ದಶಮಾನೋತ್ಸವದ ಸಂದರ್ಭದಲ್ಲಿರುವ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ವತಿಯಿಂದ ದಸರ ಯಕ್ಷ ಪಯಣವನ್ನು ಸಂಪನ್ನಗೊಂಡಿತು.ಹತ್ತು ದಿನಗಳ ಕಾಲ ನಡೆದ ಈ ಪಯಣವು ಹೊಸದೊಂದು ದಾಖಲೆಯಾಗಿದೆ. ತಿರುಗಾಟದಲ್ಲಿ ಪುರಾಣ ಕತೆ, ಸ್ವಯಂಪ್ರಭೆ, ಚಕ್ರವರ್ತಿ ದಶರಥ, ಬಬ್ರುವಾಹನ, ಶಂಖರಾಸುರ ಕಾಳಗ, ಕಾಳಿಂಗ ಮರ್ದನ, ಏಕಾದಶಿ ದೇವಿ ಮಹಾತ್ಮೆ, ಯಜ್ಞ ಸಂರಕ್ಷಣೆ, ಸುದರ್ಶನ ವಿಜಯ, ಸುಧನ್ವ ಮೋಕ್ಷ, ಗಜೇಂದ್ರ ಮೋಕ್ಷ ಮೊದಲಾದ ಪುಣ್ಯಕಥಾ ಭಾಗಕ್ಕೆ ಒತ್ತು ನೀಡಲಾಗಿತ್ತು. ಸಂಚಾಲಕ ಶ್ರೀಶ ಕುಮಾರ ಪಂಜಿತ್ತಡ್ಕ, ಯಕ್ಷಗುರು ಬಾಯಾರು ಸೂರ್ಯನಾರಾಯಣ ಪದಕಣ್ಣಾಯ ಮಾರ್ಗದರ್ಶನದಲ್ಲಿ ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಯಕ್ಷಗಾನದ ಸಂಪನ್ನ ಪಸರಿಸಿತು. ಭಾಷೆ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ “ರಂಗಸಿರಿ ಸಾಂಸ್ಕೃತಿಕ ವೇದಿಕೆ’ ರಂಗಕ್ಕಿಳಿದೆಯೆಂದರೂ ತಪ್ಪಗಲಾರದು. ರಂಗದಲ್ಲಿ ಬಾಲ ವಿಧ್ಯಾರ್ಥಿಗಳು ಹಾಗೂ ಹಿರಿಯ ಕಲಾವಿದರು ರಂಗಕ್ಕೆ ಕಳೆಯನ್ನಿತ್ತರು. ಅಂತು ಈ 10 ದಿನಗಳ ತಿರುಗಾಟ ಕಲಾಭಿಮಾನಿಗಳಲ್ಲಿ ಯಕ್ಷಗಾನ ಕಲೆ ಇನ್ನೂ ಉಚ್ಛ್ರಾಯಸ್ಥಿತಿಯಲ್ಲಿದೆ ಎನ್ನುವುದನ್ನು ಸಾಬೀತುಪಡಿಸಿತು.
– ಪ್ರಸಾದ ಮೈರ್ಕಳ