾ ನಿರ್ದೇಶನ ಮಾಡುವ ಅವಕಾಶ ಸಿಕ್ಕಿರಲಿಲ್ಲವಂತೆ. ಈಗ “ಅಂಜನಿಪುತ್ರ’ ಮೂಲಕ ಸಿಕ್ಕಿದೆ. ಈ ಚಿತ್ರವನ್ನು ಎಂ.ಎನ್‌.ಕುಮಾರ್‌ ನಿರ್ಮಿಸಿದ್ದಾರೆ. ಎಂ.ಎನ್‌.ಕುಮಾರ್‌ ಹಾಗೂ ಹರ್ಷ ಅವರ ಚಿತ್ರರಂಗದ ಸಂಬಂಧಕ್ಕೆ ಒಂದು ಇತಿಹಾಸವಿದೆಯಂತೆ. ಹರ್ಷ ನೃತ್ಯ ನಿರ್ದೇಶಕರಾಗಿದ್ದು “ರಂಗ ಎಸ್‌ಎಸ್‌ಎಲ್‌ಸಿ’ ಸಿನಿಮಾ ಮೂಲಕ. ಈ ಸಿನಿಮಾವನ್ನು ಎಂ.ಎನ್‌.ಕುಮಾರ್‌ ನಿರ್ಮಿಸಿದ್ದರು. ಇನ್ನು, ಹರ್ಷ ನಟರಾಗಿದ್ದು “ಕಾಶಿ’ ಚಿತ್ರದಲ್ಲಿ. ಅದರ ನಿರ್ಮಾಣ ಕೂಡಾ ಕುಮಾರ್‌ ಅವರದು. ಹರ್ಷ ಮೊದಲ ಬಾರಿಗೆ ನಿರ್ದೇಶಿಸಿದ “ಗೆಳೆಯ’ ಚಿತ್ರವನ್ನು ನಿರ್ಮಿಸಿದ್ದು ಕೂಡಾ ಎಂ.ಎನ್‌. ಕುಮಾರ್‌. ಈಗ ಅವರಿಬ್ಬರ ಕಾಂಬಿನೇಶನ್‌ನಲ್ಲಿ “ಅಂಜನಿಪುತ್ರ’ ಬರುತ್ತಿದೆ. 

ಪುನೀತ್‌ ರಾಜಕುಮಾರ್‌ ಕೂಡಾ “ಅಂಜನಿಪುತ್ರ’ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಅದಕ್ಕೆ ಕಾರಣ ಇದು ಫ್ಯಾಮಿಲಿ ಎಂಟರ್‌ಟೈನರ್‌. ಚಿತ್ರದ ಬಗ್ಗೆ ಮಾತನಾಡುವ ಪುನೀತ್‌, “ಇದು ಪಕ್ಕಾ ಆ್ಯಕ್ಷನ್‌ ಚಿತ್ರ. ಇದೊಂದು ಪವರ್‌ಫ‌ುಲ್‌ ಕಥೆ. ಅದಕ್ಕೊಂದು ಪವರ್‌ಫ‌ುಲ್‌ ಶೀರ್ಷಿಕೆ ಬೇಕಿತ್ತು. ಹರ್ಷ ಅವರಿಗೆ ಆಂಜನೇಯ ಅಂದರೆ ಪ್ರೀತಿ. ಎಲ್ಲರಿಗೂ “ಅಂಜನಿ ಪುತ್ರ’ ಟೈಟಲ್‌ ಇಷ್ಟ ಆಯ್ತು. ಅದನ್ನೇ ಫಿಕ್ಸ್‌ ಮಾಡಿದ್ವಿ. ಇಲ್ಲಿ ಒಳ್ಳೆಯ ಫ್ಯಾಮಿಲಿ ಸೆಂಟಿಮೆಂಟ್‌, ಎಮೋಷನಲ್‌ ಇದೆ.

ಇದರೊಂದಿಗೆ ಅಪ್ಪಟ ಮನರಂಜನೆಯೂ ಇದೆ’ ಎನ್ನುತ್ತಾರೆ. ನಿರ್ದೇಶಕ ಹರ್ಷ ಮತ್ತು ಪುನೀತ್‌ ಅವರದು ಸುಮಾರು ಹದಿನೆಂಟು ವರ್ಷದ ಒಡನಾಟವಂತೆ.  ಆ ಫ್ರೆಂಡ್‌ಶಿಪ್‌ ಚೆನ್ನಾಗಿದ್ದರಿಂದ ಸುಲಭವಾಗಿಯೇ ಈ ಚಿತ್ರ ಮಾಡೋಕೆ ಸಾಧ್ಯವಾಯಿತು ಎನ್ನುತ್ತಾರೆ ಪುನೀತ್‌. ನಾಯಕಿ ರಶ್ಮಿಕಾ ಮಂದಣ್ಣ ಕೂಡಾ ಸಿನಿಮಾ ಬಗ್ಗೆ ಖುಷಿ ಹಂಚಿಕೊಂಡರು.
ಚಿತ್ರದ ನಿರ್ಮಾಪಕ ಎಂ.ಎನ್‌.ಕುಮಾರ್‌ ಚಿತ್ರವನ್ನು 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಹೊರರಾಜ್ಯ ಹಾಗೂ ಹೊರದೇಶಗಳಲ್ಲೂ “ಅಂಜನಿಪುತ್ರ’ ತೆರೆಕಾಣಲಿದೆ ಎಂದರು. ಸಂಗೀತ ನಿರ್ದೇಶಕ ರವಿ ಬಸೂÅರು ಪ್ರತಿಭೆಯನ್ನು ಗುರುತಿಸಿ ಅವಕಾಶ ಕೊಟ್ಟಿದ್ದಕ್ಕೆ ಥ್ಯಾಂಕ್ಸ್‌ ಹೇಳಿದರು.

–  ರವಿಪ್ರಕಾಶ್‌ ರೈ

Advertisement
Advertisement

Udayavani is now on Telegram. Click here to join our channel and stay updated with the latest news.

Next