Advertisement
ಹಂತಕನ ಬಿಡುಗಡೆ ಅತ್ಯಂತ ನೋವು ಮತ್ತು ನಿರಾಸೆ ಉಂಟುಮಾಡಿದೆ ಎಂದು ಕಾಂಗ್ರೆಸ್ ಹೇಳಿದೆ. “ಒಬ್ಬ ಭಯೋತ್ಪಾದಕನೆಂದರೆ ಆತ ಭಯೋತ್ಪಾದಕನೇ. ಅವನನ್ನು ಅದೇ ರೀತಿ ನಡೆಸಿಕೊಳ್ಳಬೇಕು.
Related Articles
ಪೆರಾರಿವಾಲನ್ ಬಿಡುಗಡೆಯ ಹಿಂದೆ ಅವರ ತಾಯಿ ಅರುಪುತ್ತಮ್ಮಾಳ್‌ರವರ ತ್ಯಾಗಮಯ ಹೋರಾಟವಿದೆ ಎಂದು ಖುದ್ದು ಪೆರಾರಿವಾಲನ್ ಹೇಳಿಕೊಂಡಿದ್ದಾರೆ. ತಮಿಳಿನಲ್ಲಿ “ಅರುತ್ತಂ’ ಎಂದರೆ ಪವಾಡ ಎಂದರ್ಥ. ಇನ್ನು, ಅಮ್ಮಾಳ್ ಎಂದರೆ “ಮಾತೃ ಸ್ವರೂಪದಲ್ಲಿರುವ ಮಹಾ ಶಕ್ತಿ’ ಎಂದರ್ಥ. ಇವರೆಡೂ ಪದಗಳ ಸಮ್ಮಿಲನವಾದ ಹೆಸರನ್ನಿಟ್ಟುಕೊಂಡ ಈ 74 ವರ್ಷದ ತಾಯಿ, ತನ್ನ ಮಗನ ಬಿಡುಗಡೆಗಾಗಿ ಸತತ ಮೂವತ್ತು ವರ್ಷಗಳ ಕಾಲ ಕಾನೂನು ಹೋರಾಟ ಮಾಡಿ, ಕಡೆಗೂ ಅದನ್ನು ಸಾಧಿಸಿದ್ದಾರೆ.
Advertisement
31 ವರ್ಷಗಳ ಕಾನೂನು ಹೋರಾಟದಲ್ಲಿ ಈಗ ಗೆದ್ದು ಬಂದಿದ್ದೇನೆ. ಈಗ ನಾನು ಸ್ವಲ್ಪ ಉಸಿರಾಡಬೇಕಿದೆ. ನನ್ನ ಪ್ರಕಾರ ಗಲ್ಲುಶಿಕ್ಷೆಯಂಥ ಗರಿಷ್ಠ ಪ್ರಮಾಣದ ಶಿಕ್ಷೆಯ ಅಗತ್ಯವಿಲ್ಲ. ಎಲ್ಲರೂ ಮನುಷ್ಯರೇ ಅಲ್ಲವೇ?– ಪೆರಾರಿವೇಲನ್, ರಾಜೀವ್‌ಗಾಂಧಿ ಹಂತಕ.