Advertisement

ಭಾರತ ನಮ್ಮಲ್ಲಿ ಬರದಿದ್ದರೆ, ಪಾಕಿಸ್ಥಾನವು ವಿಶ್ವಕಪ್ ನಲ್ಲಿ ಆಡುವುದಿಲ್ಲ: ರಮೀಜ್ ರಾಜಾ ಎಚ್ಚರಿಕೆ

02:25 PM Nov 26, 2022 | Team Udayavani |

ಲಾಹೋರ್: ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾ ಕಪ್‌ ನಲ್ಲಿ ಭಾರತ ತಂಡ ಭಾಗವಹಿಸದಿದ್ದರೆ, ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ತಮ್ಮ ತಂಡವೂ ಆಡುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ರಮೀಜ್ ರಾಜಾ ಹೇಳಿದ್ದಾರೆ.

Advertisement

ಮುಂದಿನ ವರ್ಷ ಈ ಎರಡೂ ಕೂಟಗಳು ನಡೆಯಲಿದ್ದು, ವಿಶ್ವಕಪ್ ಗಿಂತ ಮೊದಲು ಏಷ್ಯಾಕಪ್ ನಡೆಯಲಿದೆ ಎನ್ನುವುದು ಗಮನಿಸಬೇಕಾದ ವಿಚಾರ.

ಕಳೆದ ಎರಡು ವರ್ಷಗಳಿಂದ ಪಾಕಿಸ್ತಾನವು ಗುಣಮಟ್ಟದ ಕ್ರಿಕೆಟ್ ಆಡುತ್ತಿದೆ. ಅಲ್ಲದೆ ಭಾರತವನ್ನು ಎರಡು ಬಾರಿ (ಟಿ20 ವಿಶ್ವಕಪ್ 2021 ಮತ್ತು ಏಷ್ಯಾ ಕಪ್ 2022) ಸೋಲಿಸಿದೆ. ಒಂದು ವೇಳೆ ಏಷ್ಯಾ ಕಪ್‌ ಗಾಗಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸದಿರಲು ನಿರ್ಧರಿಸಿದರೆ, ಈ ವಿಷಯದಲ್ಲಿ ಪಿಸಿಬಿಯ ನಿಲುವು ದೃಢವಾಗಿರುತ್ತದೆ ಎಂದು ರಮಿಜ್ ಹೇಳಿದರು.

ಇದನ್ನೂ ಓದಿ:ಟ್ರೆಂಡಿ ಹುಡ್ಗನ ಪ್ರೀತಿ ಗೀತಿ ಇತ್ಯಾದಿ….: ‘ರೇಮೊ’ ಚಿತ್ರ ವಿಮರ್ಶೆ

“ಒಂದು ವೇಳೆ ಅವರು ಪಾಕಿಸ್ಥಾನಕ್ಕೆ ಬಂದರೆ ನಾವು ವಿಶ್ವಕಪ್ ಗೆ ಭಾರತಕ್ಕೆ ಹೋಗುತ್ತೇವೆ. ಅವರು ಬರದಿದ್ದರೆ ನಾವು ಹೋಗುವುದಿಲ್ಲ. ಅವರು ಪಾಕಿಸ್ಥಾನ ಇಲ್ಲದೆ ಆಡಲಿ. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ ನಲ್ಲಿ ಪಾಕಿಸ್ತಾನ ಭಾಗವಹಿಸದಿದ್ದರೆ, ಅದನ್ನು ಯಾರು ನೋಡುತ್ತಾರೆ? ನಾವು ಆಕ್ರಮಣಕಾರಿ ವಿಧಾನವನ್ನು ಅನುಸರಿಸುತ್ತೇವೆ, ನಮ್ಮ ತಂಡವು ಉತ್ತಮ ಪ್ರದರ್ಶನವನ್ನು ತೋರಿಸುತ್ತಿದೆ. ನಾವು ವಿಶ್ವದ ಅತಿದೊಡ್ಡ ವ್ಯಾಪಾರ ಮಾಡುವ ಕ್ರಿಕೆಟ್ ತಂಡವನ್ನು ಸೋಲಿಸಿದ್ದೇವೆ, ನಾವು ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಆಡಿದ್ದೇವೆ. ಪಾಕಿಸ್ತಾನ ಕ್ರಿಕೆಟ್ ತಂಡವು ಒಂದು ವರ್ಷದಲ್ಲಿ ಬಿಲಿಯನ್ ಡಾಲರ್ ಆರ್ಥಿಕತೆಯ ಮಂಡಳಿಯನ್ನು ಎರಡು ಬಾರಿ ಸೋಲಿಸಿದೆ” ಎಂದು ರಮೀಜ್ ರಾಜಾ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next