Advertisement

Rameshwaram Cafe Case:ದೇಶದ ಹಿತರಕ್ಷಣೆ ಬಂದಾಗ ಪಕ್ಷ ಮುಖ್ಯ ಅಲ್ಲ: ಎಂ.ಬಿ.ಪಾಟೀಲ್‌

06:53 PM Mar 03, 2024 | Shreeram Nayak |

ವಿಜಯಪುರ:ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಅತ್ಯಂತ ಸೂಕ್ಷ್ಮ ಹಾಗೂ ಗಂಭೀರವಾಗಿದ್ದು ತನಿಖೆ ಹಂತದಲ್ಲಿ ಪ್ರತಿಕ್ರಿಯೆ ನೀಡುವುದು ಸರಿಯಾದ ಕ್ರಮವಲ್ಲ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಪ್ರಕರಣ ಉದ್ದೇಶಪೂರಿತ ಘಟನೆ ಎಂದು ಸಚಿವ ಶರಣಪ್ರಕಾಶ ಪಾಟೀಲ ಹೇಳಿಕೆ ನೀಡಿರುವುದನ್ನು ಕೇಳಿಲ್ಲ. ಆ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಯಾರು ಕೃತ್ಯ ಎಸಗಿದ್ದಾರೆ, ಏಕೆ ಎಸಗಿದ್ದಾರೆ ಎಂಬುದನ್ನು ಪತ್ತೆ ಹಚ್ಚುವುದಕ್ಕಾಗಿ ತನಿಖೆ ನಡೆಯುತ್ತಿದೆ.

ಸ್ಫೋಟ ಕೃತ್ಯ ಉಗ್ರರಿಂದ ಆಗಿರುವುದೋ, ಬೇರೆ ಯಾರಾದರೂ ಎಸಗಿದ್ದಾರೋ ಎಂಬುದು ತನಿಖೆಯಿಂದ ಹೊರ ಬರಲಿದೆ. ಸ್ಫೋಟ ಕೃತ್ಯ ಎಸಗಿದವರಿಗೆ ಶಿಕ್ಷೆ ಆಗಲೇಬೇಕು. ಇದರ ಹಿಂದಿರುವ ಎಲ್ಲ ಅಂಶಗಳನ್ನೂ ಪೂರ್ಣವಾಗಿ ತನಿಖೆಯಿಂದ ಹೊರ ತೆಗೆಯಬೇಕಿದೆ. ದೇಶದ ಹಿತರಕ್ಷಣೆ ಬಂದಾಗ ಪಕ್ಷ ಮುಖ್ಯವಾಗುವುದಿಲ್ಲ. ಬದಲಾಗಿ ದೇಶ ಹಾಗೂ ಜನರ ರಕ್ಷಣೆಯೇ ಮುಖ್ಯವಾಗಲಿದೆ. ರಾಷ್ಟ್ರೀಯ ಹಿತಾಸಕ್ತಿಯಿಂದ ಕೆಲಸ ಮಾಡುತ್ತೇವೆ. ಇಂಥ ವಿಷಯದಲ್ಲಿ ರಾಜಕೀಯ ಬೆರೆಸುವ ಕೆಲಸ ಮಾಡಬಾರದು ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next