ಮುಂಬೈ: ಬಾಲಿವುಡ್ ನಟ ರಣಬೀರ್ ಕಪೂರ್ ಜತೆ ಸೆಲ್ಫಿ ತೆಗೆಯಲು ಪ್ರಯತ್ನಿಸಿದ್ದ ಅಭಿಮಾನಿಯ ಮೊಬೈಲ್ ಅನ್ನು ದೂರ ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಬಿಬಿಸಿ ಡಾಕ್ಯುಮೆಂಟರಿ ಪ್ರದರ್ಶಿಸಲು ಮುಂದಾದ ಯೂನಿರ್ವಸಿಟಿಗಳ ವಿದ್ಯುತ್ ಸರಬರಾಜು ಸ್ಥಗಿತ…
“ವಿಡಿಯೋದಲ್ಲಿ ನಟ ರಣಬೀರ್ ಕಪೂರ್ ನಗುತ್ತಾ…ಯುವ ಅಭಿಮಾನಿಯ ಜೊತೆ ಸೆಲ್ಫಿ ತೆಗೆಯಲು ಪೋಸ್ ಕೊಟ್ಟಿದ್ದು, ಅಭಿಮಾನಿ ಹಲವು ಬಾರಿ ಸೆಲ್ಫಿ ತೆಗೆಯಲು ಪ್ರಯತ್ನಿಸುತ್ತಿದ್ದ, ಆದರೆ ಪ್ರತಿ ಬಾರಿಯೂ ಆತನ ಪ್ರಯತ್ನ ವಿಫಲವಾಗಿದ್ದು, ಈ ಸಂದರ್ಭದಲ್ಲಿ ರಣಬೀರ್ ಕಪೂರ್ ಸಿಟ್ಟಿನಿಂದ ಆತನ ಮೊಬೈಲ್ ತೆಗೆದುಕೊಂಡು ಎಸೆದಿರುವುದು” ಸೆರೆಯಾಗಿದೆ.
ಅಭಿಮಾನಿ ಸೆಲ್ಫಿಗಾಗಿ ಕಪೂರ್ ಬಳಿ ವಿನಂತಿಸಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಕೇಳಿಸುತ್ತಿದ್ದು, ಆದರೂ ರಣಬೀರ್ ಕಪೂರ್ ಆತನ ವಿನಂತಿ ಕೇಳಿಸಿಕೊಳ್ಳದೆ ಹೊರಟು ಬಿಟ್ಟಿರುವುದಾಗಿ ವರದಿ ತಿಳಿಸಿದೆ.
Related Articles
ಈ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಆದರೆ ಇದೊಂದು ಮೊಬೈಲ್ ಬ್ರ್ಯಾಂಡ್ ನ ಪ್ರಚಾರದಂತೆ ಕಾಣಿಸುತ್ತಿರುವುದಾಗಿ ಕೆಲವು ವೀಕ್ಷಕರು ಕಮೆಂಟ್ ಮಾಡಿದ್ದಾರೆ. ಅಭಿಮಾನಿ ಒಳ್ಳೆಯ ಮೊಬೈಲ್ ತೆಗೆದುಕೊಳ್ಳಲಿ ಎಂಬುದಾಗಿ ಕಪೂರ್ ಬಯಸಿರಬಹುದು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಇಂತಹ ವಿಡಿಯೋ ಅಂತರ್ಜಾಲದಲ್ಲಿ ಅಚ್ಚರಿ ಮೂಡಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು ನಟಿ ಅನುಷ್ಕಾ ಶರ್ಮಾ ಅವರು ಅಥ್ಲೆಶ್ಯೂರ್ ಪುಮಾ ಬ್ರ್ಯಾಂಡ್ ತಮ್ಮ ಅನುಮತಿ ಇಲ್ಲದೇ ಫೋಟೊ ಬಳಸಿಕೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪೋಸ್ಟ್ ಹಾಕಿದ್ದನ್ನು ನೆನಪಿಸಿಕೊಳ್ಳಬಹುದು.