Advertisement

ಕೋವಿಡ್ ವಾರಿಯರ್ಸ್‌ಗೆ ಸನ್ಮಾನ

04:40 PM Jun 27, 2020 | Naveen |

ರಾಣಿಬೆನ್ನೂರ: ತಮ್ಮ ಪ್ರಾಣವನ್ನು ಲೆಕ್ಕಿಸದೇ ಕೋವಿಡ್ ವಾರಿಯರ್ಸ್‌ ಕಾರ್ಯನಿರ್ವಹಿಸಿದ್ದಾರೆ. ಅವರನ್ನು ಅಭಿನಂದಿಸುವುದು ಮಾನವೀಯ ಧರ್ನವಾಗಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

Advertisement

ತಾಲೂಕಿನ ಚಳಗೇರಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಗ್ರಾಪಂ ವತಿಯಿಂದ ನಡೆದ ಕೋವಿಡ್ ವಾರಿಯರ್ ಮತ್ತು ಗ್ರಾಪಂ ಆಡಳಿತ ಮಂಡಳಿ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಸಾರ್ವಜನಿಕರು ವೈರಸ್‌ ಕುರಿತು ಭಯ ಪಡದೇ ಸ್ವಚ್ಛತೆ ಹಾಗೂ ಸಮಾಜಿಕ ಅಂತರ ಕಾಯ್ದುಕೊಂಡು ಆರೋಗ್ಯಕರ ಜೀವನ ನಡೆಸಬೇಕು ಎಂದರು. ವಿಧಾನಪರಿಷತ್‌ ಸದಸ್ಯ ಆರ್‌. ಶಂಕರ್‌ ಮಾತನಾಡಿ, ಅನಾವಶ್ಯಕವಾಗಿ ಜನದಟ್ಟಣೆ ಪ್ರದೇಶಗಳಿಗೆ ಭಾರದೇ ಅಂತರ ಕಾಪಾಡಿಕೊಳ್ಳಿ ಎಂದರು.

ಗ್ರಾಪಂ ಅಧ್ಯಕ್ಷ ಕರೇಗೌಡ ದೋಳೇಹೊಳಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಶಿವಾನಂದ ಕನ್ನಪ್ಪಳವರ, ಮಾಜಿ ಸದಸ್ಯ ಸಂತೋಷ ಪಾಟೀಲ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ತಾಪಂ ಸದಸ್ಯೆ ರತ್ನಮ್ಮ ಇಟಗಿ, ಗ್ರಾಪಂ ಉಪಾಧ್ಯಕ್ಷೆ ಅಕ್ಕಮ್ಮ ಶಾಮನೂರ, ವಿಶ್ವನಾಥ ಪಾಟೀಲ, ಮಂಜಪ್ಪ ನಾಗೇನಹಳ್ಳಿ, ಬಸವರಾಜ ಹುಲ್ಲತ್ತಿ, ಅನಂತ ಇಟಗಿ, ಮಂಜುನಾಥ ಓಲೇಕಾರ, ಬಸವರಾಜ ಶಿಡೇನೂರ, ಭರಮಗೌಡ್ರ ಸಣ್ಣಗೌಡ್ರ, ಮಂಜುಳಾ ಲೋಕಿಕೇರಿ, ನಿಂಗಪ್ಪ ತಳವಾರ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next