ರಾಂಚಿ: ಜಾರ್ಖಂಡ್ನ ಕುಂತಿ ಜಿಲ್ಲೆಯಲ್ಲಿ ಭೂವಿವಾದದ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಸೋದರ ಸಂಬಂಧಿಯನ್ನು ಹತ್ಯೆ ಮಾಡಿ, ರುಂಡವನ್ನು ಬೇರ್ಪಡಿಸಿದ್ದಾನೆ. ಕತ್ತರಿಸಿದ ರುಂಡದೊಂದಿಗೆ ಆರೋಪಿಯ ಸ್ನೇಹಿತರು ಸೆಲ್ಫಿ ತೆಗೆದುಕೊಂಡಿರುವ ಘಟನೆ ವರದಿಯಾಗಿದೆ.
ಕನು ಮುಂಡಾ(24) ಮೃತ ಯುವಕ. ಪ್ರಕರಣ ಹಿನ್ನೆಲೆಯಲ್ಲಿ ಪೊಲೀಸರು ಪ್ರಮುಖ ಆರೋಪಿ ಸಾಗರ್ ಮುಂಡಾ(20), ಆತನ ಪತ್ನಿ ಸೇರಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಿದ್ದಾರೆ.
ಜತೆಗೆ ಕೃತ್ಯಕ್ಕೆ ಬಳಸಿದ ಹರಿತವಾದ ಆಯುಧಗಳು, ಕೊಡಲಿ, ಮೊಬೈಲ್ ಪೋನ್ಗಳು ಮತ್ತು ಕಾರನ್ನು ವಶಪಡಿಸಿಕೊಂಡಿದ್ದಾರೆ. ರುಂಡದೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವ ಕ್ರೂರ ಮಾನಸಿಕತೆಗೆ ಸಾಮಾಜಿಕ ಜಾಲತಾಣದಲ್ಲಿ ಖಂಡನೆ ವ್ಯಕ್ತವಾಗಿದೆ.
ಇದನ್ನೂ ಓದಿ: ಇದ್ದಕ್ಕಿದ್ದಂತೆ ಕುಷ್ಟಗಿಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಪತ್ತೆ: ಪತ್ನಿಯಿಂದ ದೂರು