ಹುಬ್ಬಳ್ಳಿ: ಮಾಜಿ ಸಚಿವ ರಮೇಶ ಜಾರಕಿಹೊಳಿ ಬೆಳ್ಳಂಬೆಳಿಗ್ಗೆ ಇಲ್ಲಿನ ಆದರ್ಶ ನಗರದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಆಗಮಿಸಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು.
ಇಂದು ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಚುನಾವಣೆ ಕುರಿತು ಮಹತ್ತರ ಚರ್ಚೆ ನಡೆಯಲಿದೆ. ಈ ಸಂದರ್ಭದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಮುಖ್ಯಮಂತ್ರಿಗಳ ನಿವಾಸಕ್ಕೆ ಭೇಟಿ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಅಥಣಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಹೇಶ ಕುಮಟಳ್ಳಿ ಪರವಾಗಿ ಬ್ಯಾಂಟಿಗ್ ಮಾಡಲು ಆಗಮಿಸಿರುವ ಸಾಧ್ಯತೆಗಳೆ ಹೆಚ್ಚು ಎನ್ನಲಾಗಿದೆ.
ಸುಮಾರು ಒಂದು ಗಂಟೆಯ ನಂತರ ಹೊರ ಬಂದ ರಮೇಶ ಜಾರಕಿಹೊಳಿ ಅವರನ್ನು ಅಥಣಿ ಟಿಕೆಟ್ ವಿಚಾರವನ್ನು ಸುದ್ದಿಗಾರರು ಪ್ರಶ್ನಿಸಿದರು. ಇದು ಪಕ್ಷದ ಹೈಕಮಾಂಡ್ ಗೆ ಬಿಟ್ಟ ವಿಚಾರ. ಈ ಕುರಿತು ನಮ್ಮ ಅಭಿಪ್ರಾಯ ಹೇಳಿದ್ದೇವೆ. ಮೀಸಲಾತಿ ಹಂಚಿಕೆ ಒಳ್ಳೆಯ ಕಾರ್ಯವಾಗಿದೆ. ಹಿಂದುಳಿದವರ ಮೀಸಲಾತಿ ಕಸಿದುಕೊಂಡಿಲ್ಲ ಎಂದು ಹೊರಟರು.
ಶಾಸಕ ರಮೇಶ ಜಾರಕಿಹೊಳಿ ತೆರಳುತ್ತಿದ್ದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗಮಿದರು. ಅದಾಗಲೇ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಮುಖ್ಯಮಂತ್ರಿಗಳ ನಿವಾಸದಲ್ಲಿದ್ದರು. ಕೆಲ ಸಮಯದ ನಂತರ ಮುಖ್ಯಮಂತ್ರಿ ಬೊಮ್ಮಾಯಿ ಸೇರಿಸಂತೆ ಮೂವರು ಮನೆಯಿಂದ ಹೊರಟರು.