ಮಣಿಪಾಲ: ಮಹಿಳೆಯೊಬ್ಬರ ಚಿನ್ನದ ಸರ ಸುಲಿಗೆಗೈದು ಪರಾರಿಯಾದ ಘಟನೆ ಪರ್ಕಳದಲ್ಲಿ ನಡೆದಿದೆ.
ಪರ್ಕಳದ ಶಾರದಾ ಪಾಟೀಲ್ ಅವರು ಮನೆಯ ಅಂಗಳದಲ್ಲಿ ಬಬ್ಬರೇ ವಾಕಿಂಗ್ ಮಾಡುತ್ತಿರುವಾಗ ಯಾರೋ ಇಬ್ಬರು ಅಪರಿಚಿತ ಯುವಕರು ಬೈಕ್ನಲ್ಲಿ ಬಂದು ಸದಾನಂದ ಮೇಸ್ತ್ರಿಯವರ ಮನೆಯ ವಿಳಾಸವನ್ನು ಕೇಳಿದ್ದರು. ಈ ವೇಳೆ ಶಾರದಾ ಅವರು ಗೊತ್ತಿಲ್ಲ ಎಂದು ತಿಳಿಸಿ ಮನೆ ಕಡೆ ಹೋಗುವಾಗ ವ್ಯಕ್ತಿಯು ಹಿಂದಿನಿಂದ ಬಂದು ಅವರ ಬಾಯಿಯನ್ನು ಕೈಯಿಂದ ಒತ್ತಿ ಹಿಡಿದು ಕೊರಳಿನಲ್ಲಿದ್ದ ಚಿನ್ನದ ಸರವನ್ನು ಕತ್ತಿನಿಂದ ತೆಗೆದು ಅಲ್ಲೇ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕನ್ನೇರಿ ಪರಾರಿಯಾಗಿದ್ದಾರೆ. ಸುಲಿಗೆಯಾದ ಚಿನ್ನದ ಸರವು ಸುಮಾರು 6 ಪವನ್ ತೂಕದಾಗಿದ್ದು, 3 ಲ.ರೂ. ಮೌಲ್ಯದ್ದಾಗಿದೆ. ಮಣಿಪಾಲ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.