ನಿವಾಸಕ್ಕೆ ಮಂಗಳವಾರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿ ನೀಡಲಿದ್ದಾರೆ ಎನ್ನಲಾಗಿದ್ದು ತೀವ್ರ ಕುತೂಹಲ ಮೂಡಿಸಿದೆ.
Advertisement
ಗಣೇಶ್ ಮತ್ತು ಆನಂದ್ಸಿಂಗ್ ನಡುವೆ ಗಲಾಟೆ ನಡೆದು 25 ದಿನ ಕಳೆದಿದೆ. ಬಂಧನದ ಭೀತಿಯಿಂದ ಗಣೇಶ್ ತಲೆಮರೆಸಿಕೊಂಡಿದ್ದಾರೆ. ಆದರೆ, ಹಲ್ಲೆಗೊಳಗಾಗಿದ್ದ ಆನಂದ್ಸಿಂಗ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೂ, ರಮೇಶ್ ಜಾರಕಿಹೊಳಿ ಒಮ್ಮೆಯೂ ಅವರ ಆರೋಗ್ಯ ವಿಚಾರಿಸಿಲ್ಲ. ಆದರೆ, ಗಣೇಶ್ ನಿವಾಸಕ್ಕೆ ಮಂಗಳವಾರ ಭೇಟಿ ನೀಡುತ್ತಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಕಾಂಗ್ರೆಸ್ ಅತೃಪ್ತ ಶಾಸಕರ ಗುಂಪಿನ ನಾಯಕ ಎಂದೇ ಬಿಂಬಿಸಲ್ಪಟ್ಟಿರುವ ರಮೇಶ್ ಜಾರಕಿಹೊಳಿ ಕಂಪ್ಲಿ ಶಾಸಕರನ್ನು ಭೇಟಿಯಾಗುತ್ತಿರುವುದು ಮೈತ್ರಿ ಸರಕಾರದಲ್ಲಿನ ಅತೃಪ್ತಿ ಇನ್ನೂ ಶಮನಗೊಂಡಿಲ್ಲವೇ ಎಂಬ ಪ್ರಶ್ನೆ ಮೂಡಿಸಿದೆ.