Advertisement

Ranchi;ಮದ್ಯ ಕೊಡದ್ದಕ್ಕೆ ಗುಂಡಿಕ್ಕಿ ಡಿಜೆಯ ಹತ್ಯೆ: ಆರೋಪಿ ಪೊಲೀಸರ ವಶಕ್ಕೆ

12:44 AM May 28, 2024 | Team Udayavani |

ರಾಂಚಿ: ಝಾರ್ಖಂಡ್‌ನ‌ ರಾಂಚಿಯ ಬಾರ್‌ ಒಂದರಲ್ಲಿ ಮದ್ಯ ಒದಗಿಸದ ಕಾರಣ ಡಿಜೆ ಆಪರೇಟರ್‌ನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿ ಜಾಲತಾಣದಲ್ಲಿ ವೈರಲ್‌ ಆಗಿದೆ. ಗುಂಡು ಹಾರಿಸಿದ ಆರೋಪಿ ಸೇರಿದಂತೆ ನಾಲ್ವರು ರವಿವಾರ ತಡರಾತ್ರಿ ಬಾರ್‌ಗೆ ಬಂದಿದ್ದರು.

Advertisement

ಬಾರ್‌ ಬಂದ್‌ ಆದ ಕಾರಣ ಅವರಿಗೆ ಮದ್ಯ ಸಿಗಲಿಲ್ಲ. ಈ ಕಾರಣಕ್ಕೆ ಆರೋಪಿ ಬಾರ್‌ನಲ್ಲಿದ್ದ ಡಿಜೆ ಆಪರೇಟರ್‌ನನ್ನು ಬಂದೂಕಿನಿಂದ ಗುಂಡಿಕ್ಕಿ ಕೊಂದು, ಪರಾರಿಯಾಗಿದ್ದಾನೆ. ಮೃತ ವ್ಯಕ್ತಿಯನ್ನು ಸಂದೀಪ್‌ ಪ್ರಮಾಣಿಕ್‌ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಗಯಾದಲ್ಲಿ ಬಂಧಿಸಿದ್ದು, ರಾಂಚಿಗೆ ಕರೆತರಲಾಗಿದೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಚಂದನ್‌ ಕುಮಾರ್‌ ಸಿನ್ಹಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next