Advertisement

ರಮ್ಯಾ ವಸಿಷ್ಠ ತಂಡದ ಭಕ್ತಿ, ಭಾವಗಾನ ವೈಭವ

12:30 AM Mar 22, 2019 | |

ರಮ್ಯಾ ವಸಿಷ್ಠ ಕನ್ನಡ ನಾಡಿನ ಖ್ಯಾತ ಸಂಗೀತ ಸಾಧಕಿ. ಎಳೆಯ ಪ್ರಾಯದಲ್ಲೇ ಉತ್ತುಂಗಕ್ಕೇರಿರುವ ಈ ಸಂಗೀತ ಸಾಧಕಿಯ ಭಕ್ತಿ, ಗಾನ ವೈಭವವನ್ನು ಆಲಿಸುವ ಒಂದು ಸಂದರ್ಭ ಇತ್ತೀಚೆಗೆ ಸಿಕ್ಕಿ ತ್ತು.

Advertisement

ಸುಮಾರು ಮೂರು ತಾಸುಗಳ ಕಾಲ ಜರಗಿದ ಈ ಕಾರ್ಯಕ್ರಮದಲ್ಲಿ ರಮ್ಯಾ ಅವರು ಭಕ್ತಿಗೀತೆಗಳಲ್ಲಿ ಹೆಚ್ಚಾಗಿ ಕೃಷ್ಣನಿಗೆ ಸಂಬಂಧಿ ಸಿದ ಹಾಡುಗಳನ್ನೇ ಹಾಡಿದರು. ಉಡುಪಿಯು ಕೃಷ್ಣನ ಊರು ಎಂಬ ಕಾರಣವೋ ಏನೋ – ಅಂತೂ ಕೃಷ್ಣನ ಹಲವಾರು ಭಕ್ತಿಗೀತೆ ಗಳನ್ನು ಪ್ರಸ್ತುತಪಡಿಸಿದರು. 

ಕನ್ನಡದ ಹಿರಿಯ ಸಾಹಿತಿ ಡಾ| ನಿಸಾರ್‌ ಅಹಮದ್‌ ಅವರು ರಚಿಸಿದ್ದ ಕೃಷ್ಣನಿಗೆ ಸಂಬಂಧಿಸಿದ ಒಂದು ಹಾಡು ಸಹಿತ ದಾಸದ್ವಯರು, ಸಂತ ಶಿಶುನಾಳ ಷರೀಫ‌ ಮುಂತಾದವರ ಹಲವಾರು ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ರಮ್ಯಾ ಕರ್ಣಾನಂದದ ಅನುಭವ ನೀಡಿದರು.

“ಕೃಷ್ಣ ಕಾಡಿದನು ಅಮ್ಮಾ… ಅಣ್ಣ ಬಲನಿಗೆ ನಿನ್ನೆ ರಾತ್ರಿ ಏನು ಕೊಟ್ಟೆ’, “ಕೃಷ್ಣ ಎನಬಾರದೆ’, “ಅಮ್ಮ ನಾನು ದೇವ ರಾಣೆ ಬೆಣ್ಣೆ ಕದ್ದಿ ಲ್ಲಮ’, “ಬೆಣ್ಣೆ ಕದ್ದ ನಮ್ಮ ಕೃಷ್ಣ’, “ತೊರೆದು ಜೀವಿಸಬಹುದೇ ಹರಿ ನಿನ್ನ ಚರಣ’, “ಗುರುವಿನ ಗುಲಾಮನಾಗುವ ತನಕ ದೊರೆಯ ದಣ್ಣ ಮುಕುತಿ ’, “ಹೌದೇ ನಮ್ಮವ್ವಾ ನೀನು’, “ದೀಪವು ನಿನ್ನದೆ ಗಾಳಿಯು ನಿನ್ನದೆ…’ ಮುಂತಾದ ಹಾಡುಗಳು ಮಂತ್ರ ಮುಗ್ಧಗೊ ಳಿಸಿತು. ಈ ಪೈಕಿ ಕೃಷ್ಣ ಕಾಡಿದನು ಅಮ್ಮಾ… ಅಣ್ಣ ಬಲನಿಗೆ ನಿನ್ನೆ ರಾತ್ರಿ ಏನು ಕೊಟ್ಟೆ ಹಾಡು ಕೃಷ್ಣ ಮತ್ತು ಯಶೋಧೆ ನಡುವಿನ ಸಂಭಾಷಣೆ ರೂಪದಲ್ಲಿದ್ದು, ಕೃಷ್ಣನ ಬಾಲ ಲೀಲೆಯ ಒಂದು ಸುಂದರ ಕಥೆಯನ್ನು ಹಾಡಿನ ರೂಪದಲ್ಲಿ ರಮ್ಯಾ ಪ್ರಸ್ತುತಪಡಿಸಿದರು. ಜತೆಗೆ “ಹೌದೇ ನಮ್ಮವ್ವಾ ನೀನು’ ಹಾಡು ಕೂಡ ಅತ್ಯಂತ ಮಧುರವಾಗಿ ಕೇಳುಗರನ್ನು ಸೆಳೆಯುವಲ್ಲಿ ಸಫ‌ಲವಾಗಿತ್ತು.

ಪ್ರತಿಯೊಂದು ಹಾಡಿನ ಸಂದರ್ಭದಲ್ಲೂ ಅದಕ್ಕೆ ಪೂರಕವಾದ ಅರ್ಥ ವಿವರಣೆಯನ್ನೂ ಅವರು ನೀಡಿದ್ದರು. ಹಾಡುಗಳ ಕತೃಗಳ ಬಗ್ಗೆಯೂ ಉಲ್ಲೇಖೀಸಿದರು. ಕಾರ್ಯಕ್ರಮಕ್ಕೆ ಪೇಜಾವರ ಶ್ರೀಗಳು ಕೂಡ ಚಿತ್ತೈಸಿದ್ದರು. ಅವರ ಆಗಮನದ ಹೊತ್ತಿಗೆ ಗುರುವಿನ ಗುಲಾಮನಾಗುವ ತನಕ ಹಾಡಿನ ಮೂಲಕ ಗುರುವಿನ ಮಹತ್ವವನ್ನು ತಿಳಿಸಲು ಶ್ರಮಿಸಿದರು. 

Advertisement

ಪೂರ್ವಾಹ್ನ ಸುಮಾರು 11 ಗಂಟೆ ಸುಮಾರಿಗೆ ಆರಂಭವಾಗಿದ್ದ ಈ ಕಾರ್ಯಕ್ರಮವು ಮಧ್ಯಾಹ್ನ 2 ಗಂಟೆ ವರೆಗೂ ಮುಂದು ವರಿದಿತ್ತು. ರಮ್ಯಾ ವಸಿಷ್ಠರ ತಂಡದ ಕಾರ್ಯಕ್ರಮ ಈ ಪರಿಸರದಲ್ಲಿ ತುಂಬಾ ಅಪರೂಪವಾಗಿದ್ದರಿಂದ ನೆರೆದಿದ್ದ ಎಲ್ಲರಲ್ಲೂ ಒಂದು ರೀತಿಯ ಕೃತಾರ್ಥ ಭಾವ ಎದ್ದು ಕಾಣುತ್ತಿತ್ತು. ಮರುದಿನ ಪುತ್ತೂರಿನ ಖ್ಯಾತ ಯುವ ಗಾಯಕಿ ಅಖೀಲಾ ಪಜಿಮಣ್ಣು ಅವರ ಸಂಗೀತ ಕಾರ್ಯಕ್ರಮವೂ ಇತ್ತು. 

– ಪುತ್ತಿಗೆ ಪದ್ಮನಾಭ ರೈ

Advertisement

Udayavani is now on Telegram. Click here to join our channel and stay updated with the latest news.

Next