ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ರಂಗೋಲಿ ಚಿತ್ತಾರ ಅರಳುತ್ತಿದ್ದು, ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮೀ ದೇವಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರನ್ನು ರಂಗೋಲಿಯಲ್ಲಿ ಮೂಡಿಸಲಾಗಿದೆ.
ಬೆಳಗಾವಿ ಗ್ರಾಮೀಣ ಉತ್ಸವ ಹಿನ್ನೆಲೆಯಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ. ಸುಳೇಭಾವಿ ಗ್ರಾಮದಲ್ಲಿ ಗುರುವಾರ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಅನೇಕ ಚಿತ್ರಗಳು ರಂಗೋಲಿಯ ಚಿತ್ತಾರದಲ್ಲಿ ಮೂಡಿ ಬಂದಿವೆ.
ಇದನ್ನೂ ಓದಿ:ಕಾರು ಬಿಟ್ಟು ಮೆಟ್ರೋ ಹತ್ತಿ ಕಲ್ಯಾಣ ಮಂಟಪ ತಲುಪಿದ ಮದುಮಗಳು! ವಿಡಿಯೋ ವೈರಲ್
ಮನೆ ಮನೆ ಎದುರು ಬಿಡಿಸಿರುವ ರಂಗೋಲಿ ಚಿತ್ತಾರ ಮನಸೂರೆಗೊಂಡಿವೆ. ರವಿ ಮೂಲಂಗಿ ಅವರ ಮನೆಯಲ್ಲಿ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿಯ ಚಿತ್ರ ರಂಗೋಲಿಯಲ್ಲಿ ಮನೋಜ್ಞವಾಗಿ ಅರಳಿದೆ. ಸುಳೇಭಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ ಸುಗಣೇನ್ನವರ ಅವರ ಮನೆ ಎದುರು ಲಕ್ಷ್ಮೀ ಹೆಬ್ಬಾಳಕರ ಹಾಗೂ ಚನ್ನರಾಜ ಹಟ್ಟಿಹೊಳಿ ರಂಗೋಲಿಯ ಚಿತ್ತಾರದಲ್ಲಿ ಮೂಡಿ ಬಂದಿವೆ. ಸೂಕ್ಷ್ಮವಾಗಿ ಈ ಚಿತ್ರಗಳನ್ನು ಬಿಡಿಸುವ ಮೂಲಕ ಗಮನ ಸೆಳೆದಿವೆ.
Related Articles
ಗ್ರಾಮದ ಬಹುತೇಕ ಮನೆಗಳ ಎದುರು ರಂಗೋಲಿ ಚಿತ್ರಗಳು ಮೂಡಿವೆ. ಎಲ್ಲರ ಮನಸೂರೆಗೊಳ್ಳುತ್ತಿವೆ. ನವಿಲು, ಶ್ರೀ ಕೃಷ್ಣ-ರಾಧೆ, ಕೊಳಲು ವಾದಕ ಸೇರಿದಂತೆ ವಿವಿಧ ಚಿತ್ರಗಳು ಮೂಡಿವೆ.