Advertisement

ಮಂಡ್ಯಾದಾಗೆ ರಮ್ಯಾ ಕಮ್ಲ ಕ್ಯಾಂಡೇಟ್‌ ಅಂತೆ, ಹೌದಾ ಹುಲಿಯಾ..?

01:55 PM Jan 29, 2023 | Team Udayavani |

ಅಮಾಸೆ: ನಮ್‌ಸ್ಕಾರ ಸಾ…

Advertisement

ಚೇರ್ಮನ್ರು: ಏನ್ಲಾ ಅಮಾಸೆ ಆಳೆ ಕಾಣೆ

ಅಮಾಸೆ: ಎಲ್‌ ಗೋಗುಮಾ ಸಾ… ಎಲೆಕ್ಸನ್‌ ಹವಾ ಸುರು ಆಗೈತೆ ಅದ್ಕೆ ಒಂದ್‌ ರೌಂಡ್‌ ಹಾಕ್ಕಂಡ್‌ ಬರೂಮಾ ಅಂತಾ ಒಂಟೋಗಿದ್ದೆ

ಚೇರ್ಮನ್ರು: ಎಂಗೈತ್ಲಾ ಎಲೆಕ್ಸನ್‌ ಪ್ರಿಪ್ರೇಸನ್ನು

ಅಮಾಸೆ: ಎಲ್ರೂ ನಮ್ದೆ ಕಪ್‌ ಅಂತಾ ಇಸ್ಟೇಟ್‌ ಟೂರ್‌ ಮಾಡ್ತಾವ್ರೆ ಸಾ…

Advertisement

ಚೇರ್ಮನ್ರು: ಯಾವ್‌ ಪಾಲ್ಟಿಕ್‌ ಎಂಗೈತೆ ರೆಸ್ಪಾನ್ಸು

ಅಮಾಸೆ: ಯಾರೇ ಬಂದ್ರೂ ಜನಾ ಸೇರ್‌ತಾವ್ರೆ. ಓಟ್‌ ಗಿಟ್‌ ತದಾ ನೋಡ್ಬೇಕ್‌ ಕಣೇಳಿ.

ಚೇರ್ಮನ್ರು: ಯಾಕ್ಲಾ ಅಂಗಂದೆ

ಅಮಾಸೆ: ಡೈಲಿ ಒನ್‌ ತೌಸಂಡ್‌ ರುಪೀಸ್‌, ನೈಟ್‌ ಒನ್‌ ಕ್ವಾಟರ್‌ ಪ್ಲಸ್‌ ಬಿರ್ಯಾನಿ ಪಿಕ್ಸ್‌ ಆಗೈತೆ. ಅದ್ಕೆ ಯಾವ್ದೆ ಯಾತ್ರೆ ಆದ್ರೂ ಆದೇ ಫೇಸ್‌ಗ್ಳು ಕಾಣ್ತವೆ ಸಾ….

ಚೇರ್ಮನ್ರು: ಬುದ್ವಂತ ಬಸಣ್ಣೋರು ಏನ್‌ ಹೇಳ್ತಾರೆ.

ಅಮಾಸೆ: ಅವ್ರು ಒನ್‌ ಫಿಪ್ಟಿ ಗ್ಯಾರಂಟಿ. ನಮ್ದೆ ಗೌರ್ನ್ ಮೆಂಟ್‌ ಅಂದವ್ರಂತೆ. ಆದ್ರೆ ರಾಜಾಹುಲಿ ಫ‌ುಲ್‌ ಆಕ್ಟೀವ್‌ ಆಗ್ಬೇಕು ಇಲ್ಲಾಂದ್ರೆ ಹೊಗೆ ಪ್ರೋಗ್ರಾಂ ಅಂತಾ ಇಂಟಿಲಿಜೆನ್ಸ್‌ ರಿಪೋರ್ಟ್‌ ಹೋಗೈತೆ

ಚೇರ್ಮನ್ರು: ಹೌದೇನ್ಲಾ

ಅಮಾಸೆ: ಹೌದ್‌ ಕಣೇಳಿ. ಅದ್ಕೆ ಬಿಜಾಪುರ್‌ ಗೋಲ್‌ ಗ‌ುಂಬಸ್‌ ಎಕ್ಸ್‌ಪ್ರೆಸ್‌ ಯತ್ನಾಳ್‌ ಸಾಹೇಬ್ರುಗೆ ಇನ್‌ಮ್ಯಾಕೆ ಯಡ್ನೂರಪ್ಪ ತಂಟೇಗ್‌ ಹೋಗ್‌ ಬಾರ್ಧು ಅಂತಾ ಅಮಿತ್‌ ಸಾ ಹೆಡ್‌ಮಾಸ್ಟ್ರು ಹೇಳ್‌ ಬುಟ್ಟವ್ರಂತೆ.

ಚೇರ್ಮನ್ರು: ಆ ರೇಂಜ್‌ಗೆ ಅಮಿತ್‌ ಸಾ ಹೇಳವ್ರಾ

ಅಮಾಸೆ: ರಾಜಾಹುಲಿ ಫ‌ುಲ್‌ ಗರಂ ಆಗಿದ್ರಂತೆ. ನಂಕೆಲ್ಲಾ ಗೊತ್ತೈತೆ. ನನ್‌ ಮ್ಯಾಲೆ ಯತ್ನಾಳ್‌ ಛೂ ಬಿಟ್ಟವ್ರೆ. ಇಂಗೇ ಮಾಡ್ತಾ ಇರ್ಲಿ ನಾನೂ ಒಂದ್‌ ಕೈ ನೋಡ್ಕೋತೀನಿ ಅಂತಾ ಮಾಂಜಾ ಕೊಟ್ಟಿದ್ರಂತೆ. ಅದ್ಕೆ ಅಮಿತ್‌ ಸಾ ಫ‌ುಲ್‌ ತಂಡಾ ಆಗೋಬುಟ್ಟು ಮೇರೆ ಸಾತ್‌ ಆಜಾವ್‌ ಯಡ್ನೂರಪ್ಪಾಜಿ ಅಂತಾ ಹುಬ್ಲಿನಾಗೆ ರೋಡ್‌ ಸೋ ಮಾಡಿದ್ರು.

ಚೇರ್ಮನ್ರು: ಸಿದ್ರಾಮಣ್ಣೋರು ಕೋಲಾರ್ನಾಗೆ ನಿಲ್ತಾರೇನ್ಲಾ

ಅಮಾಸೆ: ಅಲ್‌ ನಡೀತಿರೋ ಡೈಲಿ ಸೀರಿಯಲ್‌ ನೋಡುದ್ರೆ ಹುಲಿಯಾನ್‌ ಯಾಮಾರ್ಬಿಟ್ರಾ ಅನ್‌ಸ್ತದೆ ಸಾ…

ಚೇರ್ಮನ್ರು: ಯಕ್ಲಾ ಏನಾಯ್‌ ತ್ಲಾ

ಅಮಾಸೆ: ಸಿದ್ರಾಮಣ್ಣೋರು ಕ್ಯಾಂಡೇಟ್‌ ಅಂದೇಟ್ಗೆ ಫ‌ುಲ್‌ ಜೋಸ್‌ ಇತ್ತೇಳಿ. ಆಮ್ಯಾಕೆ ಡೇ ಬೈ ಡೇ ಟೆನ್ಸನ್‌ ಆಗೈತೆ. ಲೋಕಲ್‌ ಇರ್ಲಿ, ಸಾಬ್ರು ಜಾಸ್ತಿ ಅಂತಾ ಸಿದ್ರಾಮಣ್ಣೋರ್‌ ಬಂದವ್ರೆ ಅಂತಾ ಕಿಂಡಲ್‌ ಮಾಡ್ತಾವ್ರೆ. ಸಿದ್ರಾಮಣ್ಣೋರು ಫಿಪ್ಟೀನ್‌ ಡೇಸ್‌ ಅಲ್ಲೇ ಇದ್ಕಂಡ್‌ ಪಿಚ್‌ ರೆಡಿ ಮಾಡುದ್ರೆ ಸೈ. ನಾಮಿನೇಸನ್‌ ಹಾಕ್‌ಬುಟ್ಟು ವಾಪಸ್‌ ಬತ್ತೀನಿ ಅಂದ್ರೆ ರೈಯ ರೈಯ ಪುಂಗ್‌ನೂರ್‌ ಅಷ್ಟೇ ಅಂತಾ ಹೇಳ್ತಾವ್ರೆ.

ಚೇರ್ಮನ್ರು: ಭವಾನಿ ಮೇಡಂ ನಾ ಮಾಟೇ ಸಾಸನಂ ರೇಂಜ್ಗೆ ಕ್ಯಾಂಡೇಟ್‌ ಅಂತಾ ಡಿಕ್ಲೇರ್‌ ಮಾಡವ್ರಂತೆ ಹೌದೇನ್ಲಾ

ಅಮಾಸೆ: ಹೌದೇಳಿ, ಫ್ಯಾಮ್ಲಿನಾಗೆ ಡಿಸೈಡ್‌ ಆಗೈತೆ ನಾನ್‌ ಕಂಟೆಸ್ಟ್‌ ಮಾಡ್ತೀನಿ ಅಂತಾ ಕಾನ್ವಾಸ್‌ ಸುರು ಹಚ್‌ಕಂಡವ್ರೆ.

ಚೇರ್ಮನ್ರು: ಕುಮಾರಣ್ಣೋರು ನೋ ಅಂದವ್ರೆ

ಅಮಾಸೆ: ರೇವಣ್ಣೋರು ಜತ್ಗೆ ಅವ್ರೆ. ಪ್ರಜ್ವಲ್‌, ಸೂರಜ್‌ ಮಮ್ಮಿಗೆ ಜೈ ಅಂತಾವ್ರೆ. ದೊಡ್‌ಗೌಡ್ರು ಎಂಟ್ರಿ ಆಗಿಲ್ಲಾಂದ್ರೆ ಲಾ ಅಂಡ್‌ ಆರ್ಡರ್‌ ಪ್ರಾಬ್ಲಿಂ ಆಯ್ತದೆ ಅಂತಾ ಹೊಳೇನರ್ಸೀಪುರ ಹೈಕ್ಳು ಹೇಳ್ತಾವ್ರೆ

ಚೇರ್ಮನ್ರು: ಸಾಮ್ರಾಟ್‌ ಅಸೋಕಣ್ಣೋರ್ಗೆ ಯಾಕ್ಲಾ ಗೋ ಬ್ಯಾಕ್‌ ಅಂದ್ರಂತೆ ಮಂಡ್ಯ ಹೈಕ್ಳು

ಅಮಾಸೆ: ಅದೆಲ್ಲಾ ಸೈನಿಕ ವರ್ಸೆ. ಗೋಪಾಲಣ್ಣೋರ್‌ ಜತ್ಗೆ ಅಂಡರ್‌ ಸ್ಟಾಂಡಿಂಗ್‌ ಅಂತಾ ಪಸರ್‌ ಐತೆ.

ಚೇರ್ಮನ್ರು: ಮಂಡ್ಯಾದಾಗೆ ಸುಮಕ್ಕ ಎಂಎಲ್‌ಎ ಎಲೆಕ್ಸನ್‌ ನಿಂತ್ಕೋತಾರಂತೆ ಹೌದೇನ್ಲಾ

ಅಮಾಸೆ: ಅಂಗಂತಾವ್ರೆ. ನಿಖೀಲ್‌ ಅಣ್ಣೋರ್‌ ರಾಮ್‌ನಗ್ರ ಫಿಕ್ಸ್‌ ಆದ್ಮೇಕೆ, ಸುಮಕ್ಕೋರು ಇದಾನ್‌ಸೌದಾಗ್‌ ಬತ್ತಾರಂತೆ, ಪ್ರಿನ್ಸ್‌ ಅಭಿ ಎಂಪಿಗ್‌ ನಿಂತ್ಕೊತಾರಂತೆ. ಅದ್ಕೆ ಕುರುಕ್ಷೇತ್ರ ಮುನಿ ಅಣ್ಣೋರು ರಮ್ಯಾ ಮೇಡಂಗೆ ವೆಲ್‌ಕಮ್‌ ಟು ಕಮ್ಲ ಅಂದವ್ರಂತೆ. ನೆಕ್ಟ್ಸೈ ಕಿತಾ ಎಂಪಿ ಎಲೆಕ್ಸನ್‌ ಗೆ ಅವ್ರೇ ಕ್ಯಾಂಡೇಟ್‌ ಅಂತಾನೂ ಪಸರ್‌ ಐತೆ. ಅಂಗಾರೆ ಲಕ್ಷ್ಮಿ ಅಕ್ಕೋರ್‌ ಏನ್‌ ಮಾಡ್ತಾರೋ ನೋಡ್ಬೇಕು.

ಚೇರ್ಮನ್ರು: ಇಬ್ರಾಹಿಮ್‌ ಸಾಬ್ರು ಏನ್‌ ಮಾಡ್ತಾವ್ರೆ

ಅಮಾಸೆ: ಅವ್ರು ಕುಮಾರಣ್ಣಾ ಸಿಎಂ ಆಗಿಲ್ಲಾ ಅಂದ್ರೆ ನಾನ್‌ ರಿಟೈರ್ಡ್ ಆಗೋಯ್ತೀನಿ. ಕಸಮ್‌ಸೆ ಅಂತಾ ಗಲ್ಲಿ ಗಲ್ಲಿನಾಗೆ ಮೈಕ್‌ ಕಿತ್ತೋಗೋತರಾ ಹೇಳ್ತಾವ್ರೆ. ಅವ್ರುದು ಸನ್‌ ಹುಮ್ನಾಬಾದ್‌ಸೆ ಅಬ್ಟಾ ಜಾನ್‌ ಮೇರಾ ಕ್ಯಾ ಹೋಗಾ ಅಂತಾ ಕೇಳ್ತಾವ್ರೆ. ನೋಡುಮಾ ಏನೇನ್‌ ಆಯ್ತದೋ. ನನ್‌ ಹೆಂಡ್ರು ಮಟನ್‌ ಕೈಮಾ ತತ್ತಾ ಅಂದವ್ರೆ ಬತ್ತೀನಿ ಸಾ.

ಎಸ್.ಲಕ್ಷ್ಮೀನಾರಾಯಣ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next