Advertisement

ವಿಕ್ರಮಸಿಂಘೆ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಆಯ್ಕೆ; 44 ವರ್ಷದ ಬಳಿಕ ಸಂಸತ್ ನಲ್ಲಿ ಆಯ್ಕೆ

01:26 PM Jul 20, 2022 | Team Udayavani |

ಕೊಲಂಬೋ: ಗೊಟಬಯ ರಾಜಪಕ್ಸೆ ರಾಜೀನಾಮೆಯಿಂದ ತೆರವಾಗಿರುವ ಶ್ರೀಲಂಕಾದ ಅಧ್ಯಕ್ಷ ಹುದ್ದೆಗೆ ಬುಧವಾರ (ಜುಲೈ 20) ನಡೆದ ಚುನಾವಣೆಯಲ್ಲಿ ರನಿಲ್ ವಿಕ್ರಮಸಿಂಘೆ ದ್ವೀಪರಾಷ್ಟ್ರದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Advertisement

ಇದನ್ನೂ ಓದಿ:2ನೇ ತ್ರೈಮಾಸಿಕದಲ್ಲಿ 10 ಲಕ್ಷ ಚಂದಾದಾರರನ್ನು ಕಳೆದುಕೊಂಡ ನೆಟ್ ಫ್ಲಿಕ್ಸ್, ಆದಾಯ ಕುಸಿತ

ಗೊಟಬಯ ರಾಜಪಕ್ಸೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ವಿಕ್ರಮಸಿಂಘೆ ಅವರು ಹಂಗಾಮಿ ಅಧ್ಯಕ್ಷರಾಗಿದ್ದರು. 225 ಸದಸ್ಯ ಬಲದ ಲಂಕಾದ ಸಂಸತ್ ನಲ್ಲಿ ಆರು ಬಾರಿ ಪ್ರಧಾನಿಯಾಗಿದ್ದ ವಿಕ್ರಮಸಿಂಘೆಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಾಗಿ ವರದಿ ತಿಳಿಸಿದೆ.

ಶ್ರೀಲಂಕಾದ ಅಧ್ಯಕ್ಷರ ಚುನಾವಣೆಯಲ್ಲಿ ಅಂತಿಮವಾಗಿ ಶ್ರೀಲಂಕಾ ಪೊದುಜನ ಪೆರಮುನ (ಎಸ್ ಎಲ್ ಪಿಪಿ) ಪಕ್ಷದ ರನಿಲ್ ವಿಕ್ರಮಸಿಂಘೆ, ಸಿಂಹಳ ಬುದ್ದಿಸ್ಟ್ ನ್ಯಾಷನಲ್ ಪಕ್ಷದ ಡಲ್ಲಾಸ್ ಅಲಹೆಪ್ಪೆರುಮ ಅನುರಕುಮಾರ ದಿಸ್ಸನಾಯಕರೆ ಉಳಿದಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು.

44 ವರ್ಷದ ಬಳಿಕ ಸಂಸತ್ ನಲ್ಲಿ ಮತ:

Advertisement

ಶ್ರೀಲಂಕಾ ಸಂಸತ್ ನಲ್ಲಿ ಮತದಾನದ ಮೂಲಕ ಅಧ್ಯಕ್ಷರ ಆಯ್ಕೆ ನಡೆದ ಇತಿಹಾಸ ತುಂಬಾ ಅಪರೂಪ. 1978ರ ನಂತರ ನೂತನ ಅಧ್ಯಕ್ಷರ ಆಯ್ಕೆಗೆ ಮತದಾನ ನಡೆದಿಲ್ಲ. 1982, 1988, 1994, 1999, 2005, 2010, 2015 ಮತ್ತು 2019ರಲ್ಲಿ ಮತದಾನದ ಮೂಲಕ ಆಯ್ಕೆ ಮಾಡಲಾಗಿತ್ತು. 1993ರಲ್ಲಿ ಅಂದಿನ ಅಧ್ಯಕ್ಷ ರಣಸಿಂಘೆ ಪ್ರೇಮದಾಸ ಹತ್ಯೆ ನಂತರ ಡಿ.ಬಿ.ವಿಜೆತುಂಗ ಅವರನ್ನು ಉಳಿದ ಅವಧಿಗಾಗಿ ಚುನಾವಣೆ ನಡೆಸದೇ ಸರ್ವಾನುಮತದಿಂದ ಆಯ್ಕೆ ಮಾಡಲಾಗಿತ್ತು.ಇದೀಗ ರನಿಲ್ ವಿಕ್ರಮಸಿಂಘೆ ಕೂಡಾ 2024ರವರೆಗೆ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ವಿಕ್ರಮಸಿಂಘೆ ವಿರುದ್ಧವೂ ಆಕ್ರೋಶ:

ಗೊಟಬಯ ರಾಜಪಕ್ಸೆ ರಾಜೀನಾಮೆ ನಂತರ ಪ್ರಧಾನಿ ಸ್ಥಾನಕ್ಕೆ ರನಿಲ್ ವಿಕ್ರಮಸಿಂಘೆ ಕೂಡಾ ರಾಜೀನಾಮೆ ನೀಡಬೇಕೆಂದು ಲಂಕಾದಲ್ಲಿ ಪ್ರತಿಭಟನಾಕಾರರು ಆಗ್ರಹಿಸಿದ್ದರು. ನೂತನ ಅಧ್ಯಕ್ಷ ರನಿಲ್ ಅವರು ದೇಶದಲ್ಲಿ ತುರ್ತು ಸ್ಥಿತಿಯನ್ನು ಮುಂದುವರಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next