Advertisement

ಟಿಕೆಟ್‌ಗೆ ಸುರ್ಜೇವಾಲ ವರದಿಯೇ ಆಧಾರ!

12:56 AM Jan 21, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಚುನಾವಣೆಗೆ ಟಿಕೆಟ್‌ ಹಂಚಿಕೆ ಸಂಬಂಧ ರಾಜ್ಯ ಉಸ್ತುವಾರಿಯಿಂದ ಆಂತರಿಕ ವರದಿ ಪಡೆಯಲು ಕಾಂಗ್ರೆಸ್‌ ಹೈಕಮಾಂಡ್‌ ತೀರ್ಮಾನಿಸಿದೆ.

Advertisement

ರಾಜ್ಯದ ಪ್ರತೀ ಜಿಲ್ಲೆಯಲ್ಲಿನ ರಾಜಕೀಯ ಪರಿಸ್ಥಿತಿ ಕಾಂಗ್ರೆಸ್‌ ಮಾತ್ರವಲ್ಲದೆ ಬಿಜೆಪಿ ಹಾಗೂ ಜೆಡಿಎಸ್‌ ಸಾಮರ್ಥ್ಯದ ಬಗ್ಗೆಯೂ ವಾಸ್ತವಿಕ ವರದಿ ಪಡೆದ ಅನಂತರವಷ್ಟೇ ಟಿಕೆಟ್‌ ಅಂತಿಮಗೊಳಿಸಲು ನಿರ್ಧರಿಸಿದೆ.

ಹೀಗಾಗಿ ಕರ್ನಾಟಕ ರಾಜ್ಯ ಕಾಂಗ್ರೆಸ್‌ ಉಸ್ತುವಾರಿಯಾಗಿರುವ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ಈ ಮಾಸಾಂತ್ಯಕ್ಕೆ ಹೈಕಮಾಂಡ್‌ಗೆ ಆಂತರಿಕ ವರದಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ರಾಜ್ಯದಲ್ಲಿ ಕೈಗೊಂಡಿರುವ ಜಂಟಿ ಬಸ್‌ ಯಾತ್ರೆಯ ನಡುವೆಯೇ ಸುಜೇìವಾಲಾ ಅವರು ಜಿಲ್ಲಾ ಮಟ್ಟದಲ್ಲಿ ರಾಜಕೀಯ ಪರಿಸ್ಥಿತಿಗಳ ಕುರಿತು “ಗ್ರೌಂಡ್‌ ರಿಪೋರ್ಟ್‌’ ಸಿದ್ಧಪಡಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ತಮ್ಮದೇ ಆದ ಮೂಲಗಳಿಂದ ಸಮೀಕ್ಷೆ ನಡೆಸಿ ಹೈಕಮಾಂಡ್‌ಗೆ ಸಲ್ಲಿಕೆ ಮಾಡಿದ್ದಾರೆ. ಅದರ ನಡುವೆ ಎಐಸಿಸಿ ವತಿಯಿಂದಲೂ ಕಳೆದ ನವೆಂಬರ್‌ನಲ್ಲಿ ಸಮೀಕ್ಷೆ ನಡೆ ಸಲಾಗಿತ್ತು. ಅನಂತರದಲ್ಲಿ ಸಾಕಷ್ಟು ವಿದ್ಯ ಮಾನಗಳು ನಡೆದಿದ್ದು, ಇದೀಗ ಮತ್ತೊಂದು ವರದಿ ಪಡೆಯಲು ತೀರ್ಮಾನಿಸಿದೆ.

ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ರಾಹುಲ್‌ಗಾಂಧಿ ಸಮ್ಮುಖದಲ್ಲಿ ಒಂದು ಸಭೆ ನಡೆದಿತ್ತು. ಅನಂತರ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಅನಂತರ ಸಿದ್ದರಾ ಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಜತೆ ಎರಡು ಸಭೆ ನಡೆಸಿದ್ದಾರೆ. ಟಿಕೆಟ್‌ ಹಂಚಿಕೆ ವಿಚಾರವಾಗಿ ಇದೀಗ ಅಂತಿಮ ಹಂತದ ವಾಸ್ತವಿಕ ವರದಿ ಪಡೆದು ತೀರ್ಮಾ ನಿಸುವ ಸಲುವಾಗಿ ಸುಜೇìವಾಲ ಅವರಿಗೆ “ಟಾಸ್ಕ್’ ನೀಡಲಾ ಗಿದೆ. ಟಿಕೆಟ್‌ ಹಂಚಿಕೆ ವೇಳೆ ಈ ವರದಿಯಲ್ಲಿನ ಅಂಶಗಳೂ ಪರಿಗಣನೆಗೆ ಬರಲಿವೆ ಎಂದು ಮೂಲಗಳು ತಿಳಿಸಿವೆ.

Advertisement

ಸುರ್ಜೇವಾಲ ಕಸರತ್ತು: ಸುರ್ಜೇವಾಲ ಅವರೂ ನಾಯಕರ ನಡುವಿನ ಭಿನ್ನಮತ ಶಮನಕ್ಕೂ ಕಸರತ್ತು ನಡೆಸಿ ಸೂತ್ರ ಸಿದ್ಧಪಡಿಸಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ಬಾಗಲಕೋಟೆ, ಶಿವಮೊಗ್ಗ, ತುಮಕೂರು, ಬೆಳಗಾವಿ ಸಹಿತ ಹಲವು ಜಿಲ್ಲೆಗಳಲ್ಲಿ ಆಂತರಿಕವಾಗಿ ಇರುವ ಸಮಸ್ಯೆಗಳ ನಿವಾರಣೆಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ, ಈ ಸಮಸ್ಯೆಗಳನ್ನು ಸರಿಪಡಿಸದಿದ್ದರೆ ಪಕ್ಷಕ್ಕೆ ದೊಡ್ಡ ಮಟ್ಟದ ಹಾನಿ ಆಗಲಿದೆ ಎಂಬ ಮಾಹಿತಿ ಹೈಕಮಾಂಡ್‌ ತಲುಪಿದೆ. ಹೀಗಾಗಿಯೇ ಸುಜೇìವಾಲ ಅವರಿಗೆ ಈ ಹೊಣೆಗಾರಿಕೆ ನೀಡಲಾಗಿದೆ ಎಂದು ಹೇಳಲಾಗಿದೆ.

ರಾಜ್ಯ ನಾಯಕರ ಜತೆ ಮುನಿಸಿ ಕೊಂಡಿದ್ದ ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಹಾಗೂ ಪರಿಷತ್‌ನ ಮಾಜಿ ವಿಪಕ್ಷ ನಾಯಕ ಎಸ್‌.ಆರ್‌. ಪಾಟೀಲ್‌ ಅವರನ್ನು ಬಿಜೆಪಿಯತ್ತ ಸೆಳೆಯಲು ನಡೆಸಿದ್ದ ಪ್ರಯತ್ನದ ಮಾಹಿತಿ ಪಡೆದ ಸುಜೆೇìವಾಲ ಇಬ್ಬರ ಜತೆಯೂ ಚರ್ಚಿಸಿ ಖುದ್ದು ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿ ಯಾದರು. ಇದೇ ರೀತಿಯಲ್ಲಿ ಕೆಲವು ಜಿಲ್ಲೆಗಳಲ್ಲಿ ನಾಯಕರ ನಡುವೆ ಇದ್ದ ಭಿನ್ನಾಭಿಪ್ರಾಯ ನಿವಾರಣೆಗೆ ಸಭೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ನಾಯಕರ ನಡುವಿನ ಭಿನ್ನಾ ಭಿಪ್ರಾಯ ಶಮನಗೊಳಿಸಿ ಪ್ರತೀ ಜಿಲ್ಲೆಯಲ್ಲಿ ಕಾಂಗ್ರೆಸ್‌ ಗೆಲ್ಲುವ ಸಾಧ್ಯತೆ, ಅದಕ್ಕೆ ಹಾಕಬೇಕಾಗಿರುವ ಶ್ರಮ, ಜಾತಿವಾರು ಲೆಕ್ಕಾ ಚಾರ ಜತೆಗೆ ಅಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನ ಸಾಮರ್ಥ್ಯ ಎಲ್ಲ ಅಂಶಗಳೂ ಈ ವರದಿಯಲ್ಲಿ ಇರ ಲಿದೆ ಎಂದು ತಿಳಿದು ಬಂದಿದೆ.

ವರದಿಯಲ್ಲಿ ಏನಿರಲಿದೆ?
ಜಿಲ್ಲೆಯಲ್ಲಿನ ರಾಜಕೀಯ ಪರಿಸ್ಥಿತಿ
ಕ್ಷೇತ್ರಗಳಲ್ಲಿನ ಬಿಜೆಪಿ, ಜೆಡಿಎಸ್‌ನ ಸಾಮರ್ಥ್ಯ
ಕಾಂಗ್ರೆಸ್‌ನ ಆಂತರಿಕ ತಿಕ್ಕಾಟಗಳ ಮಾಹಿತಿ
ಕ್ಷೇತ್ರಗಳಲ್ಲಿನ ಜಾತಿವಾರು ಲೆಕ್ಕಾಚಾರ

-ಎಸ್‌.ಲಕ್ಷ್ಮೀ ನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next