Advertisement

ಹತ್ತು ವರ್ಷಗಳ ಬಳಿಕ ರಮ್ಯಾ ಕಮ್ ಬ್ಯಾಕ್: ಡಾಲಿ ಜೊತೆಯಾದ ಮೋಹಕ ತಾರೆ

10:49 AM Nov 07, 2022 | Team Udayavani |

ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ತಾರೆ ರಮ್ಯಾ ಅವರು ಕೆಲ ದಿನಗಳ ಹಿಂದಷ್ಟೇ ಕಮ್ ಬ್ಯಾಕ್ ಮಾಡುವುದಾಗಿ ಘೋಷಣೆ ಮಾಡಿದ್ದರು. ರಾಜ್ ಬಿ ಶೆಟ್ಟಿ ನಿರ್ದೇಶನದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದಲ್ಲಿ ರಮ್ಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಘೋಷಿಸಲಾಗಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ರಮ್ಯಾ ಜಾಗಕ್ಕೆ ಸಿರಿ ರವಿಕುಮಾರ್ ಅವರು ಬಂದಿದ್ದರು. ಇದರಿಂದ ಬೇಸರಗೊಂಡಿದ್ದ ರಮ್ಯಾ ಫಾನ್ಸ್, ಕಮ್ ಬ್ಯಾಕ್ ಯಾವಾಗ ಮಾಡುತ್ತೀರಿ ಎಂದು ಕೇಳುತ್ತಿದ್ದರು. ಇದಕ್ಕೆ ಇದೀಗ ಉತ್ತರ ಸಿಕ್ಕಿದೆ.

Advertisement

ಹೌದು, ಸ್ವತಃ ರಮ್ಯಾ ಅವರೇ ಈ ಬಗ್ಗೆ ಘೋಷಿಸಿಕೊಂಡಿದ್ದಾರೆ. ರತ್ನನ್ ಪ್ರಪಂಚ ಚಿತ್ರವನ್ನು ನಿರ್ದೇಶನ ಮಾಡಿದ್ದ ರೋಹಿತ್ ಪದಕಿ ಅವರ ಮುಂದಿನ ಚಿತ್ರ ‘ಉತ್ತರಕಾಂಡ’ ದ ಮೂಲಕ ರೋಹಿತ್ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ‘ಉತ್ತರಕಾಂಡ’ ಚಿತ್ರದಲ್ಲಿ ಡಾಲಿ ಧನಂಜಯ ಅವರಿಗೆ ನಾಯಕಿಯಾಗಿ ರಮ್ಯಾ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಸೂರ್ಯ ಕುಮಾರ್ ಬ್ಯಾಟಿಂಗ್ ನೋಡುವುದೇ ಚಂದ..: ಕೋಚ್ ದ್ರಾವಿಡ್ ಮೆಚ್ಚುಗೆ

ಈ ಬಗ್ಗೆ ಬರೆದುಕೊಂಡಿರುವ ರಮ್ಯಾ, ಹತ್ತು ವರ್ಷಗಳ ನಂತರ ‘ಉತ್ತರಕಾಂಡ’ದ ಮೂಲಕ ನಾನು ಬೆಳ್ಳಿ ಪರದೆಗೆ ಹಿಂತಿರುಗುತ್ತಿದ್ದೇನೆ. ಈ ಹಿಂದೆ ‘ರತ್ನನ್ ಪ್ರಪಂಚ’ದಲ್ಲಿ ಮಾಡೋಕ್ಕಾಗ್ಲಿಲ್ಲ ಎಂಬ ಬೇಸರವಿತ್ತು. ಆದರೆ ಈಗ ಅದೇ ತಂಡದ ಜೊತೆ ಸಿನಿಮಾ ಮಾಡುತ್ತಿರುವುದು ತುಂಬಾ ಸಂತೋಷದ ವಿಚಾರ. ಸ್ಕ್ರಿಪ್ಟ್ ಚಿಂದಿಯಾಗಿದೆ. ಧನು, ಕಾರ್ತಿಕ್, ಯೋಗಿ ಇತ್ತೀಚಿನ ದಿನಗಳಲ್ಲಿ ನನಗೆ ಬಹಳ ಹತ್ತಿರವಾದವರು. ತುಂಬಾ ಆಪ್ತರು ಕೂಡಾ. ರೋಹಿತ್ ಪದಕಿ, ಅರವಿಂದ ಕಶ್ಯಪ್, ಚರಣ್ ರಾಜ್, ವಿಶ್ವಾಸ್, ದೀಪು.. ಈ ದೈತ್ಯ ಪ್ರತಿಭೆಗಳ ಜೊತೆ ಕೆಲಸ ಮಾಡಲು ಕಾಯ್ತಾ ಇದ್ದೀನಿ. ಮುಂದಿನ ವರ್ಷದ ಆರಂಭದಲ್ಲಿ ಚಿತ್ರೀಕರಣ ಶುರುವಾಗಲಿದೆ. ತುದಿಗಾಲಲ್ಲಿದ್ದೇನೆ. ನಿಮ್ಮ ಪ್ರೀತಿಗೆ ಚಿರಋಣಿ.. ಇನ್ ಮ್ಯಾಲಿಂದ ಫುಲ್ ಗುದ್ದಾಮ್ ಗುದ್ದಿ..!” ಎಂದಿದ್ದಾರೆ.

ಚಿತ್ರದ ಶೂಟಿಂಗ್ ಜನವರಿ ತಿಂಗಳಿಂದ ಪ್ರಾರಂಭವಾಗಲಿದ್ದು, ಅರವಿಂದ ಕಶ್ಯಪ್ ಕ್ಯಾಮರಾ, ಚರಣ್ ರಾಜ್ ಸಂಗೀತ ಸಂಯೋಜನೆ ಇರುಲಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next