Advertisement

ಸಿರಿಬಾಗಿಲು ಪ್ರತಿಷ್ಠಾನದ ‘ರಂಗಪ್ರಸಂಗ 5’ಯಶಸ್ವೀ ಕಾರ್ಯಕ್ರಮ

04:20 AM Jul 19, 2017 | Team Udayavani |

ಸಿರಿಬಾಗಿಲು: ಸಿರಿ ಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೊಡು ಸಂಸ್ಥೆಯು ನಡೆಸಿಕೊಂಡು ಬರುತ್ತಿರುವ ರಂಗ ಪ್ರಸಂಗ ಸರಣಿ ಕಾರ್ಯಕ್ರಮದ ಐದನೇ ಕಾರ್ಯಕ್ರಮ ‘ರಂಗಪ್ರಸಂಗ 5’ ಶ್ರೀ ರಾಮ ಕಲಾಸಂಘ ಕೋಣನ ಕುಂಟೆ ಹಾಗೂ ಶ್ರೀ ಪಾಂಚಜನ್ಯ ಯಕ್ಷಗಾನ ಕಲಾಸಂಘ ನೇರಳಕಟ್ಟೆ ಸಂಸ್ಥೆಗಳ ಸಹಕಾರಗೊಂದಿಗೆ ಬೆಂಗಳೂರಿನ ಕೋಣನಕುಂಟೆ ಜೆ.ಪಿ. ನಗರದ ಶ್ರೀ ಲಕ್ಷ್ಮೀ ನರಸಿಂಹ ಧಾರ್ಮಿಕ ಸಭಾಂಗಣದಲ್ಲಿ ಯಶಸ್ವಿಯಾಗಿ ಜರಗಿತು. ರಂಗಪ್ರಸಂಗ ಉದ್ಘಾಟನಾ ಸಮಾರಂಭದಲ್ಲಿ ಕಿಶೋರ್‌ ಹೊಳ್ಳ, ಚಿದಾನಂದ ಕಾಮತ್‌ ಚೇವಾರು, ಸುಬ್ರಹ್ಮಣ್ಯ ಭಟ್‌ ಪರೆಂಗೋಡು, ಸುಬ್ರಹ್ಮಣ್ಯ ಭಟ್‌ ಪೆರುವೋಡಿ, ರಾಜಗೋಪಾಲ ಕನ್ಯಾನ ಭಾಗವಹಿಸಿದ್ದರು. ಸಿರಿಬಾಗಿಲು ಪ್ರತಿಷ್ಠಾನದ ರಾಮಕೃಷ್ಣ ಮಯ್ಯ ಸಿರಿಬಾಗಿಲು ಸ್ವಾಗತಿಸಿ, ರವಿಶಂಕರ ಭಟ್‌ ವಳಕುಂಜ ಪ್ರಾಸ್ತಾವಿಕ ನುಡಿಗಳನ್ನಾಡಿ ಗುರುರಾಜ ಹೊಳ್ಳ ಬಾಯಾರು ನಿರೂಪಿಸಿ, ವಂದಿಸಿದರು.

Advertisement

ರಂಗಪ್ರಸಂಗದ ಭಾಗವಾಗಿ ಮರೆಯಾಗುತ್ತಿರುವ ಪೂರ್ವರಂಗದ ಭಾಗಗಳನ್ನು ಪ್ರದರ್ಶಿಸಿ ದಾಖಲೀಕರಣ ಗೈಯ್ಯಲಾಯಿತು. ಅದರಂತೆ  ನಿತ್ಯವೇಷ, ಷಣ್ಮುಖ ಸುಬ್ರಾಯ, ಅರ್ಧನಾರೀಶ್ವರ, ಚಪ್ಪರಮಂಚ, ಹನುಮಂತನ ಒಡ್ಡೋಲಗ ಮೊದಲಾದ ಅಪರೂಪದ ವೇಶಗಳನ್ನು ಆಡಿ ತೋರಿಸಲಾಯಿತು. ಬಳಿಕ ‘ಶ್ರೀರಾಮ ಕಲಾಸಂಘ ಕೋಣನ ಕುಂಟೆ’ ಇದರ ಹನ್ನೊಂದನೇ ರ್ವಾಕೋತ್ಸವದ ಪ್ರಯುಕ್ತ ‘ಶ್ರೀ ಪಾಂಚಜನ್ಯ ಯಕ್ಷಗಾನ ಕಲಾಸಂಘ ನೇರಳಕಟ್ಟೆ ಇವರಿಂದ  ಪಾರಿಜಾತ-ನರಕಾಸುರ-ರಕ್ತರಾತ್ರಿ ಎಂಬ ಯಕ್ಷಗಾನ ಬಯಲಾಟ ಜರಗಿತು. ಸಮಾರಂಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಅವರನ್ನು ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next