Advertisement

ಏರೋ ಶೋನಲ್ಲಿ ರಂಗಸನ್ಸ್‌ ರಕ್ಷಣಾ ಪರಿಹಾರ ಪ್ರದರ್ಶನ

06:23 AM Feb 23, 2019 | Team Udayavani |

ಬೆಂಗಳೂರು: ದೇಶದ ಪ್ರಮುಖ ವೈಮಾನಿಕ ಉತ್ಪನ್ನ ತಂತ್ರಜ್ಞಾನ ಕಂಪನಿ ಎನಿಸಿರುವ ಎನ್‌ಆರ್‌ ಸಮೂಹದ ರಂಗಸನ್ಸ್‌ ಡಿಫೆನ್ಸ್‌ ಸಲ್ಯೂಷನ್ಸ್‌ ಏರೋ ಇಂಡಿಯಾ 2019 ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಿದೆ.

Advertisement

ರಕ್ಷಣಾ, ಏರೋಸ್ಪೇಸ್‌ ಮತ್ತು ಹೋಮ್‌ಲ್ಯಾಂಡ್‌ ಸೆಕ್ಯೂರಿಟಿ ಡೊಮೇನ್‌ನಲ್ಲಿ ಎರಡೂವರೆ ದಶಕಗಳ ಅನುಭವ ಹೊಂದಿರುವ ಮೈಸೂರು ಮೂಲದ ಈ ಕಂಪನಿ ಕಾನ್ಸೆಪ್ಟ್, ಪ್ರೊಟೋಟೈಪಿಂಗ್‌, ಉತ್ಪನ್ನ ಅಭಿವೃದ್ಧಿ ಹಾಗೂ ಪ್ಲಾಟ್‌ಫಾರ್ಮ್ ಏಕೀಕರಣ ಸೇವೆಗಳಲ್ಲಿ ಪರಿಣಿತಿ ಪಡೆದಿದ್ದು ದೇಶದ ರಕ್ಷಣೆಗಾಗಿ ಉನ್ನತ ತಂತ್ರಜ್ಞಾನ ಹಾಗೂ ಗುಣಮಟ್ಟದ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ.

ಗಡಿಭಾಗದ ಚಲನವಲನಗಳ ಮೇಲೆ ನಿಗಾ ಇಡುವ ಮತ್ತು ಮುನ್ಸೂಚನೆ ಕೊಡುವ ಯಾವುದೇ ಏರ್‌ಬೋರ್ನ್ ಕಾಂಪ್ಯಾಕ್ಟ್ ಹಿಟ್‌ ಎಕ್ಸ್‌ಚೇಂಜ್‌ (ಸ್ಯಾಟ್‌ಕಾಂ ಆನ್‌ ದಿ ಮೂವ್‌) ಟರ್ಮಿನಲ್‌ ತಯಾರಿಸಿದ ಮೊದಲ ಕಂಪನಿ ನಮ್ಮದಾಗಿದೆ.

ಏರೋ ಶೋನಲ್ಲಿ ಸ್ಯಾಟ್‌ಕಾಂ, ಹಿಟ್‌ ಎಕ್ಸ್‌ಚೇಂಜರ್‌, ನೇವಿಕ್‌ ರಿಸೀವರ್‌, ಸಾಫ್ಟ್‌ವೇರ್‌ ಡಿಫೈನ್‌ ಮೆಶ್‌ ರೇಡಿಯೋಗಳು, ಟ್ಯಾಕ್ಟಿಕಲ್‌ ಡಾಟಾ ಲಿಂಕ್‌ಗಳು ಇತ್ಯಾದಿ ಉತ್ಪನ್ನಗಳು ಪ್ರದರ್ಶನಗೊಳ್ಳಲಿವೆ ಎಂದು ಕಂಪನಿ ವ್ಯವಸ್ಥಾಪಕ ನಿರ್ದೇಶಕ ಪವನ್‌ ರಂಗ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next