ಜೋಲಾರ್‌ಪೆಟ್ಟಾಯಿ: ರಾಜೀವ್‌ಗಾಂಧಿ ಹಂತಕ ಪೆರಾರಿವೇಲನ್ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶಿಸಿರುವುದನ್ನು ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಸ್ವಾಗತಿಸಿದರೆ, ಕಾಂಗ್ರೆಸ್ ಮಾತ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಹಂತಕನ ಬಿಡುಗಡೆ ಅತ್ಯಂತ ನೋವು ಮತ್ತು ನಿರಾಸೆ ಉಂಟುಮಾಡಿದೆ ಎಂದು ಕಾಂಗ್ರೆಸ್ ಹೇಳಿದೆ. “ಒಬ್ಬ ಭಯೋತ್ಪಾದಕನೆಂದರೆ ಆತ ಭಯೋತ್ಪಾದಕನೇ. ಅವನನ್ನು ಅದೇ ರೀತಿ ನಡೆಸಿಕೊಳ್ಳಬೇಕು.
ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ಪ್ರತಿಯೊಬ್ಬ ವ್ಯಕ್ತಿಯ ಆತ್ಮಸಾಕ್ಷಿಗೂ ಇಂದು ನೋವಾಗಿದೆ. ಇಂದು ಇಡೀ ದೇಶಕ್ಕೆ ನೋವಿನ ದಿನ ಎಂದೂ ಹೇಳಿರುವ ಸುಜೇìವಾಲ, “ಜೀವಾವಧಿ ಶಿಕ್ಷೆ ಎದುರಿಸುತ್ತಿರುವ ಇತರ ಲಕ್ಷಾಂತರ ಮಂದಿಯನ್ನೂ ಇದೇ ರೀತಿ ಬಿಡುಗಡೆ ಮಾಡುತ್ತೀರಾ’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಪ್ರಶ್ನಿಸಿದ್ದಾರೆ.
ರಾಜೀವ್ ಹತ್ಯೆ ಪ್ರಕರಣದಲ್ಲಿ ಒಟ್ಟು 7 ಮಂದಿಯನ್ನು ಕೋರ್ಟ್ ಅಪರಾಧಿಗಳೆಂದು ಘೋಷಿಸಿ, ಗಲ್ಲುಶಿಕ್ಷೆ ವಿಧಿಸಿತ್ತು. 2014ರಲ್ಲಿ ಸುಪ್ರೀಂ ಕೋರ್ಟ್ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿತ್ತು. ಈ ಪೈಕಿ ನಳಿನಿಗೆ ನೀಡಿದ್ದ ಮರಣದಂಡನೆ ಯನ್ನು 2000ದಲ್ಲೇ ಜೀವಾವಧಿ ಶಿಕ್ಷೆಗೆ ಇಳಿಸಲಾಗಿತ್ತು. ಆಕೆ ಜೈಲಲ್ಲೇ ಮಗುವಿಗೆ ಜನ್ಮ ನೀಡಿದ್ದ ಕಾರಣ, ಸೋನಿಯಾ ಗಾಂಧಿ ಅವರೇ ಮಧ್ಯಪ್ರವೇಶಿಸಿ ಶಿಕ್ಷೆ ತಗ್ಗಿಸುವಂತೆ ಮನವಿ ಮಾಡಿದ್ದರು.
Related Articles
ಅರುಪುತ್ತಮ್ಮಾಳ್ ಎಂಬ ಮಾತೃ ಸ್ವರೂಪಿ ಶಕ್ತಿ!
ಪೆರಾರಿವಾಲನ್ ಬಿಡುಗಡೆಯ ಹಿಂದೆ ಅವರ ತಾಯಿ ಅರುಪುತ್ತಮ್ಮಾಳ್‌ರವರ ತ್ಯಾಗಮಯ ಹೋರಾಟವಿದೆ ಎಂದು ಖುದ್ದು ಪೆರಾರಿವಾಲನ್ ಹೇಳಿಕೊಂಡಿದ್ದಾರೆ. ತಮಿಳಿನಲ್ಲಿ “ಅರುತ್ತಂ’ ಎಂದರೆ ಪವಾಡ ಎಂದರ್ಥ. ಇನ್ನು, ಅಮ್ಮಾಳ್ ಎಂದರೆ “ಮಾತೃ ಸ್ವರೂಪದಲ್ಲಿರುವ ಮಹಾ ಶಕ್ತಿ’ ಎಂದರ್ಥ. ಇವರೆಡೂ ಪದಗಳ ಸಮ್ಮಿಲನವಾದ ಹೆಸರನ್ನಿಟ್ಟುಕೊಂಡ ಈ 74 ವರ್ಷದ ತಾಯಿ, ತನ್ನ ಮಗನ ಬಿಡುಗಡೆಗಾಗಿ ಸತತ ಮೂವತ್ತು ವರ್ಷಗಳ ಕಾಲ ಕಾನೂನು ಹೋರಾಟ ಮಾಡಿ, ಕಡೆಗೂ ಅದನ್ನು ಸಾಧಿಸಿದ್ದಾರೆ.
31 ವರ್ಷಗಳ ಕಾನೂನು ಹೋರಾಟದಲ್ಲಿ ಈಗ ಗೆದ್ದು ಬಂದಿದ್ದೇನೆ. ಈಗ ನಾನು ಸ್ವಲ್ಪ ಉಸಿರಾಡಬೇಕಿದೆ. ನನ್ನ ಪ್ರಕಾರ ಗಲ್ಲುಶಿಕ್ಷೆಯಂಥ ಗರಿಷ್ಠ ಪ್ರಮಾಣದ ಶಿಕ್ಷೆಯ ಅಗತ್ಯವಿಲ್ಲ. ಎಲ್ಲರೂ ಮನುಷ್ಯರೇ ಅಲ್ಲವೇ?
– ಪೆರಾರಿವೇಲನ್, ರಾಜೀವ್‌ಗಾಂಧಿ ಹಂತಕ.