ಕೊಲಂಬೊ: ಈ ಹಿಂದೆ ಐದು ಬಾರಿ ದ್ವೀಪರಾಷ್ಟ್ರದ ಪ್ರಧಾನಿಯಾಗಿದ್ದ ರಣಿಲ್ ವಿಕ್ರಮ್ ಸಿಂಘ ಅವರನ್ನು ಮತ್ತೆ ಶ್ರೀಲಂಕಾದ ಪ್ರಧಾನಿಯನ್ನಾಗಿ ನೇಮಕ ಮಾಡುವ ಸಾಧ್ಯತೆ ಇದ್ದಿರುವುದಾಗಿ ಸ್ಥಳೀಯ ಮಾಧ್ಯಮಗಳ ವರದಿ ತಿಳಿಸಿದೆ.
ಇದನ್ನೂ ಓದಿ:ಸಿದ್ದರಾಮಯ್ಯ – ಡಿಕೆಶಿ ಜಗಳದಿಂದಲೇ ಬಿಜೆಪಿಗೆ 50ಕ್ಕೂ ಹೆಚ್ಚು ಸೀಟು ಬರಲಿದೆ : ಕಟೀಲ್
ಗುರುವಾರ ಸಂಜೆ ಅಥವಾ ರಾತ್ರಿ ವಿಕ್ರಮ್ ಸಿಂಘ ಅವರು ಶ್ರೀಲಂಕಾದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಬೇಕೆಂದು ಹಲವಾರು ಸಂಸದರು ಮನವಿ ಮಾಡಿಕೊಂಡಿದ್ದು, ಶೀಘ್ರವೇ ದೇಶದ ಸಮಸ್ಯೆಯನ್ನು ನಿವಾರಿಸುವಂತೆ ತಿಳಿಸಿರುವುದಾಗಿ ವರದಿ ವಿವರಿಸಿದೆ.
225 ಸದಸ್ಯ ಬಲದ ಸಂಸತ್ ನ ಸುಮಾರು 160 ಮಂದಿ ಸಂಸದರು ವಿಕ್ರಮ್ ಸಿಂಘ ಅವರನ್ನು ಪ್ರಧಾನಿಯನ್ನಾಗಿ ನೇಮಕ ಮಾಡಲು ಬೆಂಬಲಿಸಿದ್ದಾರೆ. ಆದರೆ ವಿಕ್ರಮ್ ಸಿಂಘ ಅವರು ಈ ಬಗ್ಗೆ ಏನನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ ಎಂದು ಅಭಯವರ್ಧನ್ ತಿಳಿಸಿದ್ದಾರೆ.
Related Articles
ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಕೂಡಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪ್ರಧಾನಿಯನ್ನು ನೇಮಕ ಮಾಡುವ ಅಧಿಕಾರ ಗೋಟಬಯಾ ಅವರದ್ದಾಗಿದೆ. ಒಂದು ವೇಳೆ ವಿಕ್ರಮಸಿಂಘ ಅವರನ್ನು ರಾಜಪಕ್ಸೆ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದರೆ, ಲಂಕಾದಲ್ಲಿನ ಹಿಂಸಾಚಾರ ನಿಯಂತ್ರಣಕ್ಕೆ ಬರಲಿದೆ ಎಂದು ವರದಿ ಹೇಳಿದೆ.
ದೇಶಬಿಟ್ಟು ಹೋಗುವಂತಿಲ್ಲ: ಮಹೀಂದ ರಾಜಪಕ್ಸೆ ಮತ್ತು ಕುಟುಂಬಕ್ಕೆ ಕೋರ್ಟ್
ದೇಶದಲ್ಲಿನ ಹಿಂಸಾಚಾರ ಘಟನೆಯ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಮಹೀಂದ ರಾಜಪಕ್ಸೆ ಮತ್ತು ಪುತ್ರ ನಮಲ್ ರಾಜಪಕ್ಸೆ ಹಾಗೂ ಇತರ 15 ಮಂದಿ ದೇಶ ಬಿಟ್ಟು ತೆರಳುವಂತಿಲ್ಲ ಎಂದು ಶ್ರೀಲಂಕಾ ಕೋರ್ಟ್ ಗುರುವಾರ ತೀರ್ಪು ನೀಡಿರುವುದಾಗಿ ವರದಿ ತಿಳಿಸಿದೆ.