Advertisement
152 ರನ್ನುಗಳ ಹಿನ್ನಡೆಗೆ ಸಿಲುಕಿದ ಮುಂಬಯಿ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಬ್ಯಾಟಿಂಗ್ ಕುಸಿತಕ್ಕೆ ಸಿಲುಕಿ 198ಕ್ಕೆ ಆಲೌಟ್ ಆಯಿತು. 47 ರನ್ನುಗಳ ಸುಲಭ ಗುರಿ ಪಡೆದ ರೈಲ್ವೇಸ್ ವಿಕೆಟ್ ನಷ್ಟವಿಲ್ಲದೆ ಗೆಲುವಿನ ಬಾವುಟ ಹಾರಿಸಿತು. ಮೃಣಾಲ್ ದೇವಧರ್ 27 ಮತ್ತು ಪ್ರಥಮ್ ಸಿಂಗ್ 19 ರನ್ ಮಾಡಿ ಅಜೇಯರಾಗಿ ಉಳಿದರು.
ಪಂದ್ಯ ಮುಗಿಯಲು ಇನ್ನೂ ಒಂದು ದಿನ ಹಾಗೂ ಒಂದು ಅವಧಿಯ ಆಟ ಬಾಕಿ ಇರುವಾಗಲೇ ಮುಂಬಯಿ ಹೋರಾಟ ನೀಡದೆ ಶರಣಾದದ್ದು ಅಚ್ಚರಿಯಾಗಿ ಕಂಡಿದೆ. 3ಕ್ಕೆ 64 ರನ್ ಮಾಡಿದಲ್ಲಿಂದ ಮುಂಬಯಿ ದಿನದಾಟ ಮುಂದುವರಿಸಿತ್ತು. ನಾಯಕ ಸೂರ್ಯಕುಮಾರ್ ಯಾದವ್ (65), ಆಕಾಶ್ ಪಾರ್ಕರ್ (ಔಟಾಗದೆ 35) ಮತ್ತು ಶಾದೂìಲ್ ಠಾಕೂರ್ (21) ಹೊರತುಪಡಿಸಿ ಉಳಿದವರ್ಯಾರೂ ರೈಲ್ವೇಸ್ ದಾಳಿಯನ್ನು ತಡೆದು ನಿಲ್ಲಲಿಲ್ಲ. ಟೆಸ್ಟ್ ಸ್ಪೆಷಲಿಸ್ಟ್ ರಹಾನೆ ಎರಡೂ ಇನ್ನಿಂಗ್ಸ್‌ಗಳಲ್ಲಿ ವಿಫಲರಾದದ್ದು ಮುಂಬಯಿಗೆ ಭಾರೀ ಹೊಡೆತ ನೀಡಿತು (5 ಹಾಗೂ 8 ರನ್). ಆರಂಭಕಾರ ಪೃಥ್ವಿ ಶಾ ಕೂಡ ಕ್ರೀಸ್ ಆಕ್ರಮಿಸಿಕೊಳ್ಳಲಿಲ್ಲ (12 ಹಾಗೂ 23 ರನ್).
Related Articles
Advertisement
ಬರೋಡ ವಿರುದ್ಧ ಆಡಿದ ಮೊದಲ ಪಂದ್ಯವನ್ನು ಜಯಿಸಿದ್ದ ಮುಂಬಯಿ 3ನೇ ಮುಖಾಮುಖೀಯಲ್ಲಿ ಕರ್ನಾಟಕವನ್ನು ಎದುರಿ ಸಲಿದೆ. ಈ ಸೆಣಸಾಟ ಜ. 3ರಿಂದ “ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್’ನಲ್ಲಿ ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರ್: ಮುಂಬಯಿ-114 ಮತ್ತು 198 (ಯಾದವ್ 65, ಪಾರ್ಕರ್ ಔಟಾಗದೆ 35, ಶಾ 23, ಠಾಕೂರ್ 21, ಸಂಗ್ವಾನ್ 60ಕ್ಕೆ 5, ಕಣ್ì ಶರ್ಮ 15ಕ್ಕೆ 2, ಪ್ರದೀಪ್ 46ಕ್ಕೆ 2). ರೈಲ್ವೇಸ್-266 ಮತ್ತು ವಿಕೆಟ್ ನಷ್ಟವಿಲ್ಲದೆ 47.