Advertisement

ಕತ್ತಿ –ಜಾರಕಿಹೊಳಿ ಕುಟುಂಬ ವಿದ್ಯಾ ಜೀವನದಿಂದಲೂ ಕೂಡಿ ಬಂದಿದೆ: ರಮೇಶ ಜಾರಕಿಹೊಳಿ

12:44 PM Sep 07, 2022 | Team Udayavani |

ಗೋಕಾಕ: ಆಹಾರ ನಾಗರಿಕ ಮತ್ತು ಅರಣ್ಯ ಸಚಿವ ಉಮೇಶ ಕತ್ತಿಯವರ ನಿಧನಕ್ಕೆ ಶಾಸಕ ರಮೇಶ ಜಾರಕಿಹೊಳಿ ತೀವೃ ಸಂತಾಪ ಸೂಚಿಸಿದ್ದಾರೆ.

Advertisement

ಕತ್ತಿ ಹಾಗೂ ಜಾರಕಿಹೊಳಿ ಕುಟುಂಬ ವಿದ್ಯಾ ಜೀವನದಿಂದಲೂ ಕೂಡಿ ಬಂದಿದೆ. ಉಮೇಶ ಕತ್ತಿಯವರು ಉತ್ತರಕರ್ನಾಟಕದ ಬಗ್ಗೆ ವಿಶೇಷ ಕಾಳಜಿಹೊಂದಿರುವ ವ್ಯಕ್ತಿಯಾಗಿದ್ದರು, ಅವರ ಅಗಲಿಕೆಯಿಂದ ಉತ್ತರಕರ್ನಾಟಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಉಮೇಶ ಕತ್ತಿ ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದವರು, ಅವರ ತಂದೆ ವಿಶ್ವನಾಥ ಕತ್ತಿ ಅವರ ಅಕಾಲಿಕ ನಿಧನದಿಂದ ಅನಿವರ‍್ಯವಾಗಿ ರಾಜಕೀಯ ಪ್ರವೇಶ ಮಾಡಬೇಕಾಯಿತು.

ಬಾಲ್ಯದ ಸ್ನೇಹಿತ ಉಮೇಶ ಕತ್ತಿ ನಮ್ಮನ್ನು ಅಗಲಿದ್ದರಿಂದ ಮನಸ್ಸಿಗೆ ತುಂಬ ನೋವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ, ಅವರ ಕುಟುಂಬ ವರ್ಗದವರಿಗೆ ಮತ್ತು ಅಪಾರ ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ, ಅವರ ದುಃಖದಲ್ಲಿ ನಾವು ಭಾಗಿಯಾಗಿದ್ದೆವೆ ಎಂದು ಸಂತಾಪ ವ್ಯಕ್ತಪಿಸಿದ್ದಾರೆ.

ಇದನ್ನೂ ಓದಿ : ಸೋಲಿನ ಹೊರತಾಗಿಯೂ ಏಷ್ಯಾಕಪ್‌ ನಲ್ಲಿ ಸಚಿನ್‌ ತೆಂಡೂಲ್ಕರ್ ದಾಖಲೆ ಮುರಿದ ರೋಹಿತ್‌ ಶರ್ಮಾ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next