Advertisement
ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಈ ತಂಡಕ್ಕೆ ಆಲ್‌ರೌಂಡರ್ ಸ್ನೇಹ್ ರಾಣಾ, ಮಧ್ಯಮ ಕ್ರಮಾಂಕದ ಬ್ಯಾಟರ್ ಹರ್ಲೀನ್ ದೇವಲ್ ಮತ್ತು ವಿಕೆಟ್ ಕೀಪರ್ ತನಿಯಾ ಭಾಟಿಯ ಅವರನ್ನು ಸೇರಿಸಿಕೊಳ್ಳಲಾಗಿದೆ.
Related Articles
ಗೇಮ್ಸ್‌ನಲ್ಲಿ ಒಟ್ಟು 8 ತಂಡಗಳು ಪಾಲ್ಗೊಳ್ಳಲಿವೆ. ಭಾರತ “ಎ’ ವಿಭಾಗದಲ್ಲಿ ಸ್ಥಾನ ಪಡೆದಿದೆ. ಇಲ್ಲಿನ ಉಳಿದ ತಂಡಗಳೆಂದರೆ ಆಸ್ಟ್ರೇಲಿಯ, ಪಾಕಿಸ್ಥಾನ ಮತ್ತು ಬಾರ್ಬಡಾಸ್. “ಬಿ’ ವಿಭಾಗದಲ್ಲಿ ಶ್ರೀಲಂಕಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿವೆ. ಪ್ರತಿಯೊಂದು ವಿಭಾಗದ ಅಗ್ರ 2 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.
Advertisement
ಭಾರತದ ಮೊದಲ ಎದುರಾಳಿ ಆಸ್ಟ್ರೇಲಿಯ (ಜು. 29). ಬಳಿಕ ಪಾಕಿಸ್ಥಾನ (ಜು. 31) ಮತ್ತು ಬಾರ್ಬಡಾಸ್ (ಆ. 3) ವಿರುದ್ಧ ಆಡಲಿದೆ. ಎಲ್ಲ ಪಂದ್ಯಗಳು ಎಜ್‌ಬಾಸ್ಟನ್‌ನಲ್ಲಿ ನಡೆಯಲಿವೆ.
ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮತಿ ಮಂಧನಾ (ಉಪನಾಯಕಿ), ಶಫಾಲಿ ವರ್ಮ, ಎಸ್. ಮೇಘನಾ, ತನಿಯಾ ಭಾಟಿಯ, ಯಾಸ್ತಿಕಾ ಭಾಟಿಯ, ದೀಪ್ತಿ ಶರ್ಮ, ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್, ಜೆಮಿಮಾ ರೋಡ್ರಿಗಸ್, ರಾಧಾ ಯಾದವ್, ಹರ್ಲೀನ್ ದೇವಲ್, ಸ್ನೇಹ್ ರಾಣಾ.