ಅಥಣಿ: ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಶನಿವಾರ ಆರೆಸ್ಸೆಸ್ ಮುಖಂಡ ಅರವಿಂದ ರಾವ್ ದೇಶಪಾಂಡೆ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಸಂಕ್ರಮಣದ ಬಳಿಕ ರಾಜ್ಯ ಸರಕಾರದ ಸಂಪುಟ ವಿಸ್ತರಣೆ ಸಂದರ್ಭ ತಮ್ಮನ್ನು ಪರಿಗಣಿಸು ವಂತೆ ಕೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದ್ದು, ರಮೇಶ ಜಾರಕಿಹೊಳಿಗೆ ಮತ್ತೆ ಸಂಪುಟ ದರ್ಜೆ ಸಚಿವ ಸ್ಥಾನ ಸಿಗಲಿದೆ ಎನ್ನುವ ಮಾತುಗಳು ಅವರ ಬೆಂಬಲಿ ಗರಿಂದ ಕೇಳಿಬರುತ್ತಿವೆ.
ಅರವಿಂದ ರಾವ್ ಅವರನ್ನು ಭೇಟಿಯಾಗಿ ಒಂದು ತಾಸು ಮಾತುಕತೆ ನಡೆಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾ ಡಿದ ಅವರು, ಎಲ್ಲ ವಿಷಯ ಮಾಧ್ಯಮದ ಮುಂದೆ ಹೇಳಲು ಸಾಧ್ಯವಿಲ್ಲ. ಆರೆಸ್ಸೆಸ್ ಹಿರಿಯ ಮುಖಂಡ ಅರವಿಂದಜೀ ಅವರನ್ನು ಸಂಕ್ರಮಣ ನಿಮಿತ್ತ ಭೇಟಿಯಾಗಿ ಶುಭ ಕೋರಿದ್ದೇ ನೆಯೇ ಹೊರತು ರಾಜಕಾರಣದ ಮಾತಿಲ್ಲ ಎಂದರು.
ಇದನ್ನೂ ಓದಿ:ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕೇವಲ 24,000 ಪ್ರೇಕ್ಷಕರಿಗೆ ಮಾತ್ರ ಅವಕಾಶ
Related Articles
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಸಂಪುಟದಲ್ಲಿ ಹೊಸಬರಿಗೆ ಅವಕಾಶದ ಜತೆಗೆ ಮಹೇಶ ಕುಮಠಳ್ಳಿ ಅಥವಾ ತಮಗೆ ಸಚಿವ ಸ್ಥಾನದ ವಿಚಾರವಾಗಿ ಮುಂತಾದವುಗಳನ್ನು ಚರ್ಚಿಸಿ ದ್ದೇವೆ. ಎಲ್ಲವನ್ನೂ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದರು.