ಮಂಗಳೂರು: ನಗರದ ಕೆಪಿಟಿ ಬಳಿಯ ಅಪಾರ್ಟ್‌ಮೆಂಟ್ ಒಂದರ 14ನೇ ಮಹಡಿಯಿಂದ ಯುವಕನೋರ್ವ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಮಹಮ್ಮದ್ ಶಮಾಲ್ (21) ಮೃತಪಟ್ಟಿರುವ ಯುವಕ.
ರಂಜಾನ್ ಹಿನ್ನೆಲೆಯಲ್ಲಿ ಬೆಳಗ್ಗಿನ ಉಪಹಾರ ಸೇವಿಸಿ, ಮನೆಯ ಬಾಲ್ಕನಿಗೆ ಹೋಗಿದ್ದು, ಈ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ ಎಂದು ಹೇಳಲಾಗಿದೆ. ಮೃತಪಟ್ಟಿರುವ ಯುವಕ ನಗರದ ಮೊಬೈಲ್ ಕೇರ್ ಮಳಿಗೆಯ ಜಿ.ಅಬ್ದುಲ್ ಸಲೀಂ ಎನ್ನುವವರ ಪುತ್ರ ಎಂದು ತಿಳಿದು ಬಂದಿದೆ.
ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Related Articles
ಬುಧವಾರ ನಗರದ ನಂತೂರಿನ ಅಪಾರ್ಟ್‌ಮೆಂಟ್ ಒಂದರ 9ನೇ ಮಹಡಿಯಿಂದ ಬಿದ್ದು ಎಸಿ ಮೆಕಾನಿಕ್ ಮೃತಪಟ್ಟಿದ್ದರು.