Advertisement
ಗೆಲುವಿಗೆ ಕೇವಲ 15 ರನ್ ಗಳಿಸ ಬೇಕಿದ್ದ ಕರ್ನಾಟಕ ವಿಕೆಟ್ ನಷ್ಟವಿಲ್ಲದೆ ಗುರಿ ಮುಟ್ಟಿತು. ಇದರೊಂದಿಗೆ ಪಂದ್ಯ ಮೂರೇ ದಿನದಲ್ಲಿ ಮುಗಿಯಿತು. ಇದು 5 ಪಂದ್ಯಗಳಲ್ಲಿ ಕರ್ನಾಟಕ ಮೊಳಗಿಸಿದ 3ನೇ ಜಯಭೇರಿ. ಉಳಿದೆರಡು ಪಂದ್ಯ ಡ್ರಾಗೊಂಡಿದೆ. ಅಂಕ 26ಕ್ಕೆ ಏರಿದೆ. ಕರ್ನಾಟಕಕ್ಕೆ ಶರಣಾದ ರಾಜಸ್ಥಾನ ಇಷ್ಟೇ ಪಂದ್ಯಗಳಿಂದ 14 ಅಂಕ ಹೊಂದಿದೆ. ಒಂದು ಜಯ, ಒಂದು ಸೋಲು ಹಾಗೂ 3 ಡ್ರಾ ರಾಜಸ್ಥಾನದ ಸಾಧನೆಯಾಗಿದೆ.
Related Articles
Advertisement
ಸಂಕ್ಷಿಪ್ತ ಸ್ಕೋರ್: ರಾಜಸ್ಥಾನ-129 ಮತ್ತು 330 (ಮಹಿಪಾಲ್ ಲೊನ್ರೋರ್ 99, ಆದಿತ್ಯ ಗರ್ವಾಲ್ 66, ಸಮರ್ಪಿತ್ ಜೋಶಿ 63, ವಿ. ವೈಶಾಖ್ 73ಕ್ಕೆ 4, ಕೆ. ಗೌತಮ್ 72ಕ್ಕೆ 3, ವಿ. ಕೌಶಿಕ್ 66ಕ್ಕೆ 2). ಕರ್ನಾಟಕ-445 ಮತ್ತು ವಿಕೆಟ್ ನಷ್ಟವಿಲ್ಲದೆ 15.
ಇನ್ನಿಂಗ್ಸ್ ಗೆಲುವಿನತ್ತ ಮುಂಬಯಿಗುವಾಹಟಿ: ಆತಿಥೇಯ ಅಸ್ಸಾಂಗೆ ಫಾಲೋಆನ್ ಹೇರಿದ ಮುಂಬಯಿ ಇನ್ನಿಂಗ್ಸ್ ಗೆಲುವಿತ್ತ ಮುನ್ನಡೆದಿದೆ. ಮುಂಬಯಿಯ 687 ರನ್‌ಗೆ (4 ವಿಕೆಟಿಗೆ ಡಿಕ್ಲೇರ್) ಜವಾಬು ನೀಡಿದ ಅಸ್ಸಾಂ 370ಕ್ಕೆ ಆಲೌಟ್ ಆಯಿತು. ಇದು ಪೃಥ್ವಿ ಶಾ ಅವರ ವೈಯಕ್ತಿಕ ಗಳಿಕೆಗಿಂತಲೂ (379) ಕಡಿಮೆ ಮೊತ್ತವಾಗಿತ್ತು. 317 ರನ್ನುಗಳ ಇನ್ನಿಂಗ್ಸ್ ಹಿನ್ನಡೆಗೆ ಸಿಲುಕಿರುವ ಅಸ್ಸಾಂ 3ನೇ ದಿನದಾಟದ ಅಂತ್ಯಕ್ಕೆ ಕೇವಲ 36 ರನ್ನಿಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದೆ. ಅದಿನ್ನೂ 281 ರನ್ ಹಿಂದಿದೆ. ಶಾದೂìಲ್ ಠಾಕೂರ್ 3, ಮೋಹಿತ್ ಅವಸ್ತಿ 2 ವಿಕೆಟ್ ಕಿತ್ತು ಅಸ್ಸಾಂಗೆ ಬೆದರಿಕೆಯೊಡ್ಡಿದ್ದಾರೆ.