Advertisement

ಆಲಿಯಾ ಪಕ್ಕದಲ್ಲಿ ಮಲಗುವಾಗ ನಿಜಕ್ಕೂ ಕಷ್ಟವಾಗುತ್ತದೆ..! ತನ್ನ‌ ಕಷ್ಟ ಹೇಳಿದ ಪತಿ ರಣ್ಬೀರ್

05:39 PM Sep 27, 2022 | Team Udayavani |

ಮುಂಬಯಿ: ಬಾಲಿವುಡ್‌ ನ ಕ್ಯೂಟ್‌ ಕಪಲ್ಸ್‌ ರಣ್ಭೀರ್‌ ಕಪೂರ್‌ – ಆಲಿಯಾ ಭಟ್ ಮದುವೆಯ ಬಳಿಕ ಮೊದಲ ಬಾರಿ ಒಂದೇ ಸ್ಕ್ರೀನ್‌ ನಲ್ಲಿ “ಬ್ರಹ್ಮಾಸ್ತ್ರ” ದಲ್ಲಿ ಕಾಣಿಸಿಕೊಂಡಿದ್ದರು.  ಅಯಾನ್‌ ಮುಖರ್ಜಿ ನಿರ್ದೇಶನದ “ಬ್ರಹ್ಮಾಸ್ತ್ರ” ಬಾಲಿವುಡ್‌ ನಲ್ಲಿ ದೊಡ್ಡ ಹಿಟ್‌ ಆಗಿದೆ. ಸೋಲುಗಳಿಂದ ಕೆಂಗಟ್ಟಿದ್ದ ಬಾಲಿವುಡ್‌ ಗೆ ಬ್ರಹ್ಮಾಸ್ತ್ರದ ಗೆಲುವು ಬೂಸ್ಟರ್‌ ಆಗಿದೆ. ಸಿನಿಮಾದಲ್ಲಿ ಶಾರುಖ್‌ ಖಾನ್‌ ಒಂದು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

Advertisement

2022 ರ ಏ.14 ರಂದು ಆಲಿಯಾ – ರಣ್ಭೀರ್‌ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ದಂಪತಿ ಇದ್ದಾರೆ. ಇತ್ತೀಚೆಗೆ ಆಲಿಯಾ – ರಣ್ಬೀರ್‌ ನೀಡಿದ ಸಂದರ್ಶನವೊಂದರಲ್ಲಿ ಇಬ್ಬರು ಮನೆಯಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಹೇಗೆ ಇರುತ್ತಾರೆ ಎನ್ನುವುದನ್ನು ಮೊದಲ ಬಾರಿಗೆ ಹೇಳಿದ್ದಾರೆ.

ರಣ್ಬೀರ್‌ ಕಪೂರ್‌ ಅವರು ಆಲಿಯಾ ಅವರ ಬಗ್ಗೆ ಮಾತಾನಾಡಿ, ನಾನು ಆಲಿಯಾ ಅವರ ಒಂದು ಹವ್ಯಾಸವನ್ನು ಸಹಿಸಿಕೊಳ್ಳುತ್ತೇನೆ. ಆಲಿಯಾ ಮಲಗುವಾಗ ಅತ್ತಿತ್ತ ತಿರುಗುತ್ತಾರೆ. ಎಷ್ಟು ಎಂದರೆ ನನಗೆ ಮಲಗಲು ಜಾಗವೇ ಇರಲ್ಲ. ಆಲಿಯಾ ಒಂದು ಕಡೆಯೇ ಮಲಗಲ್ಲ, ಅವಳ ತಲೆ ಎಲ್ಲೋ, ಕಾಲು ಇನ್ನೆಲ್ಲೋ ಇರುತ್ತದೆ. ಅಂತಿಮವಾಗಿ ನಾನು ತುಂಬಾ ಕಷ್ಟಪಟ್ಟು ಸಿಕ್ಕ ಸಣ್ಣ ಜಾಗದಲ್ಲೇ ಮಲಗುತ್ತೇನೆ. ಇದರಿಂದ ನಾನು ಅವಳೊಂದಿಗೆ ಮಲಗಲು  ಕಷ್ಟವಾಗುತ್ತದೆ ಎಂದು ಹೇಳಿ ನಕ್ಕಿದ್ದಾರೆ.

ಇನ್ನು ಆಲಿಯಾ ಕೂಡ ಪತಿ  ರಣ್ಬೀರ್‌ ಕಪೂರ್‌ ರಲ್ಲಿ ನನಗೆ ಇಷ್ಟವಾಗುವುದು ಏನೆಂದರೆ, ಅವರು ಶಾಂತ ಸ್ವಭಾವವರು, ಒಳ್ಳೆಯ ಕೇಳುಗ ಕೂಡ. ಆದರೆ ಇದನ್ನು ನಾನು ತುಂಬಾ ಸಹಿಸಿಕೊಳ್ಳುತ್ತೇನೆ ಏಕೆಂದರೆ ಕೆಲವೊಮ್ಮೆ ಏನು ಹೇಳಿದ್ರು ಅವರು ಪ್ರತಿಕ್ರಿಯೆ ನೀಡದಿದ್ದಾಗ ಸಿಟ್ಟು ಬರುತ್ತದೆ ಎಂದು ಪತಿ ಬಗ್ಗೆ ಹೇಳಿದ್ದಾರೆ. ಆಲಿಯಾ ಭಟ್‌  ಮೊದಲ ಬಾರಿ ಹಾಲಿವುಡ್‌ ನಲ್ಲಿ ಕಾಣಿಸಿಕೊಳ್ಳಲಿದ್ದು, “ಹಾರ್ಟ್‌ ಆಫ್‌ ಸ್ಟೋನ್”  ಸಿನಿಮಾದ ಟೀಸರ್‌ ಇತ್ತೀಚಿಗೆ ಬಿಡುಗಡೆಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next